CT Ravi: ಹರಕು ಬಾಯಿ ಸಿಟಿ ರವಿ, ಸೋಷಿಯಲ್ ಮೀಡಿಯಾದಲ್ಲಿ ಇಂತಹದ್ದೊಂದು ಆರೋಪ!
ಸಿ.ಟಿ. ರವಿ ಭಾರಿ ದೊಡ್ಡ ಸಂಕಷ್ಟಕ್ಕೆ ಸಿಲುಕಿ ಇದೀಗ ಪೊಲೀಸರ ಹಿಡಿತದಲ್ಲಿ ಒದ್ದಾಡ್ತಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಜೊತೆ ನಿನ್ನೆ ಕಾಂಗ್ರೆಸ್ ನಾಯಕರು ಸದನದಲ್ಲಿ ಪ್ರತಿಭಟಿಸುವ ವೇಳೆ ಮಾಜಿ ಸಚಿವ ಸಿಟಿ ರವಿ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂತು. ಸಿಟಿ ರವಿ ವಿರುದ್ಧ ಈ ಆರೋಪವನ್ನು ಕಾಂಗ್ರೆಸ್ ನಾಯಕರು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ದೊಡ್ಡ ಮಟ್ಟದ ಹೋರಾಟಕ್ಕೂ ವೇದಿಕೆ ಸಿದ್ಧವಾಗಿದೆ. ಅದಕ್ಕಿಂತ ಮೊದಲೇ ಸಿಟಿ ರವಿ ಅವರಿಗೆ ಸೋಷಿಯಲ್ ಮೀಡಿಯಾದಲ್ಲೂ ಶಾಕ್ ಸಿಗುತ್ತಿದೆ!
ಹೌದು, ಸಿಟಿ ರವಿ ವಿರುದ್ಧ ಇದೀಗ ಕಾಂಗ್ರೆಸ್ ಕಾರ್ಯಕರ್ತರು & ಕಾಂಗ್ರೆಸ್ ನಾಯಕರೆಲ್ಲಾ ಸೇರಿ ಬೃಹತ್ ಪ್ರಮಾಣದ ಹೋರಾಟ ಆರಂಭಿಸಿದ್ದಾರೆ. ಇದರ ಜೊತೆಗೆ ಸಿಟಿ ರವಿ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕಂಪ್ಲೆಂಟ್ ಕೂಡ ನೀಡಿದ್ದಾರೆ. ಸಿಟಿ ರವಿ ವಿರುದ್ಧ ನಿನ್ನೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಾಯ್ದೆ ಅಡಿಯಲ್ಲಿ, ಹಲವು ಸೆಕ್ಷನ್ ಹಾಕಿ ಕೇಸ್ ದಾಖಲು ಮಾಡಲಾಗಿತ್ತು.

ಹೀಗಾಗಿಯೇ ಜೈಲು ಸೇರಿ, ಪರದಾಡುತ್ತಿರುವ ಸಿಟಿ ರವಿ ಅವರ ವಿರುದ್ಧ ಇದೀಗ ಸೋಷಿಯಲ್ ಮೀಡಿಯಾದಲ್ಲೂ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಸಿಟಿ ರವಿ ಇಂತಹ ಮಾತನ್ನು ಸದನದ ಒಳಗೆ ಬಳಸಿರುವುದು ನಿಜವೇ ಆಗಿದ್ದರೆ ತಕ್ಕ ಶಿಕ್ಷೆ ಆಗಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಇದರ ಜೊತೆಯಲ್ಲೇ, ಹರಕು ಬಾಯಿ ಸಿಟಿ ರವಿ ಅಂತಾ...
ಹರಕು ಬಾಯಿ ಸಿಟಿ ರವಿ ಅಂತಾ...
ಸಿ.ಟಿ. ರವಿ ಮೇಲೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆಂಬಲಿಗರು ಹಲ್ಲೆ ಮಾಡಲು ಪ್ರಯತ್ನಿಸಿದ್ದರು ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಅಶ್ಲೀಲವಾದ ಪದ ಬಳಕೆ ಮಾಡಿರುವ ಆರೋಪ ಹಿನ್ನೆಲೆ ಸಿ.ಟಿ. ರವಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಗರಂ ಆಗಿದ್ದರು. ಹೀಗಿದ್ದಾಗಲೇ ಸೋಷಿಯಲ್ ಮೀಡಿಯಾದಲ್ಲಿ, ಹರಕು ಬಾಯಿ ಸಿಟಿ ರವಿ ಅಂತಾ ಜನ ಆರೋಪ ಮಾಡುತ್ತಿದ್ದಾರೆ!
ತೊಡೆತಟ್ಟಿದ ಬಿಜೆಪಿ & ಕಾಂಗ್ರೆಸ್ ಲೀಡರ್ಸ್!
ಒಟ್ಟಾರೆ, ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆಗೆ ವೇದಿಕೆ ಆಗಬೇಕಿದ್ದ ಬೆಳಗಾವಿ ಇದೀಗ ಬೇಡವಾದ ವಿಚಾರಕ್ಕೆ ಸದ್ದು ಮಾಡುತ್ತಿದೆ. ಹಾಗೇ ಈ ವಿಚಾರ ಮತ್ತಷ್ಟು ತಿರುವು ಪಡೆಯುವ ಸಾಧ್ಯತೆ ಕೂಡ ಇದೆ. ಇನ್ನೊಂದು ಕಡೆ ಕಾಂಗ್ರೆಸ್ & ಬಿಜೆಪಿ ನಾಯಕರ ಪಡೆ ಈ ವಿಚಾರದಲ್ಲಿ ತೊಡೆತಟ್ಟಿ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಕರ್ನಾಟಕ ರಾಜ್ಯದ ಈ ಘಟನೆ ರಾಷ್ಟ್ರೀಯ ಸುದ್ದಿ ಆಗುತ್ತಿದೆ. ಮತ್ತೊಂದು ಕಡೆ ಸಿಟಿ ರವಿ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.












Click it and Unblock the Notifications