'ಡಿ ಬಾಸ್’ ಘೋಷಣೆಗೆ ಸಿಎಂ ಡಿ.ಕೆ. ಶಿವಕುಮಾರ್ ಗರಂ! ರಾಮನಗರ ಕರಗ ಉತ್ಸವದಲ್ಲಿ ನಡೆದಿದ್ದೇನು?

ರಾಮನಗರ: ರಾಮನಗರದ ಐತಿಹಾಸಿಕ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಷಣ ಆರಂಭಿಸಲು ಮುಂದಾದ ವೇಳೆ ನಟ ದರ್ಶನ್ ಅಭಿಮಾನಿಗಳು ನಿರಂತರವಾಗಿ "ಡಿ ಬಾಸ್... ಡಿ ಬಾಸ್..." ಎಂದು ಘೋಷಣೆ ಕೂಗಿದ್ದಾರೆ. ಅಭಿಮಾನಿಗಳ ಘೋಷಣೆಯಿಂದ ಕೆಲಕಾಲ ಕಾರ್ಯಕ್ರಮದ ವಾತಾವರಣ ಉದ್ವಿಗ್ನಗೊಂಡಿದ್ದು, ಮುಖ್ಯಮಂತ್ರಿ ಭಾಷಣವನ್ನು ಮಧ್ಯದಲ್ಲೇ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾಯಿತು.

ಕರಗ ಮಹೋತ್ಸವದ ವೇದಿಕೆಯಲ್ಲಿ ಸಿಎಂ ಡಿ ಕೆ ಶಿವಕುಮಾರ್ ಮೈಕ್ ಹಿಡಿಯುತ್ತಿದ್ದಂತೆಯೇ ದರ್ಶನ್ ಅಭಿಮಾನಿಗಳು ಜೋರಾಗಿ ಘೋಷಣೆ ಕೂಗಲು ಆರಂಭಿಸಿದರು. ಘೋಷಣೆಗಳು ಮುಂದುವರಿದ ಕಾರಣ ಡಿ.ಕೆ. ಶಿವಕುಮಾರ್ ಕೆಲ ಹೊತ್ತು ಮೌನವಾಗಿದ್ದು, ಅಭಿಮಾನಿಗಳನ್ನು ಶಾಂತಗೊಳಿಸಲು ವೇದಿಕೆಯಲ್ಲಿದ್ದ ನಾಯಕರು ಹಾಗೂ ಆಯೋಜಕರು ಮನವಿ ಮಾಡಿದರು. ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಮೇಲೆ ಮುಖ್ಯಮಂತ್ರಿ ತಮ್ಮ ಭಾಷಣವನ್ನು ಮುಂದುವರಿಸಿದರು. ‌

darshan fans CM DK Shivakumar Reacts to D Boss Chants at Ramanagara Karaga Festival Here s What Happened

ಅಭಿಮಾನಿಗಳಿಗೆ ಸಿಎಂ ಕಿವಿಮಾತು

ಈ ವೇಳೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು, ಇದು ಪವಿತ್ರವಾದ ಧಾರ್ಮಿಕ ಕಾರ್ಯಕ್ರಮ. ನಿಮ್ಮ ಅಭಿಮಾನಕ್ಕೆ ನಾನು ಗೌರವ ಕೊಡುತ್ತೇನೆ. ಆದರೆ ಕೋರ್ಟ್ ವಿಚಾರಗಳನ್ನು ಇಲ್ಲಿ ತಂದು ನನ್ನ ಮೇಲೆ ಒತ್ತಡ ಹಾಕಬೇಡಿ. ನಿಮ್ಮ ಭಾವನೆ ನನಗೆ ಅರ್ಥವಾಗುತ್ತದೆ. ನಾನು ಮುಖ್ಯಮಂತ್ರಿ ಆಗಿರಬಹುದು, ಆದರೆ ರಾಮನಗರ ಜಿಲ್ಲೆಯ ಮಗನೂ ಹೌದು. ನಿಮ್ಮ ಸೇವಕನಾಗಿ ಬಂದಿದ್ದೇನೆ. ನಿಮ್ಮ ಮಗನನ್ನು ನೀವು ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ನಾವು ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡಬೇಕು, ನಾನು ದೇವರಲ್ಲಿ ಪ್ರಾರ್ಥನೆ ಮಾಡಿದಂತೆ, ನೀವು ದೇವರಲ್ಲಿ ಪ್ರಾರ್ಥನೆ ಮಾಡಿ. ಪ್ರಯತ್ನ ವಿಫಲವಾದ್ರೂ ಪ್ರಾರ್ಥನೆ ವಿಫಲವಾಗಲ್ಲ ಎಂದು ನಾನು ಈ ಹಿಂದೆ ಚಾಮುಂಡಿ ಬೆಟ್ಟದಲ್ಲಿ ಹೇಳಿದ್ದೆ. ನೀವು ಕೂಡ ಚಾಮುಂಡಿಗೆ ಪ್ರಾರ್ಥನೆ ಮಾಡಿ, ತಾಯಿ ಒಳ್ಳಯದು ಮಾಡ್ತಾಳೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ಹೇಳಿದರು

ಪಟಾಕಿ ಸಿಡಿಸದಂತೆ ಮನವಿ

ಇನ್ನೂ ಕಾರ್ಯಕ್ರಮದ ವೇಳೆ ಕೆಲವರು ಪಟಾಕಿ ಸಿಡಿಸಲು ಮುಂದಾದ ಹಿನ್ನೆಲೆಯಲ್ಲಿ, ಸುರಕ್ಷತೆಯ ದೃಷ್ಟಿಯಿಂದ ಪಟಾಕಿ ಸಿಡಿಸದಂತೆ ಸಹ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ಮನವಿ ಮಾಡಿದರು. ನಂತರ ಅಭಿಮಾನಿಗಳು ಶಾಂತಗೊಂಡ ಬಳಿಕ ಧಾರ್ಮಿಕ ಕಾರ್ಯಕ್ರಮ ಸುಗಮವಾಗಿ ಮುಂದುವರಿಯಿತು. ಇನ್ನೂ ರಾಮನಗರ ಕರಗ ಮಹೋತ್ಸವದಲ್ಲಿ ನಡೆದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಮುಖ್ಯಮಂತ್ರಿ ಭಾಷಣದ ವೇಳೆ "ಡಿ ಬಾಸ್" ಘೋಷಣೆಗಳು ಮೊಳಗಿದ ವಿಡಿಯೊಗಳು ವ್ಯಾಪಕ ಚರ್ಚೆಗೆ ಕಾರಣವಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+