Karnataka Caste Census Row: "ನಾಯಿಗಳು ಇರುವ ಮನೆಯಲ್ಲಿ ಜಾತಿ ಗಣತಿ ಮಾಡೋಕೆ ಆಗಿಲ್ಲ!"
Karnataka Caste Census Row: ಕರ್ನಾಟಕದಲ್ಲಿ ಜಾತಿ ಗಣತಿ ವರದಿಯು ಭಾರೀ ವಿವಾದವನ್ನು ಸೃಷ್ಟಿಸಿರುವ ಸಂದರ್ಭದಲ್ಲಿಯೇ ಕಾಂಗ್ರೆಸ್‌ನ ಒಬ್ಬೊಬ್ಬರು ನಾಯಕರು ಒಂದೊಂದು ಹೇಳಿಕೆಗಳನ್ನು ಕೊಡುತ್ತಿದ್ದು. ಕಾಂಗ್ರೆಸ್ ನಾಯಕರು ಹಾಗೂ ಸಚಿವರ ಹೇಳಿಕೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೂ ಕೆಲವು ಕಾಂಗ್ರೆಸ್ ನಾಯಕರು ಕೊಟ್ಟಿರುವ ಹೇಳಿಕೆಗಳು ನಗೆಪಾಟಲಿಗೂ ಗುರಿಯಾಗಿದೆ. ಕಾಂಗ್ರೆಸ್‌ನ ಪ್ರಭಾವಿ ನಾಯಕರು, ಜಾತಿ ಗಣತಿ ವರದಿಯ ಅಂಕಿ - ಸಂಖ್ಯೆಯ ಬಗ್ಗೆ ಮಾತನಾಡುವಾಗ ಕೆಲವರ ಮನೆಯಲ್ಲಿ ನಾಯಿಗಳು ಇರುತ್ತಿವೆ ಎನ್ನುವುದು ಸೇರಿದಂತೆ ಯಾವ ಕಾರಣಕ್ಕೆ ಸಂಖ್ಯೆ ಏರುಪೇರಾಗಿರಬಹುದು ಎನ್ನುವುದನ್ನು ಮಾತನಾಡಿದ್ದು ಇದು ಸೋಷಿಯಲ್ ಮೀಡಿಯಾದಲ್ಲಿ ಜನ ನಗುವುದಕ್ಕೆ ಕಾರಣವಾಗಿದೆ.
ಕರ್ನಾಟಕ ಸರ್ಕಾರವು ಜಾತಿ ಗಣತಿ ವರದಿಯನ್ನು ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಿಂದ ತಪ್ಪಿಸಿಕೊಳ್ಳಲು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎನ್ನುವ ಆರೋಪಗಳ ನಡುವೆಯೇ ಕಾಂಗ್ರೆಸ್‌ನ ನಾಯಕರು ಕೊಡುತ್ತಿರುವ ಹೇಳಿಕೆಗಳು ಜನರು ನಗುವಂತೆ ಮಾಡಿವೆ. ಈಗಾಗಲೇ ಜಾತಿ ಗಣತಿ ವರದಿಯನ್ನು ಕರ್ನಾಟಕದ ಪ್ರಮುಖ ಜಾತಿಗಳು ವಿರೋಧಿಸಿವೆ. ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ನಾಯಕರು ಸಭೆಗಳನ್ನು ನಡೆಸಿದ್ದಾರೆ. ಇದರೊಂದಿಗೆ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯ ಮಾತ್ರವಲ್ಲದೇ ಈ ಜಾತಿ ಉಪಜಾತಿಗಳ ಜನರನ್ನೂ ಒಂದುಗೂಡಿಸುವ ಪ್ರಯತ್ನಗಳು ನಡೆದಿವೆ.

ಇಷ್ಟೆಲ್ಲ ಮಹತ್ವದ ಬೆಳವಣಿಗೆಗಳು ಹಾಗೂ ಜನಾಕ್ರೋಶದ ನಡುವೆಯೇ ಕಾಂಗ್ರೆಸ್‌ನ ಒಬ್ಬೊಬ್ಬರು ನಾಯಕರು ನೀಡುತ್ತಿರುವ ಹೇಳಿಕೆಗಳು ಭಾರೀ ಟ್ರೋಲ್‌ಗೆ ಕಾರಣವಾಗಿದೆ. ಇದೀಗ ಕಾಂಗ್ರೆಸ್‌ನ ಪ್ರಭಾವಿ ನಾಯಕ ಹಾಗೂ ಮಾಜಿ ಸಚಿವ ಎಚ್.ಎಂ ರೇವಣ್ಣ ಅವರು ಜಾತಿ ಗಣತಿಯಲ್ಲಿ 10% ತಪ್ಪಾಗಿರಬಹುದು ಅಂತ ಹೇಳಿದ್ದಾರೆ. ಮುಂದುವರಿದು ಕೆಲವರು ಮನೆಗಳಲ್ಲಿ ನಾಯಿಗಳನ್ನು ಕಟ್ಟಿ ಹಾಕಿರುತ್ತಾರೆ. ಇನ್ನೂ ಕೆಲವು ಮನೆಗಳಲ್ಲಿ ಬಾಗಿಲು ತೆಗೆದಿರುವುದಿಲ್ಲ ಇನ್ನೂ ಕೆಲವು ಮನೆಗಳಿಗೆ ಹೋಗುವುದಕ್ಕೆ ಸಾಧ್ಯವಾಗಿರುವುದಿಲ್ಲ ಎಂದು ಹೇಳಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ಕಾರಣವಾಗಿದೆ.
ಈ ರೀತಿ ಕೆಲವು ಮನೆಗಳಿಗೆ ಹೋಗಲು ಆಗದೆ ಇರುವುದು ತಪ್ಪಲ್ಲ. ಏನಾದರೂ ಬಿಟ್ಟು ಹೋಗುವುದಕ್ಕೆ ಸಾಧ್ಯವಿದೆ. ಈಗ ಹೇಳುವುದಕ್ಕೆ ಅವಕಾಶ ಅಂತ ಹೇಳಿದ್ದಾರೆ. ಕಾಂಗ್ರೆಸ್ ಹಾಗೂ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ರೇವಣ್ಣ ಅವರು ಈ ರೀತಿ ರಿಯಾಕ್ಟ್ ಮಾಡಿದ್ದಾರೆ.
ಸಾರ್ವಜನಿಕರಿಂದ ವ್ಯಂಗ್ಯ: ಇನ್ನು ಕಾಂಗ್ರೆಸ್ ನಾಯಕರ ಈ ಹೇಳಿಕೆಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್‌ಗಳು ಶುರುವಾಗಿವೆ. ಕಾಂಗ್ರೆಸ್‌ನ ನಾಯಕರು ಹಾಗೂ ಸಚಿವರು ಜಾತಿ ಗಣತಿ ವರದಿಯ ಬಗ್ಗೆ ನೀಡುತ್ತಿರುವ ಹೇಳಿಕೆಗಳೇ ಅವರು ಜಾತಿ ಗಣತಿ ವರದಿಯ ಬಗ್ಗೆ ಎಷ್ಟು ಗಂಭೀರವಾಗಿ ಇದ್ದಾರೆ ಎನ್ನುವುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಜಾತಿ ಗಣತಿ ವರದಿ ಸರಿಯಲ್ಲಿ ಎಲ್ಲಾ ಜಾತಿಗಳ ಜನರ ಸಂಖ್ಯೆಯೂ ಕಡಿಮೆ ಇದೆ. ಅಲ್ಲದೇ ಕಾಂಗ್ರೆಸ್‌ನ ಪ್ರಮುಖ ಸಚಿವರೇ ಈ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿರುವ ಸಂದರ್ಭದಲ್ಲಿ ಕೆಲವು ಕಾಂಗ್ರೆಸ್ ನಾಯಕರು ಈ ರೀತಿ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ ಎಂದು ಜನ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications