ಕಾಂಡೋಮ್ ಸೇಲ್: ಹೊಸವರ್ಷದ ದಾಖಲೆ ನುಚ್ಚುನೂರು ಮಾಡಿದ ಈ ಕರಾಳ ಮೂರು ದಿನ
2024ರ ಮೊದಲ ಹೊಸವರ್ಷದ ಮೊದಲ ರಾತ್ರಿ ದಾಖಲೆ ಮಟ್ಟದಲ್ಲಿ ಕಾಂಡೋಮ್‌ಗಳು ಸೇಲಾಗಿದ್ದವು ಎಂಬ ಬಗ್ಗೆ ವರದಿಯಾಗಿತ್ತು. ಇದೀಗ ಈ ದಾಖಲೆಯನ್ನು ಎಪ್ರಿಲ್ 24ರಿಂದ ಅಂದರೆ ಕಳೆದ ಮೂರು ದಿನಗಳಿಂದ ಅತೀ ಕಾಂಡೋಮ್‌ಗಳನ್ನು ಬಳಕೆ ಮಾಡಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಹಾಗಾದರೆ ಇದಕ್ಕೆ ಪ್ರಮುಖ ಕಾರಣ ಏನು ಎನ್ನುವ ವಿಚಾರವನ್ನು ಇಲ್ಲಿ ತಿಳಿಯಿರಿ.
ಕಾಂಡೋಮ್ ಹೆಸರು ಕೇಳಿದರೆ ಸಾಕು ತುಂಬಾ ಜನರು ಮುಜುಗರಪಟ್ಟುಕೊಳ್ಳುತ್ತಾರೆ. ಒಂದು ರೀತಿಯಲ್ಲಿ ನೋಡುವುದಾದರೆ, ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗಲೆಲ್ಲಾ ಕಾಂಡೋಮ್‌ಗಳನ್ನು ಬಳಸುವುದು ಆರೋಗ್ಯಕರ ದೃಷ್ಟಿಯಿಂದ ತುಂಬಾ ಒಳ್ಳೆಯದು. ಕೆಲವರು ಆಗಾಗ ಲೈಂಗಿಕ ಪ್ರಕ್ರಿಯೆಗೆ ತೊಡಗುವ ಮುನ್ನ ಇದನ್ನು ಅನುಸರಿಸುವುಸು ತುಂಬಾ ಮುಖ್ಯವಾಗಿರುತ್ತದೆ.

ಇನ್ನು ಕಳೆದ ಮೂರು ದಿನಗಳಿಂದ ಕಾಂಡೋಮ್ ಸೇಲ್ ಕೂಡ ಜಾಸ್ತಿಯಾಗಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದ್ದು, ಇದು ಹೊಸ ವರ್ಷದ ದಾಖಲೆಯನ್ನು ಸರಿಗಟ್ಟಿದೆ ಎಂದು ತಿಳಿದುಬಂದಿದೆ. ಕೆಲವರು ಲೈಂಗಿಕತೆಯಲ್ಲಿ ತೊಡಗುವಾಗ ಕಾಂಡೋಮ್‌ಗಳನ್ನು ಧರಿಸದಿದ್ದರೂ ಸಂಕಷ್ಟಕ್ಕೆ ಸಿಲುಕಿದರೆ, ಇನ್ನು ಕೆಲವರು ಧರಿಸಿಯೂ ಒತ್ತಾಯಪೂರ್ವಕವಾಗಿ ಲೈಗಿಕತೆಯಲ್ಲಿ ತೊಡಗಿಸಿಕೊಂಡು ಆರೋಗ್ಯಕ್ಕೆ ಪೆಟ್ಟು ತಂದುಕೊಳ್ಳುತ್ತಿದ್ದಾರೆ.
ಆದರೆ, ಒತ್ತಾಯಪೂರ್ವಕವಾಗಿ ಯಾವುದೇ ಹಣ್ಣು ಮಕ್ಕಳನ್ನು ಲೈಂಗಿಕತೆಗೆ ಬಳಸಿಕೊಳ್ಳುವುದು ಘೋರ ಅಪರಾಧ ಆಗಿರುತ್ತದೆ. ಆದರೂ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಅವರನ್ನು ಬಳಸಿಕೊಳ್ಳುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ. ಗಾದೆಗಳ ಪ್ರಕಾರ ನೋಡುವುದಾದರೆ, ಇಂತಹ ಕಾಮ ಪಿಶಾಚಿಗಳಿಗೆ ಹೆಣ್ಣಿನ ಶಾಪ ಮಾತ್ರ ತಟ್ಟದೇ ಇರದು.
ಕಳೆದ ಮೂರ್ನಾಲ್ಕು ದಿನಗಳಿಂದ ರಾಜಕಾರಣಿಯೊಬ್ಬರ ಪೆನ್‌ಡ್ರೈವ್ ಇದೀಗ ದೇಶಾದ್ಯಂತ ಸದ್ದು ಮಾಡುತ್ತಿದ್ದು, ಇದು ಸದ್ಯ ಬೂದಿ ಮುಚ್ಚಿದ ಕೆಂಡದಂತೆ ನಿಧಾನವಾಗಿ ಹರಿದಾಡುತ್ತಿದೆ. ಈ ಘಟನೆಯ ದೃಶ್ಯವಳಿಗಳು ಸಮಾಜಕ್ಕೆ ಮಾರಕವಾಗಿ ಪರಿಣಮಿಸಿವೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿದೆ. ಈಗಾಗಲೇ ಮಾಧ್ಯಮ, ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯಗಳ ಬಗ್ಗೆಯೇ ಚರ್ಚೆ ಆಗುತ್ತಿದೆ. ಅಲ್ಲದೆ, ಹಲವು ರಾಜಕೀಯ ವ್ಯಕ್ತಿಗಳು ಕೂಡ ಈ ಬಗ್ಗೆ ಪ್ರತಿಕ್ರಿಯೆಗಳನ್ನು ನೀಡಿ, ಇದೊಂದು ನೀಚ ಕೃತ್ಯ, ಹೆಣ್ಮಕ್ಕಳಿಗೆ ಅಗೌರವ ತರುವಂತಹ ಕೆಲಸವಾಗಿದೆ ಎಂದು ಕೆಂಡಕಾರುತ್ತಿದ್ದಾರೆ.












Click it and Unblock the Notifications