• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಗ್ಗೆ ಕಾಂಗ್ರೆಸ್ ನಾಯಕರ ಇದೆಂಥಾ ಮಾತುಗಳು?

|
Google Oneindia Kannada News

ಬೆಂಗಳೂರು, ಅ. 13: ರಾಜ್ಯ ಕಾಂಗ್ರೆಸ್‌ ಪಕ್ಷದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕುರಿತು ಇಬ್ಬರು ಕಾಂಗ್ರೆಸ್ ನಾಯಕರು ಮಾತನಾಡಿಕೊಂಡಿದ್ದಾರೆ. ಡಿ.ಕೆ. ಶಿವಕುಮಾರ್ ಕುರಿತು ಅವರು ಗುಟ್ಟಾಗಿ ಮಾತನಾಡಿಕೊಂಡಿದ್ದು ಬಹಿರಂಗವಾಗಿದೆ. ಆ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಒಡಕು ಸ್ಫೋಟವಾಗುವ ಸಾಧ್ಯತೆಗಳು ಕಂಡು ಬಂದಿವೆ. ಜೊತೆಗೆ ತಮ್ಮ ಪಕ್ಷದ ಅಧ್ಯಕ್ಷರೇ ಸರಿಯಿಲ್ಲ ಎಂದು ಮಾತನಾಡಿಕೊಂಡಿರುವುದು ಕೂಡ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಡಿ.ಕೆ. ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದ್ದು ಹೇಗೆ? ಅವರು ಮಾಡಿರುವ ಹಗರಣಗಳು ಏನು? ಅವರ ಹಿಂಬಾಲಕರಲ್ಲಿ ಇರುವ ಹಣವೆಷ್ಟು? ಎಂಬ ವಿಚಾರಗಳನ್ನು ಇಬ್ಬರೂ ಕಾಂಗ್ರೆಸ್ ನಾಯಕರು ಮಾತನಾಡಿಕೊಂಡಿದ್ದು ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಷ್ಟೇ ಅಲ್ಲ ಬಾಯಿ ಹರಿಬಿಟ್ಟಿರುವ ಆ ನಾಯಕರು ಡಿ.ಕೆ. ಶಿವಕುಮಾರ್ ಕುಡುಕರ ರೀತಿ ಮಾತನಾಡುತ್ತಾರೆ ಎಂದಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಜೊತೆ ಡಿ.ಕೆ. ಶಿವಕುಮಾರ್ ಅವರನ್ನು ಹೋಲಿಕೆ ಮಾಡಿದ್ದಾರೆ. ಅಷ್ಟಕ್ಕೂ ಹೀಗೆ ಮಾತನಾಡಿಕೊಂಡಿರುವ ಕಾಂಗ್ರೆಸ್ ನಾಯಕರು ಯಾರು? ಅವರು ಡಿಕೆಶಿ ಕುರಿತು ಮಾತನಾಡಿರುವ ಸಂಪೂರ್ಣ ವಿವರ ಮುಂದಿದೆ.

ಇಬ್ಬರು ಕಾಂಗ್ರೆಸ್ ನಾಯಕರ ಬಾಯಲ್ಲಿ ಡಿಕೆಶಿ ಬಟಾಬಯಲು!

ಇಬ್ಬರು ಕಾಂಗ್ರೆಸ್ ನಾಯಕರ ಬಾಯಲ್ಲಿ ಡಿಕೆಶಿ ಬಟಾಬಯಲು!

ಇಬ್ಬರು ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಅಧ್ಯಕ್ಷರ ವಿರುದ್ಧ ಮಾತನಾಡಿಕೊಂಡಿರುವುದು ರಾಜ್ಯ ಕಾಂಗ್ರೆಸ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡಲು ಮಂಗಳವಾರ ಸಂಜೆ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮಾಧ್ಯಮಗೋಷ್ಠಿ ಕರೆದಿದ್ದರು. ಆಗ ಮತ್ತೊಬ್ಬ ಕಾಂಗ್ರೆಸ್ ನಾಯಕ ಸಲೀಂ ಉಗ್ರಪ್ಪ ಅವರನ್ನು ಮಾತಿಗೆ ಎಳೆದಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಇಬ್ಬರೂ ನಾಯಕರು ತಮ್ಮ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಗ್ಗೆ ಮಾತನಾಡಿಕೊಂಡಿದ್ದಾರೆ. ಅವರ ಮಾತುಗಳು ಕಾಂಗ್ರೆಸ್ ಪಕ್ಷದಲ್ಲಿ ಬಿರುಗಾಳಿ ಎಬ್ಬಿಸಿವೆ.

ಅಷ್ಟಕ್ಕೂ ಮಾತನಾಡಿಕೊಂಡಿದ್ದು ಏನೇನು? ಇಲ್ಲಿದೆ!

ಅಷ್ಟಕ್ಕೂ ಮಾತನಾಡಿಕೊಂಡಿದ್ದು ಏನೇನು? ಇಲ್ಲಿದೆ!

ಇಬ್ಬರೂ ನಾಯಕರು ಮಾತನಾಡಿಕೊಂಡಿದ್ದನ್ನು ಅವರ ಮಾತಿನಲ್ಲಿಯೇ ಕೇಳಿ ಹೀಗಿದೆ.

ಸಲೀಂ: ಹೇಳಿದ್ನಲ್ಲ ಸರ್, ಹಿಂದೆ 6 ರಿಂದ 8 ಪರ್ಸೆಂಟ್ ಇತ್ತು. ಇವನೇ 12 ಪರ್ಸೆಂಟ್ ಮಾಡಿದ್ದು. ಅಡ್ಜಸ್ಟ್‌ ಮಾಡಿಸೊದ್ರಲ್ಲಿ ಡಿಕೆ (ಡಿ.ಕೆ. ಶಿವಕುಮಾರ್)ದು ಇದೆ. ಉಪ್ಪಾರು, ಜಿ. ಶಂಕರು, ಬಳ್ಳಾರಿಯ ಹನುಮಂತಪ್ಪ, ಗೊತ್ತಲ್ಲ ಸರ್ ಹೊಸಪೇಟೆ. ಇವನು ಉಪ್ಪಾರು ಬೆಂಗಳೂರು, ಜಿ. ಶಂಕರ್ ಉಡುಪಿ.


ಮಾಜಿ ಸಂಸದ ವಿ.ಎಸ್. ಉಗ್ರಪ್ಪ: ಉಪ್ಪಾರ್ ಬಿಜಾಪುರ್.

ಸಲೀಂ: ಬಿಜಾಪುರಾನಾ? ಬಟ್ ಮನೆ ಇಲ್ಲಿ, ಎಸ್‌.ಎಂ. ಕೃಷ್ಣ ಮನೆ ಎದ್ರಿಗೆ. ಅಲ್ಲ ಸರ್. ಇದಿದೆಯಲ್ಲ? ದೊಡ್ಡ ಸ್ಕ್ಯಾಮು ಸರ್. ಕೆದಕ್ತಾ ಹೋದರೆ ಇವ್ರದ್ದು ಬರುತ್ತೆ.

ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದು ಹೇಗೆ?

ಮಾಜಿ ಸಂಸದ ವಿ.ಎಸ್. ಉಗ್ರಪ್ಪ: ನಾ ನಿಂಗೆ ಹೇಳಲಾ? ಕಣ್ ಮುಚ್ಚಿ...

ಸಲೀಂ: ಹೇಳಿದ್ನಲ್ಲ ಸರ್? ನಮ್ ಹುಡುಗಂದು 50 ರಿಂದ 100 ನೂರು ಕೋಟಿ ಇತ್ತು. ಅವ್ನ ಹುಡುಗನೇ ಐವತ್ತರಿಂದ ನೂರು ಕೋಟಿ ಮಾಡವ್ನೆ ಅಂದ್ರೆ ಇವ್ನತ್ರ ಎಷ್ಟಿರಬೇಕು? ಡಿಕೆ ಹತ್ರ? ಲೆಕ್ಕಹಾಕಿ. ಇವ್ನು ಬರಿ ಕಲೆಕ್ಷನ್ ಗಿರಾಕಿ.

ಮಾಜಿ ಸಂಸದ ವಿ.ಎಸ್. ಉಗ್ರಪ್ಪ: ಅದು ನಿಮ್ಗೆ ಗೊತ್ತಿಲ್ಲ. ನಾವೆಲ್ಲ ಪಟ್ ಹಿಡಿದು ಅಧ್ಯಕ್ಷನ್ನ ಮಾಡಿಸಿದ್ವಿ. ಆದ್ರೆ ತಕ್ಕಡಿ ಏಳ್ತಿಲ್ಲ. ಇವೆಲ್ಲ ಕಾರಣದಿಂದ.

ಸಲೀಂ: ಇವೆಲ್ಲ ಕಾರಣದಿಂದ. ಮತ್ತೆ ನೀವು ನೋಡುದ್ರಲ್ಲಾ? ಮಾತಾಡೋವಾಗ ತೊದಲ್ಸಿ ಬಿಡ್ತಾರೆ. ಏನು ಲೋ ಬಿಪಿನಾ? ಏನೊ. ನೋಡಿ ನೀವು ಕುಡುಕ್ರು ಉ..

ಮಾಜಿ ಸಂಸದ ವಿ.ಎಸ್. ಉಗ್ರಪ್ಪ: ಅದನ್ನೇ ಹೇಳಿದ್ದು ಈಗ!

ಸಲೀಂ: ಹ್ಞುಂ ಅದನ್ನೇ ಅವರಿಗೆ ಅಂಡರ್ ಅಷ್ಟು ಅರ್ಥ ಆಗಿಲ್ಲ. ಎಲ್ಲ ಮಿಡಿಯಾದವರು ಏನ್ ಡ್ರಿಂಕ್ಸ್ ಮಾಡಿದ್ರಾ ಅಂತಾರೆ. ಡ್ರಿಂಕ್ಸ್ ಮಾಡಿರಲಿಲ್ಲ. (ನಗು) ಅದು ಆ್ಯಕ್ಚುವಲಿ.. ಹ್ಹ ಹ್ಹ ಹ್ಹ..!

ಮಾಜಿ ಸಂಸದ ವಿ.ಎಸ್. ಉಗ್ರಪ್ಪ: ಆಹ್ಹಹ್ಹಹ್ಹ....!

ಸಲೀಂ: ಲೋ ಬಿಪಿ.. ಇಲ್ಲ ಮಾತನಾಡಬೇಕಾದ್ರ ಬಾರಿ ಎಮೋಶನಲಿ ಹೋಗ್ತಾರೆ. ಬಾಡಿ ಲಾಂಗ್ವೇಜ್ ಹೆಂಗಿದೆ ಸರ್? ಸಿದ್ರಾಮಯ್ಯನೋರದ್ದು? ಖಡಕ್ ಅಂದ್ರೆ ಖಡಕ್. ಇವ್ರದ್ದಿಲ್ಲ!

ವಿಎಸ್ ಉಗ್ರಪ್ಪ ಹಾಗೂ ಸಲೀಂ ಅವರು ಮಾತನಾಡಿಕೊಂಡಿರುವ ಈ ಎಲ್ಲ ಚರ್ಚೆಯು ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದೆ.

  ಸಲೀಂ ಮತ್ತು ಉಗ್ರಪ್ಪ ಹೇಳಿಕೆಗೆ ಡಿಕೆಶಿ ಕೊಟ್ಟ ಪ್ರತಿಕ್ರಿಯೆ | Oneindia Kannada
  ಈ ಚರ್ಚೆ ಬಗ್ಗೆ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ?

  ಈ ಚರ್ಚೆ ಬಗ್ಗೆ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ?

  ಹೀಗೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹಾಗೂ ಅಲ್ಪಸಂಖ್ಯಾತ ನಾಯಕ ಸಲೀಂ ಮಾತನಾಡಿಕೊಂಡಿದ್ದಾರೆ. ಅದು ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಇದೇ ರೀತಿಯ ಪ್ರಸಂಗ ಹಿಂದೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಆಗಿತ್ತು. ಆಗಿನ ಕೇಂದ್ರ ಸಚಿವ ದಿ. ಅನಂತ್ ಕುಮಾರ್ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರೂ ಮಾತನಾಡಿಕೊಂಡಿದ್ದರು. ಅವರು ಕಾಂಗ್ರೆಸ್ ನಾಯಕರ ಬಗ್ಗೆ, ಜೊತೆಗೆ ಆಗಿನ ರಾಜಕೀಯ ಸ್ಥಿತಿಯ ಬಗ್ಗೆ ಮಾತನಾಡಿಕೊಂಡಿದ್ದರು.


  ಆದರೆ ಈಗ ಕಾಂಗ್ರೆಸ್ ನಾಕರಾದ ವಿಎಸ್ ಉಗ್ರಪ್ಪ ಹಾಗೂ ಸಲೀಂ ತಮ್ಮ ಪಕ್ಷದ ನಾಯಕರ ಬಗ್ಗೆಯೇ ಮಾತನಾಡಿದ್ದಾರೆ. ಹೀಗಾಗಿ ಇದು ಮುಂದಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ಮಹತ್ವದ ಬೆಳವಣಿಗೆಗೆ ಕಾರಣವಾಗುವ ಸಾಧ್ಯತೆ ಹೆಚ್ಚಿದೆ. ಈ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕೂಡ ತೀವ್ರ ಕುತೂಹಲ ಮೂಡಿಸಿದೆ.

  English summary
  The Congress leaders controversy speech about KPCC President D.K. Shivakumar is captured in camera. Know more.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X