ಬೆಂಗಳೂರು ಮೂಲಕ ಹುಬ್ಬಳ್ಳಿ-ಮಂಗಳೂರು ನಡುವೆ ದಸರಾ ವಿಶೇಷ ರೈಲು, ವಿವರ
ಬೆಂಗಳೂರು, ಅಕ್ಟೋಬರ್ 19: ದಸರಾ ಸಮಯದಲ್ಲಿ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ನೈಋತ್ಯ ರೈಲ್ವೆ ದಸರಾ ವಿಶೇಷ ರೈಲು ಸೇವೆಗಳನ್ನು 07303/07304 ಹುಬ್ಬಳ್ಳಿ ಮತ್ತು ಮಂಗಳೂರು ಜಂಕ್ಷನ್ ನಡುವೆ ಬೆಂಗಳೂರಿನ ಯಶವಂತಪುರ (ಎರಡು ಟ್ರಿಪ್) ಮೂಲಕ ಓಡಿಸಲಿದೆ.
ರೈಲು ಸಂಖ್ಯೆ 07303 / 07304 ಎಸ್‌ಎಸ್‌ಎಸ್ ಹುಬ್ಬಳ್ಳಿ - ಮಂಗಳೂರು ಜಂಕ್ಷನ್ ಮೂಲಕ ಯಶವಂತಪುರ ದಸರಾ ವಿಶೇಷ ರೈಲು ಸಂಚರಿಸಲಿದೆ. 07303 ಅಕ್ಟೋಬರ್ 20 ಮತ್ತು 23, 2023 ರಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದಿಂದ ಹೊರಟು ಮರುದಿನ ಮಂಗಳೂರು ಜಂಕ್ಷನ್‌ಗೆ ಆಗಮಿಸುತ್ತದೆ.

ಹಾಗೇಯೆ 07304 ಅಕ್ಟೋಬರ್ 21 ಮತ್ತು 24, 2023 ರಂದು ಮಂಗಳೂರು ಜಂಕ್ಷನ್‌ನಿಂದ ಹೊರಟು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣಕ್ಕೆ ಆಗಮಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ. ರೈಲು ಒಟ್ಟು ಹತ್ತೊಂಬತ್ತು ಕೋಚ್‌ಗಳನ್ನು ಹೊಂದಿರುತ್ತದೆ. ರೈಲಿನ ದರ, ನಿಲುಗಡೆ ಮತ್ತು ಸಮಯಗಳ ಬಗ್ಗೆ ನಿರ್ದಿಷ್ಟ ವಿವರಗಳಿಗಾಗಿ, ಪ್ರಯಾಣಿಕರು ಭಾರತೀಯ ರೈಲ್ವೆಯ ಅಧಿಕೃತ ವಿಚಾರಣೆ ವೆಬ್‌ಸೈಟ್‌ಗೆ ಭೇಟಿ ನೀಡಿ ತಿಳಿಯಬಹುದು.
ಪ್ರಯಾಣಿಕರಿಗೆ ಅನುಕೂಲವಾಗಲು ಮೈಸೂರು ಮತ್ತು ಧಾರವಾಡ ನಡುವೆ ಹಾಸನ (ಎರಡು ಟ್ರಿಪ್) ಮೂಲಕ ದಸರಾ ವಿಶೇಷ ರೈಲು ಸಂಚಾರ ಮಾಡಲಿವೆ. 06205 ಅಕ್ಟೋಬರ್ 22 ಮತ್ತು 24, 2023 ರಂದು ಮೈಸೂರಿನಿಂದ ಹೊರಟು ಮರುದಿನ ಧಾರವಾಡಕ್ಕೆ ಆಗಮಿಸುತ್ತದೆ. 06206 ಅಕ್ಟೋಬರ್ 23 ಮತ್ತು 25, 2023 ರಂದು ಧಾರವಾಡದಿಂದ ಹೊರಟು ಅದೇ ದಿನ ಮೈಸೂರಿಗೆ ಆಗಮಿಸುತ್ತದೆ.
ನೈಋತ್ಯ ರೈಲ್ವೆ ಮೈಸೂರು-ವಿಜಯಪುರ ನಡುವೆ ಒಂದು ಟ್ರಿಪ್ ಸಂಚಾರ ನಡೆಸುವ ವಿಶೇಷ ರೈಲು ಘೋಷಣೆ ಮಾಡಿದೆ. ಈ ರೈಲು ಬೆಂಗಳೂರು, ಹುಬ್ಬಳ್ಳಿ ಮೂಲಕ ಸಂಚಾರ ನಡೆಸಲಿದೆ. ನೈಋತ್ಯ ರೈಲ್ವೆ ಈಗಾಗಲೇ ಹಲವು ಮಾರ್ಗದಲ್ಲಿ ವಾರಾಂತ್ಯದ ರಜೆ, ದಸರಾ ಹಬ್ಬದ ಅಂಗವಾಗಿ ವಿಶೇಷ ರೈಲುಗಳನ್ನು ಘೋಷಣೆ ಮಾಡಿದೆ. ಈಗ ಮೈಸೂರು-ವಿಜಯಪುರ ಒಂದು ಟ್ರಿಪ್ ರೈಲು ಓಡಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ದಸರಾ ಹಿನ್ನಲೆಯಲ್ಲಿ ರೈಲು ನಂಬರ್ 06203 ಮೈಸೂರು-ವಿಜಯಪುರ ವಯಾ ಬೆಂಗಳೂರು ಒಂದು ಟ್ರಿಪ್ ಮತ್ತು ರೈಲು ನಂಬರ್ 06204 ವಿಜಯಪುರ-ಮೈಸೂರು ವಯಾ ಹುಬ್ಬಳ್ಳಿ, ಹಾಸನ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ಹೇಳಿದೆ.












Click it and Unblock the Notifications