ಕೊರೊನಾ 1 ವಾರದ ವರದಿ: ಎಚ್ಚರ, 'ಮೈಮರೆಯಬೇಡಿ' ಎನ್ನುತ್ತಿದೆ ಹೆಲ್ತ್ ಬುಲೆಟಿನ್

ಬೆಂಗಳೂರು, ಅ 21: ಕಳೆದ ಸುಮಾರು ಹದಿನೆಂಟು ತಿಂಗಳಿನಿಂದ ಜನರ ನೆಮ್ಮದಿಯನ್ನು ಹಾಳು ಮಾಡಿರುವ ಕೊರೊನಾ ಸೋಂಕು, ಇನ್ನೂ ಪೂರ್ಣ ಪ್ರಮಾಣದಲ್ಲಿ ದೂರವಾಗುತ್ತಿಲ್ಲ. ಕಳೆದ ಒಂದು ವಾರದ ರಾಜ್ಯ ಆರೋಗ್ಯ ಇಲಾಖೆಯ ಡೇಟಾ ಅವಲೋಕಿಸಿದಾಗ ಹೊಸ ಸೋಂಕಿತರ ಸಂಖ್ಯೆ ಮತ್ತು ಪಾಸಿಟಿವಿಟಿ ರೇಟ್ ನಿಧಾನಗತಿಯಲ್ಲಿ ಏರುತ್ತಿದೆ.

ಕೋವಿಡ್ ನಿರ್ಬಂಧವನ್ನೆಲ್ಲಾ ರಾಜ್ಯ ಸರಕಾರ ಬಹುತೇಕ ಸಡಿಲಗೊಳಿಸುತ್ತಿರುವುದರಿಂದ, ಸಾರ್ವಜನಿಕರು ಕೊರೊನಾ ಮಾರ್ಗಸೂಚಿಯ ಪಾಲನೆ ಕಡೆ ಗಮನವನ್ನು ಕೊಡುತ್ತಿಲ್ಲ. ಇನ್ನು, ಹೆಚ್ಚಿನ ಟೈರ್ 2-3 ನಗರಗಳಲ್ಲಿ ಜನರು ಕನಿಷ್ಠ ಮಾಸ್ಕ್ ಅನ್ನೂ ಧರಿಸುತ್ತಿಲ್ಲ. ಗ್ರಾಮಾಂತರ ಭಾಗದಲ್ಲಂತೂ ಕೇಳುವುದೇ ಬೇಡ. ಹಳ್ಳಿ ಕಡೆಯಂತೂ ಮಾಸ್ಕ್ ಧರಿಸಿಕೊಂಡು ಹೋದರೆ, ನೀವು ಬೆಂಗಳೂರಿನಿಂದ ಬಂದಿದ್ದೀರಾ ಎನ್ನುವ ಪ್ರಶ್ನೆ ಎದುರಾಗುತ್ತಿದೆ.

ಥಿಯೇಟರ್ ಪೂರ್ಣ ಸಾಮರ್ಥ್ಯದೊಂದಿಗೆ ಪ್ರದರ್ಶನ ನೀಡಲು ಸರಕಾರ ಅನುಮತಿ ನೀಡಿದ ನಂತರ, ಚಿತ್ರ ರಸಿಕರು ಚಿತ್ರಮಂದಿರದ ಮುಂದೆ ಜಮಾಯಿಸುತ್ತಿದ್ದಾರೆ. ಹಬ್ಬಗಳ ಸೀಸನ್, ಸಾಲುಸಾಲು ರಜೆಗಳು ಇರುವುದರಿಂದ ಎಲ್ಲಾ ಕಡೆ ಜನವೋ ಜನ. "ದಕ್ಷಿಣ ಕನ್ನಡವೂ ಸೇರಿದಂತೆ ರಾಜ್ಯದೆಲ್ಲಡೆ ಕೊರೊನಾ ನಿಯಂತ್ರಣದಲ್ಲಿದೆ. ಆದರೂ, ಮುಂದಿನ ಕೆಲವು ತಿಂಗಳು ಜನರು ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು" ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಜನರಲ್ಲಿ ಮನವಿ ಮಾಡಿದ್ದಾರೆ.

ಕರ್ನಾಟಕ ಆರೋಗ್ಯ ಇಲಾಖೆ ಬಿಡುಗಡೆ ಮಾಡುವ ಹೆಲ್ತ್ ಬುಲೆಟಿನ್ ಅನ್ನು ಅವಲೋಕಿಸಿದಾದ (ಕಳೆದ ಒಂದು ವಾರದ) ಜನರು ಮೈಮೆರೆಯಬಾರದು ಎನ್ನುವ ಎಚ್ಚರಿಕೆ ಎದುರಾಗುತ್ತಿದೆ. ಯಾಕೆಂದರೆ, ಹೊಸ ಸೋಂಕಿತರ ಸಂಖ್ಯೆ ಮತ್ತು ಪಾಸಿಟಿವಿಟಿ ರೇಟ್ ನಿಧಾನಗತಿಯಲ್ಲಿ ಏರುತ್ತಿರುವುದು. ಆ ಅಂಕಿಅಂಶ ಹೀಗಿದೆ:

 ಕೊರೊನಾ 1 ವಾರದ ವರದಿ: ಅಕ್ಟೋಬರ್ 14

ಕೊರೊನಾ 1 ವಾರದ ವರದಿ: ಅಕ್ಟೋಬರ್ 14

ದಿನಾಂಕ: ಅಕ್ಟೋಬರ್ 14
ಇಂದಿನ ಹೊಸ ಪ್ರಕರಣಗಳು: 310
ಇಂದು ಬಿಡುಗಡೆಯಾದವರು: 347
ಸಕ್ರಿಯ ಪ್ರಕರಣಗಳು: 9,578
ಇಂದು ಮೃತ ಪಟ್ಟವರು: 6
ಒಟ್ಟು ಮೃತ ಪಟ್ಟವರು: 37,922
ಪಾಸಿಟಿವಿಟಿ ರೇಟ್: ಶೇ. 0.26%
ಒಟ್ಟಾರೆ ಸಾವಿನ ಪ್ರಮಾಣ: ಶೇ.1.93%

 ಕೊರೊನಾ 1 ವಾರದ ವರದಿ: ಅಕ್ಟೋಬರ್ 15

ಕೊರೊನಾ 1 ವಾರದ ವರದಿ: ಅಕ್ಟೋಬರ್ 15

ದಿನಾಂಕ: ಅಕ್ಟೋಬರ್ 15
ಇಂದಿನ ಹೊಸ ಪ್ರಕರಣಗಳು: 470
ಇಂದು ಬಿಡುಗಡೆಯಾದವರು: 368
ಸಕ್ರಿಯ ಪ್ರಕರಣಗಳು: 9,671
ಇಂದು ಮೃತ ಪಟ್ಟವರು: 9
ಒಟ್ಟು ಮೃತ ಪಟ್ಟವರು: 37,931
ಪಾಸಿಟಿವಿಟಿ ರೇಟ್: ಶೇ. 0.50%
ಒಟ್ಟಾರೆ ಸಾವಿನ ಪ್ರಮಾಣ: ಶೇ.1.91%

 ಕೊರೊನಾ 1 ವಾರದ ವರದಿ: ಅಕ್ಟೋಬರ್ 16

ಕೊರೊನಾ 1 ವಾರದ ವರದಿ: ಅಕ್ಟೋಬರ್ 16

ದಿನಾಂಕ: ಅಕ್ಟೋಬರ್ 16
ಇಂದಿನ ಹೊಸ ಪ್ರಕರಣಗಳು: 264
ಇಂದು ಬಿಡುಗಡೆಯಾದವರು: 421
ಸಕ್ರಿಯ ಪ್ರಕರಣಗಳು: 9,508
ಇಂದು ಮೃತ ಪಟ್ಟವರು: 6
ಒಟ್ಟು ಮೃತ ಪಟ್ಟವರು: 37,937
ಪಾಸಿಟಿವಿಟಿ ರೇಟ್: ಶೇ. 0.43%
ಒಟ್ಟಾರೆ ಸಾವಿನ ಪ್ರಮಾಣ: ಶೇ.2.27%

 ಕೊರೊನಾ 1 ವಾರದ ವರದಿ: ಅಕ್ಟೋಬರ್ 17

ಕೊರೊನಾ 1 ವಾರದ ವರದಿ: ಅಕ್ಟೋಬರ್ 17

ದಿನಾಂಕ: ಅಕ್ಟೋಬರ್ 17
ಇಂದಿನ ಹೊಸ ಪ್ರಕರಣಗಳು: 326
ಇಂದು ಬಿಡುಗಡೆಯಾದವರು: 380
ಸಕ್ರಿಯ ಪ್ರಕರಣಗಳು: 9,450
ಇಂದು ಮೃತ ಪಟ್ಟವರು: 4
ಒಟ್ಟು ಮೃತ ಪಟ್ಟವರು: 37,941
ಪಾಸಿಟಿವಿಟಿ ರೇಟ್: ಶೇ. 0.41%
ಒಟ್ಟಾರೆ ಸಾವಿನ ಪ್ರಮಾಣ: ಶೇ.1.22%

 ಕೊರೊನಾ 1 ವಾರದ ವರದಿ: ಅಕ್ಟೋಬರ್ 18

ಕೊರೊನಾ 1 ವಾರದ ವರದಿ: ಅಕ್ಟೋಬರ್ 18

ದಿನಾಂಕ: ಅಕ್ಟೋಬರ್ 18
ಇಂದಿನ ಹೊಸ ಪ್ರಕರಣಗಳು: 214
ಇಂದು ಬಿಡುಗಡೆಯಾದವರು: 488
ಸಕ್ರಿಯ ಪ್ರಕರಣಗಳು: 9,164
ಇಂದು ಮೃತ ಪಟ್ಟವರು: 12
ಒಟ್ಟು ಮೃತ ಪಟ್ಟವರು: 37,953
ಪಾಸಿಟಿವಿಟಿ ರೇಟ್: ಶೇ. 0.27%
ಒಟ್ಟಾರೆ ಸಾವಿನ ಪ್ರಮಾಣ: ಶೇ.5.61%

 ಕೊರೊನಾ 1 ವಾರದ ವರದಿ: ಅಕ್ಟೋಬರ್ 19

ಕೊರೊನಾ 1 ವಾರದ ವರದಿ: ಅಕ್ಟೋಬರ್ 19

ದಿನಾಂಕ: ಅಕ್ಟೋಬರ್ 19
ಇಂದಿನ ಹೊಸ ಪ್ರಕರಣಗಳು: 349
ಇಂದು ಬಿಡುಗಡೆಯಾದವರು: 399
ಸಕ್ರಿಯ ಪ್ರಕರಣಗಳು: 9,100
ಇಂದು ಮೃತ ಪಟ್ಟವರು: 14
ಒಟ್ಟು ಮೃತ ಪಟ್ಟವರು: 37,967
ಪಾಸಿಟಿವಿಟಿ ರೇಟ್: ಶೇ. 0.41%
ಒಟ್ಟಾರೆ ಸಾವಿನ ಪ್ರಮಾಣ: ಶೇ.4.01%

 ಕೊರೊನಾ 1 ವಾರದ ವರದಿ: ಅಕ್ಟೋಬರ್ 20

ಕೊರೊನಾ 1 ವಾರದ ವರದಿ: ಅಕ್ಟೋಬರ್ 20

ದಿನಾಂಕ: ಅಕ್ಟೋಬರ್ 20
ಇಂದಿನ ಹೊಸ ಪ್ರಕರಣಗಳು: 462
ಇಂದು ಬಿಡುಗಡೆಯಾದವರು: 479
ಸಕ್ರಿಯ ಪ್ರಕರಣಗಳು: 9,074
ಇಂದು ಮೃತ ಪಟ್ಟವರು: 9
ಒಟ್ಟು ಮೃತ ಪಟ್ಟವರು: 37,976
ಪಾಸಿಟಿವಿಟಿ ರೇಟ್: ಶೇ. 0.39%
ಒಟ್ಟಾರೆ ಸಾವಿನ ಪ್ರಮಾಣ: ಶೇ. 1.94%

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+