ಗೃಹಲಕ್ಷ್ಮಿ: ಕೇಂದ್ರದ ರಿಪೋರ್ಟ್ ತೋರಿಸಿ ಗ್ಯಾರಂಟಿ ಸಕ್ಸಸ್ ಎಂದ ಕಾಂಗ್ರೆಸ್‌, ಕರ್ನಾಟಕವೇ ಅಗ್ರಸ್ಥಾನದಲ್ಲಿ

ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಐದು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸಿದೆ. ಚುನಾವಣೆ ಪೂರ್ವದಲ್ಲಿ (ಕರ್ನಾಟಕ ವಿಧಾನಸಭೆ ಚುನಾವಣೆ) ಸಮಯದಲ್ಲೇ ಕಾಂಗ್ರೆಸ್ ಪಕ್ಷವು ಹಂತ ಹಂತವಾಗಿ ಐದು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಪ್ರಚಾರಪಡಿಸಿತ್ತು.

ಅಧಿಕಾರಕ್ಕೆ ಬಂದ ಮೇಲೆ ಐದು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಕಾಲಮಿತಿಯಲ್ಲಿ ಜಾರಿಯೂ ಮಾಡಿದೆ. ಆದರೆ, ವಿರೋಧ ಪಕ್ಷಗಳು ಈಗಲೂ ಗ್ಯಾರಂಟಿ ಯೋಜನೆಗಳನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುವುದನ್ನು ನಿಲ್ಲಿಸಿಲ್ಲ. ಇದೀಗ ಕಾಂಗ್ರೆಸ್‌ ಪಕ್ಷವು ಕೇಂದ್ರ ಸರ್ಕಾರದ ಜಿಡಿಪಿ ವರದಿಯನ್ನು ಹಿಡಿದು ಬಿಜೆಪಿಗೆ ಟಾಂಗ್‌ ಕೊಟ್ಟಿದೆ.

Congress shows center s report amp amp said guarantee schemes success

ರಾಜ್ಯದಲ್ಲಿ ಐದು ಪ್ರಮುಖ ಗ್ಯಾರಂಟಿ ಯೋಜನೆಗಳಿಂದಲೇ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಕ್ಕೆ ಸಹಾಯವಾಯಿತು. ಇದೀಗ ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ಮುಜುಗರಕ್ಕೂ ಒಳಗಾಗಿದ್ದು, ಸಹ ಇದೆ.

ಕಾಂಗ್ರೆಸ್‌ನ ಶಾಸಕರೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಿರೀಕ್ಷಿತ ಪ್ರಮಾಣದ ಸೀಟುಗಳು ಬರದೆ ಇದ್ದಾಗ ಗ್ಯಾರಂಟಿ ಯೋಜನೆಗಳು ಸ್ಥಗಿತ ಮಾಡುವುದು ಒಳ್ಳೆಯದು ಎಂದು ಹೇಳಿದ್ದರು. ಇದು ಕಾಂಗ್ರೆಸ್‌ನಲ್ಲೇ ಸಾಕಷ್ಟು ಪರ -ವಿರೋಧ ಚರ್ಚೆಗೆ ಕಾರಣವಾಗಿತ್ತು. ಈಗ ಹೇಳಲು ಹೊರಟಿರುವ ವಿಷಯವೇನೆಂದರೆ, ಕಾಂಗ್ರೆಸ್‌ ರಾಜ್ಯದಲ್ಲಿ ಪರಿಚಯಿಸಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದೆ.

ದೇಶದ ಜಿಡಿಪಿಯಲ್ಲಿ ಕರ್ನಾಟಕದ್ದೇ ಸಿಂಹಪಾಲು: ದೇಶದ ಜಿಡಿಪಿಯಲ್ಲಿ ಕರ್ನಾಟಕದ್ದೇ ಸಿಂಹಪಾಲು ಎಂದು ಕಾಂಗ್ರೆಸ್‌ ಹೇಳಿದೆ ಸೋಷಿಯಲ್‌ ಮೀಡಿಯಾದಲ್ಲಿ ಇಂಡಿಯಾ ಟುಡೆಯ ವರದಿಯನ್ನು ಹಂಚಿಕೊಂಡಿರುವ ಕಾಂಗ್ರೆಸ್‌. ದೇಶದ ಜಿಡಿಪಿಯಲ್ಲಿ ಕರ್ನಾಟಕದ ಪಾಲು ಅಗ್ರಸ್ಥಾನಕ್ಕೆ ತಲುಪಿದೆ.

ಅಲ್ಲದೇ ಜಿಎಸ್‌ಟಿ ಸಂಗ್ರಹದಲ್ಲೂ ಕರ್ನಾಟಕದ ಪಾಲು ದೊಡ್ಡದಿದೆ ಎಂದು ಹೇಳಿದೆ. ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಜನಸಾಮಾನ್ಯರ ಖರೀದಿ ಸಾಮರ್ಥ್ಯವನ್ನು ಗ್ಯಾರಂಟಿ ಯೋಜನೆಗಳು ಹೆಚ್ಚಿಸಿವೆ ಅಲ್ಲದೇ ಗ್ಯಾರಂಟಿ ಯೋಜನೆಗಳು ಯಶಸ್ವಿ ಯೋಜನೆಗಳಾಗಿ ಹೊರಹೊಮ್ಮಿವೆ ಎಂದೂ ಕಾಂಗ್ರೆಸ್‌ ಹೇಳಿದೆ.

ಕರ್ನಾಟಕದ ಜಿಡಿಪಿ ಪಾಲು ಹೆಚ್ಚಳ: ಕರ್ನಾಟಕದ ಜಿಡಿಪಿ ಪ್ರಮಾಣವು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಇಂಡಿಯಾ ಟುಡೆಗ್ರೂಪ್‌ ವರದಿ ಮಾಡಿದೆ. ಈ ವರದಿಯ ಪ್ರಕಾರ, ಕರ್ನಾಟಕದ ಜಿಡಿಪಿ ಪ್ರಮಾಣವು ಶೇ 2.8ರಷ್ಟು, ಗುಜರಾತ್‌ ಹಾಗೂ ದೆಹಲಿಯ ಜಿಡಿಪಿಯು ಅನುಕ್ರಮವಾಗಿ ಶೇ 2.3% ಹಾಗೂ 2.2%ರಷ್ಟು ಹೆಚ್ಚಳ ಕಂಡಿದೆ.

ಆಂಧ್ರಪ್ರದೇಶ ಹಾಗೂ ಹರಿಯಾಣ ರಾಜ್ಯಗಳು ಅನುಕ್ರಮವಾಗಿ ಶೇ 2%ರಷ್ಟು ಹಾಗೂ ಶೇಕಡ 1.7%ರಷ್ಟು ಇದೆ. ಉಳಿದಂತೆ ಅಸ್ಸಾಂ, ಪಂಜಾಬ್‌, ಬಿಹಾರ್‌, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಜಿಡಿಪಿಯಲ್ಲಿ ಗಣನೀಯ ಕುಸಿತವನ್ನು ಕಂಡಿದೆ.

ಹಲವು ವರ್ಷದ ಸಾಧನೆಯನ್ನು ಗ್ಯಾರಂಟಿಗೆ ಹೋಲಿಕೆ: ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳಿಗಾಗಿ ದತ್ತಾಂಶ (ಡೇಟಾ) ಸಮರ್ಥನೆ ಮಾಡಿಕೊಳ್ಳಲು ಬಳಸಿಕೊಳ್ಳುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಜನರ ಖರೀದಿ ಸಾಮರ್ಥ್ಯ ಹೆಚ್ಚಾಗಿದೆ ಎಂದು ಕಾಂಗ್ರೆಸ್‌ ಹೇಳಿಕೊಳ್ಳುತ್ತಿದೆ.

ಆದರೆ, ಜಿಡಿಪಿ ಅಂದರೆ ಒಟ್ಟು ದೇಶೀಯ ಉತ್ಪನ್ನದ ಅಂಕಿ - ಅಂಶವನ್ನು ಹಂಚಿಕೊಂಡಿದೆಯಾದರೂ, ಈ ಮಾಹಿತಿಯಲ್ಲಿ ಆರ್ಥಿಕ ವರ್ಷ 1961 ಹಾಗೂ ಆರ್ಥಿಕ ವರ್ಷ 2024ದ ನಡುವೆ ದೇಶದ ಪ್ರಮುಖ ರಾಜ್ಯಗಳು ಜಿಡಿಪಿ ಕೊಡುಗೆಯಲ್ಲಿ ಯಾವ ರೀತಿ ಬದಲಾಗಿದೆ ಎಂದು ಹೇಳಲಾಗಿದೆ.

ಇನ್ನು ಗ್ಯಾರಂಟಿ ಯೋಜನೆ ಕಾಂಗ್ರೆಸ್‌ 2023ನೇ ಸಾಲಿನಲ್ಲಿ ಅಧಿಕಾರಕ್ಕೆ ಬಂದ ಮೇಲೆ ಜಾರಿ ಮಾಡಿದೆ. ಜಿಡಿಪಿ ಹೆಚ್ಚಳವಾಗಿರುವುದು ನಿಜ. ಆದರೆ, ಗ್ಯಾರಂಟಿ ಯೋಜನೆಗಳಿಂದಲೇ ಜಿಡಿಪಿ ಹೆಚ್ಚಳವಾಗಿದೆ ಎನ್ನುವುದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಡೆಟಾವನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+