Gold Price: ಚಿನ್ನದ ಬೆಲೆ ಭಾರತದಲ್ಲಿ ಏಕೆ ಏರಿಕೆ ಕಾಣುತ್ತಿಲ್ಲ ಎಂಬುದನ್ನ ತಿಳಿಯಿರಿ

ಚಿನ್ನ.. ಬೆಳ್ಳಿ.. ಚಿನ್ನ... ಹೀಗೆ ಆಭರಣ ಪ್ರಿಯರಿಗೆ ಕಳೆದ ಕೆಲವು ತಿಂಗಳಿಂದ ಬರೀ ಚಿನ್ನ & ಬೆಳ್ಳಿ ಬಗ್ಗೆಯೇ ಚಿಂತೆ ಆಗಿತ್ತು. ಚಿನ್ನದ ಬೆಲೆಯು ಐತಿಹಾಸಿಕ ಹಂತಕ್ಕೆ ತಲುಪಿ ಬರೋಬ್ಬರಿ 2,00,000 ಲಕ್ಷ ರೂಪಾಯಿಗೆ ಮುಟ್ಟುವ ಆತಂಕ ಕೂಡ ಎದುರಾಗಿತ್ತು. ಇದೇ ಕಾರಣಕ್ಕೆ ಹೇಗಾದರೂ ಮಾಡಿ ಒಂದು 10 ಗ್ರಾಂ ಚಿನ್ನ ಮಾಡಿಸಿಬಿಡೋಣ, ಇಲ್ಲ ಅಂದ್ರೆ ಮುಂದೆ ಚಿನ್ನ ಖರೀದಿ ಮಾಡಲು ಆಗೋದೇ ಇಲ್ಲ ಎಂಬ ಒದ್ದಾಟದಲ್ಲಿ ಚಿನ್ನ ಖರೀದಿ ಮಾಡಿದ ಜನರೇ ಹೆಚ್ಚಾಗಿದ್ದಾರೆ. ಮೈತುಂಬಾ ಸಾಲ ಮಾಡಿ ಆ ಮೂಲಕ ಚಿನ್ನ ಖರೀದಿ ಮಾಡಿದ್ದವರು ಈಗ ಪರದಾಡುತ್ತಿದ್ದಾರೆ. ಹಾಗಾದರೆ ಯುದ್ಧ ನಡೆಯುತ್ತಿದ್ದರೂ ಈಗ ಚಿನ್ನದ ಬೆಲೆ ಏರಿಕೆ ಕಾಣುತ್ತಿಲ್ಲ ಏಕೆ? ಬನ್ನಿ ಈ ಬಗ್ಗೆ ಮಾಹಿತಿ ತಿಳಿಯೋಣ.

ಚಿನ್ನ ಇಷ್ಟಪಡಲು ಬಡತನ ಹಾಗೂ ಶ್ರೀಮಂತಿಕೆ ಎಂಬ ವ್ಯತ್ಯಾಸ ಬೇಕಾಗೇ ಇಲ್ಲ. ಏಕೆಂದರೆ ಹಳದಿ ಲೋಹ ಎಂದು ಕರೆಸಿಕೊಳ್ಳುವ ಈ ಚಿನ್ನವನ್ನು ಎಲ್ಲರೂ ಇಷ್ಟಪಡುತ್ತಾರೆ. ಬಡವರೇ ಆಗಿರಲಿ ಅಥವಾ ಮನೆಯ ಮೂಲೆ ಮೂಲೆಯಲ್ಲೂ ದುಡ್ಡು ತುಂಬಿಕೊಂಡಿರುವ ಶ್ರೀಮಂತರೇ ಆಗಿರಲಿ, ಚಿನ್ನ ಎಂದ ತಕ್ಷಣ ಆಸೆ ಕಣ್ಣುಗಳಿಂದ ಕುಣಿದಾಡುತ್ತಾರೆ. ಹೀಗಿದ್ದಾಗಲೇ ಚಿನ್ನದ ಬೆಲೆ ಆಕಾಶ ಮುಟ್ಟಿತ್ತು ಎನ್ನುವ ಕಾರಣಕ್ಕೆ ಚಿನ್ನ ಇಷ್ಟಪಡುವ ಹೆಣ್ಣುಮಕ್ಕಳಿಗೆ & ಚಿನ್ನದ ಮೇಲೆ ಹೂಡಿಕೆ ಮಾಡಲು ಇಷ್ಟಪಡುವ ಗಂಡು ಮಕ್ಕಳಿಗೆ ಟೆನ್ಷನ್.. ಟೆನ್ಷನ್.. ಶುರುವಾಗಿತ್ತು. ಇನ್ನೇನು ಚಿನ್ನ ಖರೀದಿ ಮಾಡಲು ಆಗೋದಿಲ್ಲ ಬಿಡು ಅಂತಾ ಕೂಡ ಎಷ್ಟೋ ಜನ ಗೊಣಗುತ್ತಿದ್ದರು. ಇಂತಹ ಸಮಯದಲ್ಲೇ ಚಿನ್ನ ಬೆಲೆ ವಿಚಾರವಾಗಿ ಭರ್ಜರಿ ಸುದ್ದಿ ಸಿಕ್ಕಿದ್ದು, ಚಿನ್ನದ ಬೆಲೆ ಕುಸಿದು ಬೀಳುವುದು ಕನ್ಫರ್ಮ್ ಆಗಿದೆ!

Gold Price

ಚಿನ್ನದ ಬೆಲೆ ಏರಿಕೆ ಆಗಲ್ವಾ?

ಇರಾನ್ ಯುದ್ಧ ಹಿನ್ನೆಲೆ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾದರೂ, ಚಿನ್ನದ ಬೆಲೆ ಏರಿಕೆ ಕಂಡಿಲ್ಲ. ಆದರೆ ಈ ಹಿಂದೆ ಯುದ್ಧ ಶುರುವಾದರೆ ಭಾರಿ ಪ್ರಮಾಣದಲ್ಲಿ ಚಿನ್ನದ ಬೆಲೆ ಏರಿಕೆ ಕಾಣುತ್ತಾ ಇತ್ತು, ಈ ಬಾರಿ ಎಲ್ಲಾ ಉಲ್ಟಾ ಆಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸುರಕ್ಷಿತ ಹೂಡಿಕೆ ಎನ್ನುವ ಕಾರಣ ಚಿನ್ನದ ಬೆಲೆ ಏರಬೇಕಾಗಿತ್ತು, ಹೀಗಿದ್ದರೂ ಚಿನ್ನದ ಬೆಲೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡಿಲ್ಲ. ಈ ಕಾರಣ ಹೊಸ ಚರ್ಚೆ ಶುರುವಾಗಿದೆ. ಮಾರ್ಚ್ 17 ಮಂಗಳವಾರ ಚಿನ್ನದ ಬೆಲೆ 10 ಗ್ರಾಂಗೆ ಸುಮಾರು 1 ಲಕ್ಷ 60 ಸಾವಿರ ರೂಪಾಯಿ ಸುತ್ತಮುತ್ತ ತೇಲಾಡುತ್ತಿದೆ. ಇತ್ತೀಚೆಗಷ್ಟೇ ಗರಿಷ್ಠ ಮಟ್ಟ ತಲುಪಿದ ನಂತರ ಬೆಲೆಯಲ್ಲಿ ಕುಸಿತ ಕಂಡುಬಂದಿದ್ದು, ಏರಿಕೆ ಬದಲು ಇಳಿಕೆ ಹಾದಿ ಹಿಡಿಯುತ್ತಾ ಚಿನ್ನ? ಎಂಬ ಪ್ರಶ್ನೆ ಕೂಡ ಮೂಡಿದೆ.

ಪಶ್ಚಿಮ ಏಷ್ಯಾ ಸಂಘರ್ಷ ಕಾರಣ ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ. ಸರಬರಾಜು ವ್ಯತ್ಯಯ & ಸಾಗಣೆ ಸಮಸ್ಯೆ ಭಯ ಇದಕ್ಕೆ ಕಾರಣ. ತೈಲ ಬೆಲೆ ಏರಿದಂತೆ ದರ ಏರಿಕೆ ದೀರ್ಘಕಾಲ ಮುಂದುವರಿಯಬಹುದು ಎಂಬ ಆತಂಕ ಕೂಡ ಹೆಚ್ಚಾಗಿದೆ. ದರ ಏರಿಕೆ ಕಾರಣಕ್ಕೆ ಕೇಂದ್ರ ಬ್ಯಾಂಕ್‌ಗಳು ಬಡ್ಡಿದರ ವಿಚಾರದಲ್ಲಿ ದೊಡ್ಡ ನಿರ್ಧಾರ ಮಾಡುವ ಸಾಧ್ಯತೆ ಇದ್ದು, ಇದು ಚಿನ್ನದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಚಿನ್ನ ಮೂಲಕ ಬಡ್ಡಿ ಅಥವಾ ನಿಶ್ಚಿತ ಆದಾಯ ಸಿಗಲಾರದು. ಇಂತಹ ವೇಳೆ ಬಡ್ಡಿದರ ಹೆಚ್ಚು ಇದ್ದಾಗ ಹೂಡಿಕೆದಾರರು ಆದಾಯ ನೀಡುವ ಆಸ್ತಿಗಳನ್ನು ಆಯ್ಕೆ ಮಾಡುತ್ತಾರೆ. ಈ ಕಾರಣಕ್ಕೆ ಚಿನ್ನ ಆಕರ್ಷಣೆ ಕಡಿಮೆಯಾಗುತ್ತದೆ. ಇದು ಕೂಡ ಯುದ್ಧದ ಕಾಲದಲ್ಲಿ ಚಿನ್ನದ ಬೆಲೆ ಏರಿಕೆ ಆಗದೇ ಇರಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಡಾಲರ್ ಮೇಲೆ ಹೂಡಿಕೆ ಹೆಚ್ಚು

ಕಳೆದ ಕೆಲ ತಿಂಗಳಲ್ಲಿ ಚಿನ್ನ ಬೆಲೆ ವೇಗವಾಗಿ ಏರಿಕೆ ಕಂಡು ದಾಖಲೆ ಮಟ್ಟ ತಲುಪಿ ಹೂಡಿಕೆದಾರರು ಈಗ ಲಾಭ ತೆಗೆದುಕೊಳ್ಳುತ್ತಿದ್ದಾರೆ. ಇದು ಕೂಡ ಚಿನ್ನದ ಬೆಲೆಯ ಇಳಿಕೆಗೆ ಕಾರಣವಾಗಿದೆ ಎಂಬ ಉತ್ತರವನ್ನು ಚಿನ್ನ ಮಾರುಕಟ್ಟೆ ತಜ್ಞರು ನೀಡುತ್ತಿದ್ದು, ಇಷ್ಟೆಲ್ಲದರ ಜೊತೆಗೆ ಅಮೆರಿಕನ್ ಡಾಲರ್ ಕೂಡ ಪ್ರಮುಖ ಪಾತ್ರ ವಹಿಸುತ್ತಿದೆ ಎನ್ನಲಾಗುತ್ತಿದೆ. ಅನಿಶ್ಚಿತ ಸಮಯದಲ್ಲಿ ಚಿನ್ನ & ಡಾಲರ್ ಎರಡೂ ಕೂಡ ಸುರಕ್ಷಿತ ಆಯ್ಕೆ, ಆದ್ರೆ ಈಗ ಹೆಚ್ಚು ಹೂಡಿಕೆ ಡಾಲರ್ ಕಡೆ ಹರಿಯುತ್ತಿದೆ.

ಡಾಲರ್ ಬಲವಾದಂತೆಲ್ಲಾ ಜಗತ್ತಿನ ಇತರ ಕರೆನ್ಸಿಗಳಲ್ಲಿ ಚಿನ್ನ ಖರೀದಿಸುವುದು ದುಬಾರಿ ಆಗುತ್ತೆ, ಇದೇ ಕಾರಣಕ್ಕೆ ಬೇಡಿಕೆ ಕಡಿಮೆಯಾಗುತ್ತದೆ. ಈ ಎಲ್ಲಾ ಅಂಶ ಗಮನಿಸಿ ಹೇಳುವುದಾದರೆ ಮಾರುಕಟ್ಟೆ ಯುದ್ಧ ನಿರ್ಲಕ್ಷಿಸುತ್ತಿಲ್ಲ ಆದರೆ ಈಗಿನ ಸ್ಥಿತಿಯಲ್ಲಿ ಹಣಕಾಸು ನೀತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ ಎನ್ನುವ ಅಭಿಪ್ರಾಯ ಹೊರ ಹಾಕುತ್ತಿದ್ದಾರೆ ಚಿನ್ನ ಮಾರುಕಟ್ಟೆ ತಜ್ಞರು. ಇದೆಲ್ಲ ಗಮನಿಸುವುದಾದರೆ ಚಿನ್ನದ ಬೆಲೆಯಲ್ಲಿ ಮತ್ತೆ ದೊಡ್ಡ ಏರಿಳಿತ ಕಾಣಲು ಇನ್ನೊಂದಿಷ್ಟು ದಿನಗಳ ಕಾಲ ಕಾಯಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+