ಮಲ್ಲಿಕಾರ್ಜುನ ಖರ್ಗೆಗೆ ಜೀವ ಬೆದರಿಕೆ ಕರೆ, ದೂರು
Recommended Video

ಮಲ್ಲಿಕಾರ್ಜುನ ಖರ್ಗೆಗೆ ಬಂದಿತ್ತಂತೆ ಜೀವ ಬೆದರಿಕೆ ಕರೆ | Oneindia Kannada
ಕಲಬುರಗಿ, ಮಾರ್ಚ್ 11: ಸಂಸದ, ಕಾಂಗ್ರೆಸ್‌ನ ಹಿರಿಯ ಮುಖಂಡ, ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆಯಂತೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ ಅವರೇ ಈ ವಿಷಯ ತಿಳಿಸಿದ್ದು, ಈ ಸಂಬಂಧ ದೆಹಲಿಯ ತುಘಲಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಜೊತೆಗೆ ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ್ ಹಾಗೂ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ವಿಷಯ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

ಕಳೆದ ಒಂದೂವರೆ ತಿಂಗಳಿನಿಂದ ಅನಾಮಿಕ ದೂರವಾಣಿ ಕರೆಗಳು ಪದೇ-ಪದೇ ಬರುತ್ತಿದ್ದು, ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದರು.
ಬೆದರಿಕೆ ಕರೆಗಳಿಂದ ಧೃತಿಗೆಟ್ಟಿಲ್ಲ ಎಂದ ಅವರು ನಾನು ಆರು ವರ್ಷದವನಿದ್ದಾಗಲೇ ಸಾಯಬೇಕಿತ್ತು. ಆದರೆ, 76 ವರ್ಷ ಬದುಕಿದ್ದೇನೆ. ಜನರ ಪ್ರೀತಿ,ವಿಶ್ವಾಸದಿಂದ ಇಷ್ಟು ದಿನ ಬದುಕಿದ್ದೇನೆ ಎಂದರು.











Click it and Unblock the Notifications