ಡಿ.ಕೆ ಶಿವಕುಮಾರ್ Vs ಎಚ್.ಡಿ ಕುಮಾರಸ್ವಾಮಿ: "ಕೇತಗಾನಹಳ್ಳಿಯ ವಿವಾದ" ಡಿಕೆಶಿ ಹೇಳಿದ್ದೇನು ?
ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ನಡುವೆ ಮತ್ತೊಂದು ಸುತ್ತಿನ ವಾಕ್ಸಮರ ಶುರುವಾಗಿದೆ. ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ನಡುವೆ ವಾಕ್ಸಮರ ಜೋರಾಗಿದೆ. ರಾಜ್ಯ ಸರ್ಕಾರವು ನನ್ನನ್ನು ಗುರಿಯಾಗಿಸಿಕೊಂಡು ಈ ರೀತಿ ಮಾಡುತ್ತಿದೆ ಎಂದು ಎಚ್.ಡಿ ಕುಮಾರಸ್ವಾಮಿ ಅವರು ಆರೋಪಿಸಿದ್ದು. ಉಪಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಅವರು ಈ ಆರೋಪಕ್ಕೆ ಟಾಂಗ್ ಕೊಟ್ಟಿದ್ದಾರೆ. ಅವರು ಮಾತ್ರ ಶುದ್ಧ ನಾವು ಅಶುದ್ಧನಾ ಅಂತ ಡಿಕೆಶಿ ಪ್ರಶ್ನೆ ಮಾಡಿದ್ದಾರೆ.
ಈ ವಿಷಯವಾಗಿ ಮಾತನಾಡಿರುವ ಡಿ.ಕೆ ಶಿವಕುಮಾರ್ ಅವರು, ನಾನು ಎಂದಿಗೂ ದ್ವೇಷ ರಾಜಕೀಯ ಮಾಡಿಲ್ಲ. ಅದರ ಅವಶ್ಯಕತೆಯೂ ನನಗೆ ಇಲ್ಲ. ಕೋರ್ಟ್ ಆದೇಶ ಹಾಗೂ ಕಾನೂನಿನ ಅನ್ವಯ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಕೇತಗಾನಹಳ್ಳಿಯ ಸುದ್ದಿಗೆ ನಾವ್ಯಾರೂ ಹೋಗಿಲ್ಲ. ನನಗೆ ಆ ವಿಚಾರವೇ ಗೊತ್ತಿಲ್ಲ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಈ ವಿಷಯವಾಗಿ ಪಿಐಎಲ್ ಸಲ್ಲಿಕೆಯಿಂದ ಮುನ್ನೆಲೆಗೆ ಬಂದಿದೆ. ಭೂಮಿ ಒತ್ತುವರಿ ವಿಚಾರದಲ್ಲಿ ಸಮರ್ಪಕವಾದ ಕ್ರಮ ತೆಗೆದುಕೊಂಡಿಲ್ಲ ಎಂದು ಕೋರ್ಟ್ ಅಧಿಕಾರಿಗಳಿಗೆ ಚಾಟಿ ಬೀಸಿದೆ ಎಂದು ಮಾಧ್ಯಮಗಳೇ ವರದಿ ಮಾಡಿವೆ. ಕೋರ್ಟ್ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದೆ. ಹೀಗಾಗಿ ಅಧಿಕಾರಿಗಳು ಸರ್ವೇ ನಡೆಸಿದ್ದಾರೆ. ಇದರ ಹೊರತಾಗಿ ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲ ಎಂದಿದ್ದಾರೆ.

ಕುಮಾರಸ್ವಾಮಿ ಮಾತನಾಡಿದ್ದು ನೆನಪು ಮಾಡಿಕೊಳ್ಳಲಿ
ಇನ್ನು ಇದೇ ಸಂದರ್ಭದಲ್ಲಿ ಈ ವಿಚಾರವಾಗಿ ಮಾತನಾಡಿರುವ ಡಿ.ಕೆ ಶಿವಕುಮಾರ್ ಅವರು ಎಚ್.ಡಿ ಕುಮಾರಸ್ವಾಮಿ ಅವರು ಈ ಹಿಂದೆ ನಮ್ಮ ಬಗ್ಗೆ ಏನೆಲ್ಲಾ ಮಾತನಾಡಿದ್ದರು ಎನ್ನುವುದನ್ನು ನೆನಪು ಮಾಡಿಕೊಳ್ಳಲಿ. ನೋಟಿಸ್ ಜಾರಿ ಮಾಡದೆಯೇ ಸರ್ವೇ ಕಾರ್ಯ ಮಾಡುವುದಕ್ಕೆ ಸಾಧ್ಯವೇ. ಇದೀಗ ಅವರ ಸಿಬ್ಬಂದಿಯೇ ಹೆಚ್ಚುವರಿ ಜಾಗ / ಭೂಮಿ ಇದ್ದರೆ ವಾಪಸ್ ತೆಗೆದುಕೊಳ್ಳಿ ಎಂದು ಪತ್ರ ಬರೆದಿದ್ದಾರೆ. ಅವರಿಗೆ ಎಷ್ಟು ಭೂಮಿ ಒತ್ತುವರಿ ಮಾಡಿಕೊಂಡಿದ್ದೇವೆ ಎನ್ನುವ ವಿಷಯವೇ ತಿಳಿದಿಲ್ಲ. ಮೊದಲು ಈ ಹಿಂದೆ ಏನೆಲ್ಲಾ ಮಾತನಾಡಿದ್ದರು ಎನ್ನುವುದನ್ನು ಸ್ವಲ್ಪ ನೆನಪು ಮಾಡಿಕೊಳ್ಳಲಿ ಎಂದು ಟಾಂಗ್ ಕೊಟ್ಟಿದ್ದಾರೆ.
ಇವರು ಮಾತ್ರ ಶುದ್ಧ, ನಾವು ಅಶುದ್ಧವೇ?
ಇನ್ನು ಮುಂದುವರಿದು ಮಾತನಾಡಿರುವ ಡಿ.ಕೆ ಶಿವಕುಮಾರ್ ಅವರು ಇವರು ಮಾತ್ರ ಶುದ್ಧ, ನಾವು ಅಶುದ್ಧವೇ ಎಂದು ಎಚ್.ಡಿ ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿಕೊಂಡು ಪ್ರಶ್ನೆ ಮಾಡಿದ್ದಾರೆ. ನಮ್ಮ ಬಗ್ಗೆ ಸಾಕಷ್ಟು ದಾಖಲೆಗಳನ್ನು ತೆಗೆದು ಇರಿಸಿಕೊಂಡಿರುವುದಾಗಿ ಅವರು ಹೇಳುತ್ತಿದ್ದಾರೆ. ನಾವು ಏನೆಲ್ಲಾ ಒತ್ತುವರಿ ಮಾಡಿಕೊಂಡಿದ್ದೇವೆ ಎನ್ನುವುದನ್ನು ಬಹಿರಂಗಪಡಿಸಲಿ.
ನನ್ನ ಬಳಿಯೂ ದಾಖಲೆಗಳು ಇವೆ. ಅದನ್ನ ನಾನು ಬಿಡುಗಡೆ ಮಾಡ್ತೀನಿ ಅಂತ ಅವರು ಹೇಳಿದ್ದರು. ಮಧ್ಯರಾತ್ರಿ ಒತ್ತಿಸಿಕೊಂಡ್ಡೀನಿ, ಬರೆಸಿಕೊಂಡರು ಅಂತೆಲ್ಲಾ ನಮ್ಮ ಮೇಲೆ ಆರೋಪಗಳನ್ನು ಮಾಡಿದ್ದರು. ನಾವು ಕಾಸು ಕೊಟ್ಟೇ ಬರೆಸಿಕೊಂಡಿರೋದು. ಯಾರೂ ಪುಗಸಟ್ಟೆ ಬರೆದು ಕೊಡುವುದಿಲ್ಲ ಎಂದಿದ್ದಾರೆ.

ನಾನು ಒತ್ತುವರಿ ಮಾಡಿಕೊಳ್ಳುವುದಕ್ಕೆ ಭಯಪಡಿಸಿದ್ದರೆ ಅವರಿಂದ ದೂರು ಕೊಡಿಸಲಿ ಇಲ್ಲವೇ ಇವರೇ ದೂರು ಕೊಡಲಿ. ಇವರು ಮಾತ್ರ ಶುದ್ಧರು, ನಾವು ಅಶುದ್ಧವೇವೇ ಎಂದು ಡಿ.ಕೆ ಶಿವಕುಮಾರ್ ಅವರು ಪ್ರಶ್ನೆ ಮಾಡಿದ್ದಾರೆ. ಯಾವ ಕಾಂಗ್ರೆಸ್ ಪಾತ್ರವೂ ಇದರಲ್ಲಿ ಇಲ್ಲ. ಅವರ ಜಮೀನು ಇದ್ದರೆ ಉಳಿಯುತ್ತೆ. ಇಲ್ಲದೆ ಇದ್ದರೆ ಬಿಟ್ಟು ಕೊಡಬೇಕು ಅಷ್ಟೇ ಅಂತ ಹೇಳಿದ್ದಾರೆ.












Click it and Unblock the Notifications