ATMಗಳಲ್ಲಿ ಸಿಗುತ್ತಿರಲಿಲ್ಲ ₹2000 ನೋಟ್: ಹಿಂಟ್ ಕೊಟ್ಟಿತ್ತಾ RBI ?
ಬೆಂಗಳೂರು: ಜನರ ನಡುವೆ ಓಡಾಡುತ್ತಿದ್ದ ಮಾತು ನಿಜವಾಗಿದೆ, ಕರ್ನಾಟಕ ಚುನಾವಣೆ ಮುಗಿಯುತ್ತಿದ್ದಂತೆ ₹2000 ಮುಖಬೆಲೆ ನೋಟ್‌ಗೆ ಅಂತ್ಯ ಹಾಡಿದೆ ಆರ್‌ಬಿಐ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವಿದೆ, ಅದೇನಂದ್ರೆ ಕೆಲ ತಿಂಗಳಿಂದ ATMಗಳಲ್ಲಿ ₹2000 ನೋಟ್ ಜನರಿಗೆ ಸಿಗುತ್ತಿರಲಿಲ್ಲ, ಹಾಗಿದ್ರೆ ಇದೇ ಆರ್‌ಬಿಐ ಮುನ್ಸೂಚನೆ ಆಗಿತ್ತಾ? ಬನ್ನಿ ತಿಳಿಯೋಣ.
2016ರಲ್ಲಿ 500, 1000 ನೋಟ್ ಅಮಾನ್ಯ ಅಥವಾ ನೋಟ್ ಬ್ಯಾನ್ (Note Ban) ಬಳಿಕ 2000 ರೂಪಾಯಿ ಮುಖಬೆಲೆ ನೋಟ್ ಚಲಾವಣೆಗೆ ಬಂದಿದ್ದವು. ಆದರೆ ಇದೀಗ ದಿಢೀರ್ ಅಂತಾ ಆರ್‌ಬಿಐ ಪ್ರಮುಖ ನಿರ್ಧಾರ ಪ್ರಕಟಿಸಿ, ಭಾರತದಲ್ಲಿ ಚಲಾವಣೆಯಲ್ಲಿದ್ದ 2000 ರೂ. ಮುಖಬೆಲೆ ನೋಟ್ ಚಲಾವಣೆ ಸ್ಥಗಿತಗೊಳಿಸಿದೆ (2000 Note). ಹಾಗೇ ವಾಪಸ್ ಪಡೆಯಲು ಆರ್‌ಬಿಐ ಬ್ಯಾಂಕ್‌ಗಳಿಗೆ ಆದೇಶ ನೀಡಿದೆ. ಈ ನಡುವೆ ATMಗಳಲ್ಲಿ ಇಷ್ಟುದಿನ ₹2000 ನೋಟ್ ಯಾಕೆ ಸಿಗುತ್ತಿರಲಿಲ್ಲ? ಎಂಬ ಜನಸಾಮಾನ್ಯರ ಪ್ರಶ್ನೆಗೆ ಉತ್ತರ ಸಿಕ್ಕಿದೆ.

2000 ರೂ. ನೋಟ್ ಬೇಡ ಅಂತಿದ್ರು ಜನ!
ಹೌದು, ಸುಮಾರು ದಿನಗಳಿಂದ ATMಗಳಲ್ಲಿ ಮುಖಬೆಲೆಯ ನೋಟ್‌ಗಳು ಸಿಗದೇ ಇದ್ದ ಕಾರಣ, ಜನರಲ್ಲೇ ಈ ಬಗ್ಗೆ ಚರ್ಚೆ ಶುರುವಾಗಿತ್ತು. ಅದರಲ್ಲೂ 2000 ನೋಟ್ ನೋಡಿದ್ರೆ ಸಾಕು ಅಂಗಡಿಗಳಲ್ಲಿ ಜನ ಬೇಡ, ಬೇಡ ಅನ್ನುತ್ತಿದ್ದರು. ಹೀಗಾಗಿ 2000 ಮುಖಬೆಲೆ ನೋಟ್ ಚಲಾವಣೆ ಮಾಡಲು ಹಲವರು ಪದಾಡಿದ್ದೂ ಇದೆ. ಈ ಎಲ್ಲಾ ಘಟನೆಗಳ ಬೆನ್ನಲ್ಲೇ 2000 ರೂ. ಮುಖಬೆಲೆಯ ನೋಟ್ ಚಲಾವಣೆ ಸ್ಥಗಿತಗೊಳಿಸಿದೆ RBI. ವಾಪಸ್ ಪಡೆಯಲು ಆರ್‌ಬಿಐ ಬ್ಯಾಂಕ್‌ಗಳಿಗೆ (Note Ban) ಆದೇಶ ನೀಡಿದೆ.
4 ತಿಂಗಳು ಅವಕಾಶ ನೀಡಿದ RBI!
ಹೌದು, 2016ರಲ್ಲಿ ಘೋಷಣೆ ಮಾಡಿದಂತೆ ದಿಢೀರ್ ನೋಟ್ ಬ್ಯಾನ್ ಮಾಡುತ್ತಿಲ್ಲ ಆರ್‌ಬಿಐ. ಈಗ ಜನರಿಗೆ ಅನುಕೂಲ ಆಗಲಿ ಎಂದು ಬರೋಬ್ಬರಿ 4 ತಿಂಗಳ ಅವಕಾಶ ಕಲ್ಪಿಸಿದೆ. ನೀವು ನಿಮ್ಮ ಬಳಿ ಇರುವ 2000 ಮುಖಬೆಲೆಯ ನೋಟ್ ಬದಲಾವಣೆ ಮಾಡಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ಅವಕಾಶವಿದ್ದು, ಅಕ್ಟೋಬರ್ 1ರಿಂದ ನೋಟ್ ಚಲಾವಣೆಯನ್ನು ಸಂಪೂರ್ಣ ಬ್ಯಾನ್ ಮಾಡಲಾಗುವುದು ಎಂದು ಆರ್‌ಬಿಐ ಹೇಳಿದೆ. ಆರ್‌ಬಿಐ ಹೊರಡಿಸಿರುವ ಆದೇಶ 2000 ರೂ. ಮುಖಬೆಲೆ ನೋಟ್‌ಗಳಿಗೆ ಗುಡ್ ಬೈ ಹೇಳುವಂತೆ ಮಾಡಿದೆ.
ನಿಮ್ಮ ಬಳಿ ನೋಟ್ ಇದ್ದರೆ ಹೆದರಬೇಡಿ!
ಇನ್ಮುಂದೆ ಗ್ರಾಹಕರಿಗೆ 2,000 ರೂ. ಮುಖಬೆಲೆಯ ನೋಟುಗಳನ್ನು ನೀಡದಂತೆ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ ನೀಡಿದೆ. ಗ್ರಾಹಕರು ಕೂಡ ಆತಂಕ ಪಡುವ ಅಗತ್ಯವಿಲ್ಲ, ನೋಟು ಬದಲಿಸಿಕೊಳ್ಳಲು ಸೆಪ್ಟೆಂಬರ್ 30ರವರೆಗೂ ಅವಕಾಶ ನೀಡಲಾಗಿದೆ. ಇದೀಗ ದೇಶದಲ್ಲಿ ಚಲಾವಣೆಯಲ್ಲಿರುವ 2,000 ರೂ. ಮುಖಬೆಲೆ ನೋಟುಗಳಲ್ಲಿ ಶೇ.89ರಷ್ಟು ನೋಟುಗಳು 2017ರ ಮಾರ್ಚ್ ತಿಂಗಳಿಗೂ ಮೊದಲೇ ಮುದ್ರಿಸಿ ಬಿಡುಗಡೆ ಮಾಡಲಾಗಿತ್ತು. 2000 ರೂ. ನೋಟುಗಳ ಕಾಲಾವಧಿ 4-5 ವರ್ಷ ಮಾತ್ರ, ಹೀಗಾಗಿ ಈ ನೋಟು ಹಿಂಪಡೆಯಲಾಗುತ್ತಿದೆ ಎನ್ನಲಾಗಿದೆ.

ಒಂದು ದಿನಕ್ಕೆ 20,000 ನಿಗದಿ
ಇನ್ನು ಗ್ರಾಹಕರು ತಮ್ಮಲ್ಲಿನ 2000 ರೂಪಾಯಿ ನೋಟುಗಳನ್ನ ಬ್ಯಾಂಕ್ ಖಾತೆಯಲ್ಲಿ ತಮ್ಮ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಬಹುದು. 2000 ರೂ. ನೋಟು ವಿನಿಮಯಕ್ಕೆ ನಿರ್ಬಂಧ ವಿಧಿಸಲಾಗಿದೆ. ಬ್ಯಾಂಕ್ ಚಟುವಟಿಕೆಗೆ ಸಮಸ್ಯೆಯಾಗದ ರೀತಿ ನೋಡಿಕೊಳ್ಳಲು ಒಂದು ದಿನಕ್ಕೆ, ಒಬ್ಬ ವ್ಯಕ್ತಿಗೆ ಗರಿಷ್ಠ 20,000 ರೂ. ಮಾತ್ರ ವಿನಿಮಯ ಮಾಡಿಕೊಳ್ಳಲು ಅವಕಾಶ ಮಾಡಲಾಗಿದೆ. ಆರ್‌ಬಿಐ ಬ್ಯಾಂಕ್‌ಗಳಿಗೆ ಈ ಬಗ್ಗೆ ಖಡಕ್ ಸೂಚನೆ ರವಾನಿಸಿದೆ.
ಒಟ್ನಲ್ಲಿ 2016ರ ಬಳಿಕ ನೋಟು ಚಲಾವಣೆ ವಿಚಾರದಲ್ಲಿ ಮಹತ್ವದ ಆದೇಶ ಹೊರಬಿದ್ದಿದೆ. ಇದರೊಂದಿಗೆ ಲೋಕಸಭಾ ಚುನಾವಣೆಗೆ ಮೊದಲೇ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಜನರಿಗೆ ತೊಂದರೆ ಆಗದ ರೀತಿ 2000 ರೂಪಾಯಿ ಮುಖಬೆಲೆಯ ನೋಟುಗಳನ್ನ ಬದಲಾಯಿಸಿ ಕೊಡುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಖಡಕ್ ಸೂಚನೆ ರವಾನಿಸಿದೆ.












Click it and Unblock the Notifications