ಜೆಡಿಎಸ್‌ ಬೇಡಿಕೆ, ಕಾಂಗ್ರೆಸ್‌ ಬಿಟ್ಟು ಕೊಡಲಿರುವ ಕ್ಷೇತ್ರಗಳ ಪಟ್ಟಿ!

Recommended Video

      Lok Sabha Elections 2019 : ಜೆಡಿಎಸ್ ಗೆ ಕಾಂಗ್ರೆಸ್ ನೀಡಲಿರುವ ಕ್ಷೇತ್ರಗಳ ಪಟ್ಟಿ | Oneindia kannada

      ಬೆಂಗಳೂರು, ಮಾರ್ಚ್ 05 : ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಘೋಷಣೆ ಮಾಡಿವೆ. ಆದರೆ, ಸೀಟು ಹಂಚಿಕೆಯ ವಿಚಾರ ಮೈತ್ರಿಗೆ ದೊಡ್ಡ ಸವಾಲಾಗಿದೆ.

      ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ಸೋಮವಾರ ಕಾಂಗ್ರೆಸ್‌-ಜೆಡಿಎಸ್ ಸರ್ಕಾರದ ಸಮನ್ವಯ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಯಿತು. ತಾನು ಬೇಡಿಕೆ ಇಟ್ಟಿರುವ ಸೀಟುಗಳ ಪಟ್ಟಿಯನ್ನು ಜೆಡಿಎಸ್‌ ಕಾಂಗ್ರೆಸ್‌ಗೆ ನೀಡಿತು.

      ಸಭೆಯ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, 'ಜೆಡಿಎಸ್‌ನವರು 12 ಕ್ಷೇತ್ರಗಳನ್ನು ಅಪೇಕ್ಷಿಸಿದ್ದಾರೆ. ಸರಿಯಾದ ದಿಕ್ಕಿನಲ್ಲಿಯೇ ಚರ್ಚೆ ಆಗಿದೆ. ಉಳಿದ ಕ್ಷೇತ್ರಗಳ ಬಗ್ಗೆಯೂ ಚರ್ಚೆ ನಡೆದಿದೆ. ಆದರೆ, ಅಂತಿಮ ರೂಪ ಕೊಟ್ಟಿಲ್ಲ' ಎಂದು ಹೇಳಿದ್ದಾರೆ.

      ಸಮನ್ವಯ ಸಮಿತಿ ಸಭೆಯಲ್ಲಿ ಹಾಸನ ಮತ್ತು ಮಂಡ್ಯ ಕ್ಷೇತ್ರದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. 'ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ನಮ್ಮ ಗುರಿ. ಕ್ಷೇತ್ರಗಳ ಸಂಖ್ಯೆ ಮುಖ್ಯವಲ್ಲ' ಎಂದು ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ.

      ಜೆಡಿಎಸ್ ಬೇಡಿಕೆ ಇಟ್ಟಿರುವ ಕ್ಷೇತ್ರಗಳು

      ಜೆಡಿಎಸ್ ಬೇಡಿಕೆ ಇಟ್ಟಿರುವ ಕ್ಷೇತ್ರಗಳು

      ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತಿವೆ. ಜೆಡಿಎಸ್‌ ತನ್ನ ಬೇಡಿಕೆಯ ಕ್ಷೇತ್ರಗಳ ಪಟ್ಟಿಯನ್ನು ಕಾಂಗ್ರೆಸ್‌ ಪಕ್ಷಕ್ಕೆ ಈಗಾಗಲೇ ನೀಡಿದೆ.

      * ಬೆಂಗಳೂರು ಉತ್ತರ
      * ಮೈಸೂರು-ಕೊಡಗು
      * ಚಿಕ್ಕಬಳ್ಳಾಪುರ
      * ಮಂಡ್ಯ
      * ಹಾಸನ
      * ತುಮಕೂರು
      * ಶಿವಮೊಗ್ಗ
      * ಉತ್ತರ ಕನ್ನಡ
      * ವಿಜಯಪುರ
      * ರಾಯಚೂರು
      * ಬೀದರ್
      * ಚಿತ್ರದುರ್ಗ

      ಕಾಂಗ್ರೆಸ್ ಆಯ್ಕೆ ಮಾಡಿರುವ ಕ್ಷೇತ್ರ

      ಕಾಂಗ್ರೆಸ್ ಆಯ್ಕೆ ಮಾಡಿರುವ ಕ್ಷೇತ್ರ

      ಜೆಡಿಎಸ್ ಬೇಡಿಕೆಯನ್ನು ನೋಡಿದ ಕಾಂಗ್ರೆಸ್ ತಾನು ಹಲವು ಕ್ಷೇತ್ರಗಳನ್ನು ಆಯ್ಕೆ ಮಾಡಿದ್ದು, ಅವುಗಳನ್ನು ಜೆಡಿಎಸ್‌ ಪಕ್ಷಕ್ಕೆ ಬಿಟ್ಟುಕೊಡಲು ಮುಂದಾಗಿದೆ.

      * ಮಂಡ್ಯ
      * ಹಾಸನ
      * ಶಿವಮೊಗ್ಗ
      * ಬೆಂಗಳೂರು ಉತ್ತರ
      * ಉತ್ತರ ಕನ್ನಡ
      * ಉಡುಪಿ-ಚಿಕ್ಕಮಗಳೂರು
      * ಬೆಳಗಾವಿ
      * ಚಿಕ್ಕೋಡಿ

      ಮೈತ್ರಿಗೆ ಸವಾಲು ಆಗಿರುವುದೇನು?

      ಮೈತ್ರಿಗೆ ಸವಾಲು ಆಗಿರುವುದೇನು?

      ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳು ಬೇಕೆಂದು ಜೆಡಿಎಸ್‌ ಪಟ್ಟು ಹಿಡಿದಿದೆ. ಆದ್ದರಿಂದ, ಮೈತ್ರಿ ಮಾಡಿಕೊಳ್ಳಲು ಸವಾಲು ಎದುರಾಗಿದೆ.

      ಹಾಲಿ ಸಂಸದರು ಇರುವ ಯಾವುದೇ ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ ಎಂದು ಕಾಂಗ್ರೆಸ್‌ ಸ್ಪಷ್ಟಪಡಿಸಿದೆ. ಆದ್ದರಿಂದ, ಇನ್ನೂ ಸೀಟು ಹಂಚಿಕೆ ಅಂತಿಮವಾಗಿಲ್ಲ.

      ರಾಹುಲ್ ಗಾಂಧಿ ಜೊತೆ ಚರ್ಚೆ

      ರಾಹುಲ್ ಗಾಂಧಿ ಜೊತೆ ಚರ್ಚೆ

      ಉಭಯ ಪಕ್ಷಗಳ ಸೀಟು ಹಂಚಿಕೆ ವಿಚಾರ ದೆಹಲಿಗೆ ತಲುಪುವ ಸಾಧ್ಯತೆ ಇದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸಭೆ ನಡೆಸಿ ಸೀಟು ಹಂಚಿಕೆ ಬಗ್ಗೆ ಅಂತಿಮ ತೀರ್ಮಾನವನ್ನು ಕೈಗೊಳ್ಳಲಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+