ಸದ್ಯಕ್ಕೆ ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ, ಆಮೇಲೆ ನೋಡೋಣ: ಡಿಕೆಶಿ
ಬೆಂಗಳೂರು, ಮೇ 4: ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗದು. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಹಾಗೂ ಬೆಂಗಳೂರು ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ನಾನು ಮುಖ್ಖಮಂತ್ರಿ ರೇಸ್ ನಲ್ಲಿಲ್ಲ ಸಿದ್ದರಾಮಯ್ಯ ನಾಯಕತ್ವದಲ್ಲಿ ನಾವು ಚುನಾವಣೆಗೆ ಹೋಗುತ್ತಿದ್ದೇವೆ ಪಕ್ಷ ಅಧಿಕಾರ ಬಂದಮೇಲೆ ಬೇರೆ ವಿಚಾರದ ಬಗ್ಗೆ ಚರ್ಚೆ ಮಾಡುತ್ತೇವೆ. ಕಾಂಗ್ರೆಸ್ ನಲ್ಲಿ ದಲಿತ ಸಿಎಂ ಮಾಡುವ ವಿಚಾರ ದಲಿತ ಸಿಎಂ ಮಾಡುವ ಬಗ್ಗೆ ಬಿಜೆಪಿ, ಜೆಡಿಎಸ್ ಮೊದಲು ಮಾತನಾಡಲಿ ಎಂದರು.
168 ಕ್ಷೇತ್ರಗಳಲ್ಲಿ ಬಿಜೆಪಿ ಫೈಟ್ ಮಾಡುತ್ತಿದೆ ಜೆಡಿಎಸ್ 75 ಸೀಟ್ ಗಳಿಗೆ ಪೈಟ್ ಮಾಡುತ್ತಿದೆ. ಕಾಂಗ್ರೆಸ್ 223 ಕ್ಷೇತ್ರಗಳಲ್ಲಿ ಫೈಟ್ ಮಾಡುತ್ತಿದೆ ಸಿದ್ದರಾಮಯ್ಯ ನೇತ್ರತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ ಸಿದ್ದರಾಮಯ್ಯ ಮುಖ್ಖಮಂತ್ರಿ ಅಭ್ಯರ್ಥಿಯೆಂದು ನಾವು ಒಪ್ಪಿಕೊಂಡಿದ್ದೇವೆ.

ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ಕಾಂಗ್ರೆಸ್ ಸಿಕ್ಕಿದೆ ಎರಡು ಪಕ್ಷ ಗಳು ನಮ್ಮ ವೈರಿಗಳೇ ಅಮಿತ್ ಶಾ ಹಾಗೂ ಮೋದಿ ಬಂದು ಇಲ್ಲಿ ಬದಲಾವಣೆ ಮಾಡಲು ಸಾಧ್ಯ ಇಲ್ಲ ಚುನಾವಣೆ ಕಾರಣಕ್ಕಾಗಿ ಕರ್ನಾಟಕದ ಬಗ್ಗೆ ಗಾರ್ಬೆಜ್ ಸಿಟಿ, ಕ್ರೈಂ ಸಿಟಿ ಎಂದು ಮೋದಿ ಆರೋಪ ಮಾಡುತ್ತಿದ್ದಾರೆ ಎಂದರು.
ಈ ರಾಷ್ಟ್ರಕ್ಕೆ ಮೋದಿ ಅವಮಾನ ಮಾಡುತ್ತಿದ್ದಾರೆ, ಬಿಜೆಪಿ ಐದು ವರ್ಷದ ಅವಧಿ ಬಗ್ಗೆ ಮಾಧ್ಯಮದವ್ರು 15 ನಿಮಿಷ ಎಪಿಸೋಡ್ ಮಾಡಿದೆರೆ ಸಾಕು ಬಿಜೆಪಿ ಏನು ಎಂದು ಗೊತ್ತಾಗುತ್ತೆ ರಾಜ್ಯದ ಘನತೆ, ಸ್ವಾಭಿಮಾನವನ್ನ ದಯವಿಟ್ಟು ಹಾಳು ಮಾಡಬೇಡಿ ನಮ್ಮ ರಾಜ್ಯಕ್ಕೆ ಉತ್ತಮ ಹೆಸರಿದೆ ಎಂದರು.
ಇಂಧನ ಇಲಾಖೆಯಲ್ಲಿ ನಾವು ತಂದ ಕಾರ್ಯಕ್ರಮಗಳು ರಾಷ್ಟಕ್ಕೆ ಮಾದರಿಯಾಗಿದೆ ಬರಗಾಲದಲ್ಲಿ ಕೇಂದ್ರದ ಸಹಕಾರ ಇಲ್ಲದೆ, ಬೇಕಾದ ವಿದ್ಯುತ್ ನಾವು ಉತ್ಪಾದಿಸಿದ್ದೇವೆ, ಕಾಂಗ್ರೆಸ್ ನಾಯಕರ ಮೇಲೆ ಐಟಿ ದಾಳಿ ವಿಚಾರ ಕಾಂಗ್ರೆಸ್ ನಾಯಕರನ್ನ ಗುರಿಯಾಗಿಸಿ ಐಟಿ ದಾಳಿ ನಡೆಯುತ್ತಿದೆ ಇದುವರೆಗೂ ಬಿಜೆಪಿ ನಾಯಕರ ಮೇಲೆ ಐಟಿ ದಾಳಿಯಾಗಿಲ್ಲ ಎಂದು ಆರೋಪಿಸಿದರು,












Click it and Unblock the Notifications