ದಸರಾ; ಬೆಂಗಳೂರು-ಬೀದರ್ ವಿಶೇಷ ರೈಲು, ದರಪಟ್ಟಿ

ಬೆಂಗಳೂರು, ಅಕ್ಟೋಬರ್ 02 : ದಸರಾ ಹಬ್ಬದ ಪ್ರಯುಕ್ತ ನೈಋತ್ಯ ರೈಲ್ವೆ ಬೆಂಗಳೂರು-ಬೀದರ್ ನಡುವೆ ವಿಶೇಷ ರೈಲನ್ನು ಓಡಿಸುತ್ತಿದೆ. ಅಕ್ಟೋಬರ್ 4 ಮತ್ತು 7ರಂದು ವಿಶೇಷ ರೈಲು ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ.

ನೈಋತ್ಯ ರೈಲ್ವೆ ಈ ಕುರಿತು ಪ್ರತಿಕಾ ಪ್ರಕಟಣೆ ಹೊರಡಿಸಿದೆ. ಬೀದರ್-ಬೆಂಗಳೂರು ನಡುವೆ 82661, 82662 ಸುವಿಧಾ ವಿಶೇಷ ರೈಲು ಸಂಚಾರ ನಡೆಸಲಿದೆ. ಬೆಂಗಳೂರಿನ ಯಲಹಂಕದಿಂದ ಬೀದರ್‌ಗೆ ರೈಲು ಸಂಚರಿಸಲಿದೆ.

ಬೀದರ್‌ನಿಂದ ಯಲಹಂಕಕ್ಕೆ ಅಕ್ಟೋಬರ್ 5 ಮತ್ತು 8ರಂದು ವಿಶೇಷ ರೈಲು ಸಂಚಾರ ನಡೆಸಲಿದೆ. ಅಕ್ಟೋಬರ್ 4 ರಂದು ವಿಶೇಷ ರೈಲು ಯಲಹಂಕದಿಂದ ಬೀದರ್‌ಗೆ ಪ್ರಯಾಣ ಬೆಳೆಸಲಿದೆ.

Dasara Special Train Between Bengaluru And Bidar

ವೇಳಾಪಟ್ಟಿ : ಅಕ್ಟೋಬರ್ 4ರಂದು ಸಂಜೆ 5ಗಂಟೆಗೆ ಯಲಹಂಕದಿಂದ ಹೊರಡುವ ರೈಲು ರಾಯಚೂರು, ಯಾದಗಿರಿ, ವಾಡಿ, ಕಲಬುರಗಿ, ಹಮನಾಬಾದ್ ಮಾರ್ಗವಾಗಿ ಸಂಚರಿಸಿ ಮರುದಿನ ಬೆಳಗ್ಗೆ 8.30ಕ್ಕೆ ಬೀದರ್ ತಲುಪಲಿದೆ.

ಬೀದರ್‌ನಿಂದ ಅಕ್ಟೋಬರ್ 5ರಂದು ಸಂಜೆ 4ಗಂಟೆಗೆ ಬೀದರ್‌ನಿಂದ ಹೊರಡುವ ರೈಲು ಮರುದಿನ ಬೆಳಗ್ಗೆ 8.40ಕ್ಕೆ ಯಲಹಂಕ ತಲುಪಲಿದೆ.

ಈ ರೈಲಿನಲ್ಲಿ 3 ಎಸಿ ದರ್ಜೆಯ ದರ ಪ್ರತಿ ಪ್ರಯಾಣಿಕರಿಗೆ 2,510 ರೂ., ಸೆಕೆಂಡ್ ಕ್ಲಾಸ್ ಸ್ಲೀಪರ್ ದರ 1,100 ಇರುತ್ತದೆ. ಬೇಡಿಕೆ ಹೆಚ್ಚಾದರ ದರವೂ ಹೆಚ್ಚಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+