ಸಿಇಟಿ ಅರ್ಜಿ ತಿದ್ದುಪಡಿಗೆ ಕಾಲಾವಕಾಶ ವಿಸ್ತರಣೆ
ಬೆಂಗಳೂರು, ಮಾ.10 : 2015ರ ಸಿಇಟಿ ಪರೀಕ್ಷೆಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸುವಾಗ ಆಗಿರುವ ತಪ್ಪುಗಳನ್ನು ಸರಿಪಡಿಸಲು ಮಾರ್ಚ್ 15ರವರೆಗೆ ಅವಕಾಶ ಕಲ್ಪಿಸಲಾಗಿದೆ. ಹಿಂದೆ ಮಾರ್ಚ್ 10ರ ತನಕ ಮಾತ್ರ ಅವಕಾಶ ನೀಡಲಾಗಿತ್ತು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಸಿಇಟಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಆಗಿರುವ ತಪ್ಪುಗಳನ್ನು ಸರಿಪಡಿಸುವುದಕ್ಕಾಗಿ ಅಭ್ಯರ್ಥಿಗಳಿಗೆ ಮಾರ್ಚ್ 15ರ ತನಕ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದ್ದು, ಇನ್ನು ಕಾಲಾವಕಾಶ ವಿಸ್ತರಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. [ಅರ್ಜಿ ಸಲ್ಲಿಸುವುದು ಹೇಗೆ?]

ಈ ಅವಧಿಯಲ್ಲಿ ಅಭ್ಯರ್ಥಿಗಳು ತಮ್ಮ ಬಳಕೆದಾರರ ಖಾತೆ ಮತ್ತು ಪಾಸ್‌ವರ್ಡ್ ಬಳಸಿ ತುಂಬಿರುವ ಅರ್ಜಿಯಲ್ಲಿರುವ ತಪ್ಪುಗಳನ್ನು ಸರಿ ಪಡಿಸಬಹುದು ಅಥವಾ ಅರ್ಜಿ ಅಪೂರ್ಣವಾಗಿದ್ದರೆ ಪೂರ್ಣಗೊಳಿಸಬಹುದು. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಲಭ್ಯವಾಗುವ ಸ್ವೀಕೃತಿ ಪತ್ರದ ಪ್ರಿಂಟ್‌ಔಟ್ ತೆಗೆದು ಕಾಲೇಜು ಪ್ರಾಂಶುಪಾಲರ ಸಹಿ ಮಾಡಿಸಿ ಇಟ್ಟುಕೊಳ್ಳಬೇಕು. [ಸಿಇಟಿ ಅರ್ಜಿ ತಿದ್ದುಪಡಿಗೆ 5 ದಿನಗಳ ಕಾಲಾವಕಾಶ]
ಶುಲ್ಕ ಪಾವತಿ ಅವಧಿ ವಿಸ್ತರಣೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ಶುಲ್ಕ ಪಾವತಿ ದಿನಾಂಕವನ್ನು ವಿಸ್ತರಣೆ ಮಾಡಿದೆ. ಅರ್ಜಿ ಭರ್ತಿ ಮಾಡುವಾಗ ಡೌನ್‌ಲೋಡ್ ಮಾಡಿಕೊಂಡ ಚಲನ್ ಉಪಯೋಗಿಸಿ, ಮಾರ್ಚ್ 14ರ ತನಕ ಶುಲ್ಕವನ್ನು ಪಾವತಿ ಮಾಡಬಹುದಾಗಿದೆ.












Click it and Unblock the Notifications