Channapatna By Election Result: ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಭರ್ಜರಿ ಗೆಲುವು
ಬೆಂಗಳೂರು, ನವೆಂಬರ್ 23: ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ ಫಲಿತಾಂಶ ಎಲ್ಲರ ಕುತೂಹಲ ಕೆರಳಿಸಿದ್ದು, ಸಿ ಪಿ ಯೋಗೇಶ್ವರ್ ಮತ್ತು ನಿಖಿಲ್ ಕುಮಾರಸ್ವಾಮಿ ನಡುವೆ ಟಫ್ ಫೈಟ್ ಏರ್ಪಟ್ಟಿತ್ತು. ಇಬ್ಬರು ಅಭ್ಯರ್ಥಿಗಳ ನಡುವಿನ ತೀವ್ರ ಪೈಪೋಟಿ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಗೆಲುವು ಸಾಧಿಸಿದ್ದಾರೆ.
ಆರಂಭದಲ್ಲಿ ಮುನ್ನಡೆಯಲ್ಲಿದ್ದ ನಿಖಿಲ್ ಕುಮಾರಸ್ವಾಮಿ ಅವರನ್ನು ಹಿಂದಿಕ್ಕಿದ ಯೋಗೇಶ್ವರ್ ಭಾರೀ ಅಂತರ ಕಾಯ್ದುಕೊಂಡಿದ್ದಾರೆ. ಮೊದಲು ಅಂಚೆ ಮತಗಳ ಎಣಿಕೆ ಮಾಡಲಾಗಿದೆ. . ಅಂಚೆ ಮತ ಎಣಿಕೆಯಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಸಿ ಪಿ ಯೋಗೇಶ್ವರ್ ಸಮಬಲ ಸಾಧಿಸಿದ್ದಾರೆ. ಇಬ್ಬರೂ ಅಭ್ಯರ್ಥಿಗಳು ತಲಾ 25 ಮತಗಳನ್ನು ಪಡೆದಿದ್ದಾರೆ. ನಿಖಿಲ್ ಕುಮಾರಸ್ವಾಮಿ ಮೊದಲ ಸುತ್ತಿನಲ್ಲಿ 5,075 ಮತಗಳನ್ನು ಪಡೆದ್ರೆ, ಸಿ ಪಿ ಯೋಗೇಶ್ವರ್ 5,124 ಮತಗಳನ್ನು ಪಡೆದು ಮುನ್ನಡೆ ಕಾಯ್ದುಕೊಂಡಿದ್ದರು.

ಎರಡನೇ ಸುತ್ತಿನ ಮತ ಎಣಿಕೆ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ 10,069 ಮತಗಳನ್ನು ಪಡೆದ್ರೆ, ಜೆಡಿಎಸ್ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿ ಅವರು 10,204 ಮತಗಳನ್ನು ಪಡೆಯುವ ಮೂಲಕ ಯೋಗೇಶ್ವರ್ ಅವರನ್ನು ಹಿಂದಿಕ್ಕಿ ಅಲ್ಪ ಮೊತ್ತದ ಮುನ್ನಡೆ ಕಾಯ್ದುಕೊಂಡರು. ಇನ್ನೂ ಆರಂಭದಿಂದಲೂ ಚನ್ನಪಟ್ಟಣದಲ್ಲಿ ಹಾವು ಏಣಿ ಆಟ ಮುಂದುವರೆದಿದೆ. ಮೂರನೇ ಸುತ್ತಿನ ಮತ ಎಣಿಕೆ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ 14,460 ಮತಗಳನ್ನು ಪಡೆದ್ರೆ, ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 15,307 ಮತ ಪಡೆದಿದ್ದರು.
ನಾಲ್ಕನೇ ಸುತ್ತಿನ ಮತ ಎಣಿಕೆ ಬಳಕ 20,676 ಮತ ಪಡೆದಿರುವ ನಿಖಿಲ್, 19,521 ಮತ ಪಡೆದಿರುವ ಯೋಗೇಶ್ವರ್ ಅವರನ್ನ ಹಿಂದಿಕ್ಕಿ ಅಲ್ಪಮೊತ್ತದ ಮುನ್ನಡೆ ಸಾಧಿಸಿದ್ದಾರೆ. ಐದನೇ ಸುತ್ತಿನ ಬಳಿಕ ನಿಖಿಲ್ 25,649 ಮತ ಪಡೆದರೆ, ಯೋಗೇಶ್ವರ್ 24,343 ಮತ ಪಡೆದಿದ್ದರು. ಇನ್ನು 6ನೇ ಸುತ್ತಿನ ಮತ ಎಣಿಕೆ ಬಳಿಕ ಮುನ್ನಡೆಯ ಅಂತರ ಕೊಂಚ ಕಡಿಮೆಯಾಗಿದೆ. ಆರನೇ ಸುತ್ತಿನ ಮತ ಎಣಿಕೆ ಬಳಿಕ ಯೋಗೇಶ್ವರ್ 29,891 ಮತ ಪಡೆದಿದ್ದರೆ, ನಿಖಿಲ್ 30,674 ಮತ ಪಡೆದು 783 ಮತಗಳ ಅಂತರ ಕಾಯ್ದುಕೊಂಡರು.
ಸಿ ಪಿ ಯೋಗೇಶ್ವರ್ 7ನೇ ಸುತ್ತಿನ ಮತ ಎಣಿಕೆ ಬಳಿಕ 3,959 ಮತಗಳ ಭಾರೀ ಮುನ್ನಡೆ ಕಾಯ್ದುಕೊಂಡರು. 8ನೇ ಸುತ್ತಿನ ಮತ ಎಣಿಕೆ ಬಳಿಕವೂ ಯೋಗೇಶ್ವರ್ ಮುನ್ನಡೆ ಮುಂದುವರೆದಿದ್ದು, 11,178 ಮತಗಳ ಭರ್ಜರಿ ಮುನ್ನಡೆ ಕಾಯ್ದುಕೊಂಡರು. 10ನೇ ಸುತ್ತಿನ ಮತ ಎಣಿಕೆ ಬಳಿಕ 19,799 ಮತಗಳ ಮುನ್ನಡೆಯನ್ನ ಯೋಗೇಶ್ವರ್ ಕಾಯ್ದುಕೊಂಡಿದ್ದಾರೆ.
11ನೇ ಸುತ್ತಿನ ಮತ ಎಣಿಕೆ ಬಳಿಕ ಯೋಗೇಶ್ವರ್ ಅಂತರ ಇನ್ನಷ್ಟು ಹೆಚ್ಚಾಗಿದ್ದು 23,210 ವೋಟ್ಗಳಿಂದ ನಿಖಿಲ್ರನ್ನು ಹಿಂದಿಕ್ಕಿದ್ದಾರೆ. 12ನೇ ಸುತ್ತಿನ ಮತ ಏಣಿಕೆಯಲ್ಲಿ 22,122 ಮತಗಳ ಅಂತರದಿಂದ ಮುನ್ನಡೆಯನ್ನು ಮುಂದುವರೆಸಿದ್ದಾರೆ. ನಿಖಿಲ್ ಕುಮಾರಸ್ವಾಮಿ 73417 ಮತಗಳನ್ನ ಪಡೆದಿದ್ದರೇ ಸಿಪಿ ಯೋಗೇಶ್ವರ್ 99320 ಮತಗಳನ್ನ ಪಡೆದಿದ್ದಾರೆ. ಸಿ ಪಿ ಯೋಗೇಶ್ವರ್ 25903 ಮತಗಳ ಮೂಲಕ ಮುನ್ನಡೆಯನ್ನ ಸಾಧಿಸಿದ್ದಾರೆ.












Click it and Unblock the Notifications