ದಾವಣಗೆರೆಯಲ್ಲಿ ಯುವತಿ ಮೇಲೆ ಅತ್ಯಾಚಾರ ಯತ್ನ
ದಾವಣಗೆರೆ, ಡಿ. 22 : ಶನಿವಾರ ರಾತ್ರಿ ದಾವಣಗೆರೆ ನಗರದ ಬಾಪೂಜಿ ಆಸ್ಪತ್ರೆ ಹಿಂಭಾಗ ಯುವತಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಲು ಇಬ್ಬರು ದುಷ್ಕರ್ಮಿಗಳು ಯತ್ನಿಸಿದ್ದಾರೆ. ಪ್ರತಿರೋಧವೊಡ್ಡಿದ ಯುವತಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಯುವತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.
ಶನಿವಾರ ರಾತ್ರಿ 9.30ರ ಸುಮಾರಿಗೆ ಡ್ಯಾನ್ಸ್ ಕ್ಲಾಸ್ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ವಿದ್ಯಾರ್ಥಿನಿಯನ್ನು ಮಾತನಾಡುವ ಸೋಗಿನಲ್ಲಿ ಕರೆದ ದುಷ್ಕರ್ಮಿಗಳು, ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಯುವತಿ ಪ್ರತಿರೋಧ ಒಡ್ಡಿದಾಗ, ತಲೆ ಮತ್ತು ಬಾಯಿಗೆ ಬಲವಾಗಿ ಹೊಡೆದಿದ್ದಾರೆ.

ಹಲ್ಲೆ ಮಾಡಿದ ರಭಸಕ್ಕೆ ಯುವತಿಯ ನಾಲ್ಕು ಹಲ್ಲುಗಳು ಮುರಿದಿದ್ದು, ತೀವ್ರ ಅಸ್ವಸ್ಥಳಾಗಿದ್ದ ಯುವತಿಯನ್ನು ಸ್ಥಳೀಯರು ಬಾಪೂಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಯುವತಿ ಚೇತರಿಸಿಕೊಳ್ಳುತ್ತಿದ್ದು, ಆಕೆ ನೀಡಿದ ದೂರಿನ ಅನ್ವಯ ಬಡಾವಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯುವತಿ ನೀಡಿದ ಮಾಹಿತಿ ಆಧರಿಸಿ, ಬಡಾವಣೆ ಪೊಲೀಸರು ಯುವತಿ ಪರಿಚಯದವನಾದ ಪೃಥ್ವಿ ಎಂಬಾತನನ್ನು ಬಂಧಿಸಿದ್ದಾರೆ. ಪೃಥ್ವಿಯ ಸ್ನೇಹಿತ ಸಹ ಯುವತಿ ಮೇಲೆ ಹಲ್ಲೆ ಮಾಡಿದ್ದು, ಆತ ತಲೆ ಮರಿಸಿಕೊಂಡಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ಕೈಗೊಂಡಿದ್ದಾರೆ.












Click it and Unblock the Notifications