Vande Bharat Express: ಕರ್ನಾಟಕದ 5 ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು

ಬೆಂಗಳೂರು, ಮಾರ್ಚ್‌ 03: ಭಾರತೀಯ ರೈಲ್ವೆ ವಂದೇ ಭಾರತ್ ಸ್ಲೀಪರ್ ರೈಲುಗಳ ಸಂಚಾರಕ್ಕೆ ಸಿದ್ಧತೆಯನ್ನು ನಡೆಸಿದೆ. ಮುಂಬೈ-ಅಹಮದಾಬಾದ್ ಬುಲೆಟ್ ಟ್ರೈನ್ ಮಾರ್ಗದಲ್ಲಿ ಮೊದಲು ಈ ರೈಲು ಸಂಚಾರ ನಡೆಸಲಿದೆ ಎಂದು ಅಂದಾಜಿಸಲಾಗಿದೆ. ದೇಶದ ಇತರ ಯಾವುದೇ ಮಾರ್ಗದಲ್ಲಿ ಸ್ಲೀಪರ್ ಮಾದರಿ ರೈಲುಗಳನ್ನು ಓಡಿಸುವುದಾಗಿ ಇನ್ನೂ ಘೋಷಣೆ ಮಾಡಿಲ್ಲ. ರೈಲ್ವೆ ಖಾತೆ ರಾಜ್ಯ ಸಚಿವರು ಕರ್ನಾಟಕದ ವಿ. ಸೋಮಣ್ಣ ಆಗಿರುವ ಕಾರಣ ರಾಜ್ಯದಲ್ಲಿಯೂ ವಂದೇ ಭಾರತ್ ಸ್ಲೀಪರ್ ರೈಲು ಓಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

2024ರ ಡಿಸೆಂಬರ್‌ನಲ್ಲಿ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಮಾತನಾಡಿ, "ದೇಶದಲ್ಲಿ ದೀರ್ಘ ಮತ್ತು ಮಧ್ಯಮ ದೂರದ ಪ್ರಯಾಣಕ್ಕಾಗಿ ಈಗಾಗಲೇ 10 ವಂದೇ ಭಾರತ್ ಸ್ಲೀಪರ್ ರೈಲುಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಮೊದಲ ಮೂಲ ಮಾದರಿಯನ್ನು ಈಗಾಗಲೇ ತಯಾರಿಸಲಾಗಿದ್ದು, ಅದನ್ನು ಪ್ರಾಯೋಗಿಕ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ" ಎಂದು ಹೇಳಿದ್ದರು.

Demand For Sleeper Vande Bharat Express Train In Five Routes

"200 ವಂದೇ ಭಾರತ್ ಸ್ಲೀಪರ್ ಬೋಗಿಗಳ ನಿರ್ಮಾಣ ಒಪ್ಪಂದವನ್ನು ತಂತ್ರಜ್ಞಾನ ಪಾಲುದಾರರಿಗೆ ನೀಡಲಾಗಿದೆ. ಆದರೆ, ಈ ರೈಲುಗಳು ಯಾವಾಗ ಸೇವೆಗೆ ಲಭ್ಯವಾಗುತ್ತವೆ ಎಂಬುದು ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಳ್ಳುವುದರ ಮೇಲೆ ಅವಲಂಬಿತವಾಗಿದೆ" ಎಂದು ತಿಳಿಸಿದ್ದರು.

ಕರ್ನಾಟಕದಲ್ಲಿ 5 ಮಾರ್ಗ: ಕರ್ನಾಟಕದಲ್ಲಿ 5 ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಓಡಿಸಬೇಕು ಎಂದು ಬೇಡಿಕೆ ಇಡಲಾಗಿದೆ. ಈ ಕುರಿತ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದರೆ ಈ ಬೇಡಿಕೆ, ಪ್ರಸ್ತಾವನೆ ಕುರಿತು ರೈಲ್ವೆ ಇಲಾಖೆಯ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಮಾಹಿತಿಯಂತೆ ಕರ್ನಾಟಕದಲ್ಲಿ 5 ಮಾರ್ಗದಲ್ಲಿ ರೈಲು ಓಡಿಸಲು ಬೇಡಿಕೆ ಇದೆ.

1. ಬೆಂಗಳೂರು-ಹುಬ್ಬಳ್ಳಿ-ಬೆಳಗಾವಿ
2. ಮೈಸೂರು-ಬೆಂಗಳೂರು-ಕಲಬುರಗಿ
3. ಬೆಂಗಳೂರು-ಬಾಗಲಕೋಟೆ-ವಿಜಯಪುರ
4. ಬೆಂಗಳೂರು-ಮಂಗಳೂರು-ಉಡುಪಿ-ಕಾರವಾರ
5. ಮೈಸೂರು-ಬೆಂಗಳೂರು-ಹೈದರಾಬಾದ್

ಡಿಸೆಂಬರ್ 2024ರಂತೆ ದೇಶಾದ್ಯಂತ ಬ್ರಾಡ್ ಗೇಜ್ ವಿದ್ಯುದ್ದೀಕರಿಸಿದ ಮಾರ್ಗಗಳಲ್ಲಿ 136 ವಂದೇ ಭಾರತ್ ರೈಲುಗಳು ಸಂಚಾರವನ್ನು ನಡೆಸುತ್ತಿವೆ. ಆದರೆ ವಂದೇ ಭಾರತ್ ಸ್ಲೀಪರ್ ಮಾದರಿ ರೈಲುಗಳ ಸಂಚಾರ ಇನ್ನೂ ಸಹ ಆರಂಭವಾಗಿಲ್ಲ. ಈ ರೈಲುಗಳ ಬೋಗಿಗಳ ವಿನ್ಯಾಸದಲ್ಲಿ ಬದಲಾವಣೆ ಬೇಕಾದ ಕಾರಣ ಇನ್ನೂ ಸಂಚಾರಕ್ಕೆ ಹಸಿರು ನಿಶಾನೆ ಸಿಕ್ಕಿಲ್ಲ.

ವಂದೇ ಭಾರತ್ ಸ್ಲೀಪರ್ ರೈಲು ಸ್ವಯಂಚಾಲಿತ ಬಾಗಿಲುಗಳು, ಅತ್ಯಂತ ಆರಾಮದಾಯಕ ಸೀಟುಗಳ ವ್ಯವಸ್ಥೆ, ಪ್ರತಿ ಬೋಗಿಯಲ್ಲಿ ವೈಫೈ ವ್ಯವಸ್ಥೆ ಇದೆ. ಇದು ವಿಮಾನ ಮಾದರಿಯ ಪ್ರಯಾಣದ ಅನುಭವವನ್ನು ಪ್ರಯಾಣಿಕರಿಗೆ ನೀಡಲಿದೆ. ಪ್ರಯಾಣಿಕರು ಈಗಾಗಲೇ 136 ವಂದೇ ಭಾರತ್ ರೈಲುಗಳ ಮೂಲಕ ತಿರುಗುವ ಆಸನ ಮತ್ತು ವಿಶ್ವ ಮಟ್ಟದ ಪ್ರಯಾಣ ಅನುಭವವನ್ನು ಪಡೆಯುತ್ತಿದ್ದಾರೆ.

ವಂದೇ ಭಾರತ್ ಸ್ಲೀಪರ್‌ ರೈಲಿನೊಂದಿಗೆ ಪ್ರಯಾಣಿಕರು ಹೆಚ್ಚು ಆರಾಮದಾಯಕ ಪ್ರಯಾಣವನ್ನು ನಿರೀಕ್ಷಿಸಬಹುದು. 'ಮೇಕ್ ಇನ್ ಇಂಡಿಯಾ' ಯೋಜನೆಯಡಿ ವಿನ್ಯಾಸಗೊಳಿಸಿ ನಿರ್ಮಿಸಲಾದ ಈ ರೈಲು ಭಾರತದ ಇಂಜಿನಿಯರ್‌ಗಳ ಶ್ರೇಷ್ಠತೆಯನ್ನು ಸಹ ತೋರಿಸುತ್ತದೆ.

ವಂದೇ ಭಾರತ್ ಸ್ಲೀಪರ್‌ ರೈಲಿನೊಂದಿಗೆ ಪ್ರಯಾಣಿಕರು ಹೆಚ್ಚು ಆರಾಮದಾಯಕ ಪ್ರಯಾಣವನ್ನು ನಿರೀಕ್ಷಿಸಬಹುದು. 'ಮೇಕ್ ಇನ್ ಇಂಡಿಯಾ' ಯೋಜನೆಯಡಿ ವಿನ್ಯಾಸಗೊಳಿಸಿ ನಿರ್ಮಿಸಲಾದ ಈ ರೈಲು ಭಾರತದ ಇಂಜಿನಿಯರ್‌ಗಳ ಶ್ರೇಷ್ಠತೆಯನ್ನು ಸಹ ತೋರಿಸುತ್ತದೆ.

Demand For Sleeper Vande Bharat Express Train In Five Routes

ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ನಡೆಸುವ ಮುನ್ನ ಸಂಶೋಧನಾ ವಿನ್ಯಾಸಗಳು ಮತ್ತು ಮಾನದಂಡಗಳ ಸಂಸ್ಥೆ ಪರೀಕ್ಷಾರ್ಥ ಸಂಚಾರವನ್ನು ಪರಿಶೀಲನೆ ಮಾಡಿ ಅಂತಿಮ ಪ್ರಮಾಣಪತ್ರವನ್ನು ನೀಡಬೇಕಿದೆ. ರೈಲು ಸುರಕ್ಷತಾ ಆಯುಕ್ತರು ರೈಲನ್ನು ಗರಿಷ್ಠ ವೇಗದಲ್ಲಿ ಮೌಲ್ಯಮಾಪನ ಮಾಡಿ, ಪ್ರಮಾಣ ಪತ್ರ ನೀಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+