ಕೊರೊನಾ ಭೀತಿ ನಡುವೆ ಮದ್ಯ ಪ್ರಿಯರಿಗೆ ಸಿಹಿ ಸುದ್ದಿ
ಬೆಂಗಳೂರು, ಮಾರ್ಚ್ 17 : ಕರ್ನಾಟಕ ಸರ್ಕಾರ ಶುಕ್ರವಾರ ಪಬ್, ನೈಟ್ ಕ್ಲಬ್‌ಗಳನ್ನು ಒಂದು ವಾರಗಳ ಕಾಲ ಬಂದ್ ಮಾಡುವಂತೆ ಆದೇಶ ನೀಡಿತು. ಆದರೆ, ಬಾರ್ ಅಂಡ್ ರೆಸ್ಟೋರೆಂಟ್ ಮುಚ್ಚುವ ವಿಚಾರದಲ್ಲಿ ಸ್ಪಷ್ಟನೆ ಇರಲಿಲ್ಲ.
Recommended Video
ಅಬಕಾರಿ ಇಲಾಖೆ ಈ ಕುರಿತು ಸ್ಪಷ್ಟನೆ ನೀಡಿದೆ. ಸಿಎಲ್-4 ಲೈಸೆನ್ಸ್ ಹೊಂದಿರುವ ಕ್ಲಬ್ ಮತ್ತು ಪಬ್‌ಗಳನ್ನು ಮಾತ್ರ ಮುಚ್ಚಲು ಆದೇಶ ನೀಡಲಾಗಿದೆ ಎಂದು ಹೇಳಿದೆ. ಇದರಿಂದಾಗಿ ಮದ್ಯ ಮಾರಾಟ ಮಾಡುವ ಶೇ 92ರಷ್ಟು ಅಂಗಡಿಗಳು ಬಾಗಿಲು ಮುಚ್ಚುವುದಿಲ್ಲ.
ಕೊರೊನಾ ಹರಡುವ ಭೀತಿಯಲ್ಲಿ ಸರ್ಕಾರ ಮಾಲ್, ಚಿತ್ರಮಂದಿರ, ಪಬ್, ನೈಟ್ ಕ್ಲಬ್ ಬಂದ್ ಮಾಡಲು ಆದೇಶ ನೀಡಿತ್ತು. ಇದರಿಂದಾಗಿ ಮಾಲ್‌ಗಳ ಒಳಗೆ ಇರುವ ಮದ್ಯದ ಅಂಗಡಿಗಳನ್ನು ಮುಚ್ಚಲಾಗಿದೆ. ಆದರೆ, ಬಾರ್ ಅಂಡ್ ರೆಸ್ಟೋರೆಂಟ್ ಮುಚ್ಚಿಲ್ಲ.

ಹೆಚ್ಚು ಜನಸಂದಣಿ ಸೇರುವುದನ್ನು ತಪ್ಪಿಸಲು ಪಬ್, ನೈಟ್ ಕ್ಲಬ್ ಮುಚ್ಚಲು ಆದೇಶ ನೀಡಲಾಗಿದೆ. ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಯಾವುದೇ ಸೂಚನೆಗಳನ್ನು ನೀಡಿಲ್ಲ. 100ಕ್ಕಿಂತ ಕಡಿಮೆ ಜನ ಸೇರಿದರೆ ನಾವು ದಂಡ ಹಾಕುವುದಿಲ್ಲ ಎಂದು ಅಬಕಾರಿ ಇಲಾಖೆ ಹೇಳಿದೆ.
ಮಾರ್ಚ್ 16ರ ಅಬಕಾರಿ ಇಲಾಖೆ ಪ್ರಕಟಣೆ ಪ್ರಕಾರ ಕರ್ನಾಟಕ ಸರ್ಕಾರದ ಸೂಚನೆಯಂತೆ 800 ಮದ್ಯ ಮಾರಾಟ ಮಾಡುವ ಪಬ್, ನೈಟ್ ಕ್ಲಬ್ ಬಂದ್ ಮಾಡಲಾಗಿದೆ. ಮಾರ್ಚ್ 21ರ ತನಕ ಇವುಗಳು ಮುಚ್ಚಿರುತ್ತವೆ.
ರಾಜ್ಯಾದ್ಯಂತ 10 ಸಾವಿರ ಮದ್ಯ ಮಾರಾಟ ಅಂಗಡಿಗಳು, ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್‌ಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. ಬೆಂಗಳೂರು ನಗರದಲ್ಲಿ ಪಬ್, ನೈಟ್ ಕ್ಲಬ್ ಬಾಗಿಲು ಮುಚ್ಚುವ ಕುರಿತು ಬಿಬಿಎಂಪಿ ಹೊರಡಿಸಿರುವ ಆದೇಶದಲ್ಲಿಯೇ ಗೊಂದಲವಿದೆ.
ಶುಕ್ರವಾರದ ಸರ್ಕಾರದ ಆದೇಶದ ಬಳಿಕವೂ ಬೆಂಗಳೂರಲ್ಲಿ ಕೆಲವು ಪಬ್, ನೈಟ್ ಕ್ಲಬ್ ಬಾಗಿಲು ತೆರೆದಿದ್ದವು ಎಂಬ ಬಗ್ಗೆ ಚರ್ಚೆ ನಡೆಯುತ್ತಿತ್ತು. ಇದರಿಂದಾಗಿ ಅಬಕಾರಿ ಇಲಾಖೆ ಪ್ರಕಟಣೆ ಮೂಲಕ ಸ್ಪಷ್ಟನೆಯನ್ನು ನೀಡಿದೆ.












Click it and Unblock the Notifications