ಮುಂಗಾರಿಗೆ ಕ್ಷಣಗಣನೆ : ಕುಮಟಾದಲ್ಲಿ ಭರ್ಜರಿ 14 ಸೆಂ.ಮೀ. ಮಳೆ
ಬೆಂಗಳೂರು, ಜೂನ್ 07 : ಕೇರಳದಿಂದ ಮುಂದೆ ಸಾಗುತ್ತಿರುವ ಮುಂಗಾರು ಕರ್ನಾಟಕವನ್ನು ಪ್ರವೇಶಿಸಲು ಸಮಯ ಪ್ರಶಸ್ತವಾಗಿದೆ ಎಂದು ಕರ್ನಾಟಕ ಹವಾಮಾನ ಇಲಾಖೆ ಹೇಳಿದ್ದು, ಇಂದು ನಾಳೆಯೊಳಗೆ ಮುಂಗಾರು ಕರ್ನಾಟಕದಲ್ಲಿ ಅಧಿಕೃತವಾಗಿ ಪಾದಾರ್ಪಣೆ ಮಾಡಲಿದೆ.
ಇದರಿಂದಾಗಿ ಕರ್ನಾಟಕ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಸುರಿಯುವ ಲಕ್ಷಣಗಳಿವೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಆದರೆ, ಸೋಮವಾರದಂತೆ ಮಂಗಳವಾರವೂ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಹೇಳಿರುವ ನುಡಿಗಳು ಸುಳ್ಳಾಗಿವೆ.[ಇನ್ನೆರಡು ದಿನಗಳಲ್ಲಿ ಕರ್ನಾಟಕಕ್ಕೆ ಮುಂಗಾರು ಆಗಮನ]

ಕಳೆದ 24 ಗಂಟೆಗಳಲ್ಲಿ ಕರಾವಳಿ ಪ್ರದೇಶ ಮತ್ತು ಮಲೆನಾಡುಗಳಲ್ಲಿ ಭರ್ಜರಿ ಮಳೆ ಸುರಿಯುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಕಳೆದ 24 ಗಂಟೆಗಳಲ್ಲಿ 14 ಸೆಂ.ಮೀ. ಮಳೆ ಸುರಿದಿದ್ದು, ಇಳೆಯನ್ನು ತಂಪಾಗಿಸಿದೆ.
ಉತ್ತರ ಕರ್ನಾಟಕದಲ್ಲಿಯೂ ಭಾರೀ ಮಳೆಯಾಗಿದ್ದು ವಿಜಯಪುರದ ನಾಗಠಾಣದಲ್ಲಿ 9 ಸೆಂ.ಮೀ., ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ 8 ಸೆಂ.ಮೀ., ವಿಜಯಪುರದ ಬಾಗೇವಾಡಿಯಲ್ಲಿ 7 ಸೆಂ.ಮೀ. ಮಳೆಯಾಗಿ ರೈತರ ಮುಖದಲ್ಲಿ ಸಂತಸ ಮೂಡಿಸಿದೆ.[ಕರ್ನಾಟಕಕ್ಕೆ ಈ ಬಾರಿ ಸಾಧಾರಣ ಮುಂಗಾರು ಮಳೆ]
ಇತರ ಜಿಲ್ಲೆಗಳಲ್ಲಾದ ಮಳೆ ವಿವರ ಕೆಳಗಿನಂತಿದೆ
ದಕ್ಷಿಣ ಕನ್ನಡದ ಮಂಗಳೂರು, ಮಣಿ, ಉತ್ತರ ಕನ್ನಡದ ಅಂಕೋಲಾದಲ್ಲಿ 6 ಸೆಂ.ಮೀ., ಉಡುಪಿಯ ಕಾರ್ಕಳ, ಚಿಕ್ಕಮಗಳೂರಿನ ಶಿರಾಲಿ, ಹೊನ್ನಾವರ, ಕೊಟ್ಟಿಗೆಹಾರ, ಕಲಬುರಗಿಯ ಸುಳೆಪೇಟ್ ನಲ್ಲಿ 4 ಸೆಂ.ಮೀ. ಮಳೆಯಾಗಿದೆ. ಇನ್ನು ಪಣಂಬೂರು, ಕಾರವಾರ, ಮೂಡುಬಿದಿರೆ, ಬಂಟ್ವಾಳ, ಪುತ್ತೂರಿನಲ್ಲಿಯೂ ಮಳೆ ಸುರಿದಿದೆ.












Click it and Unblock the Notifications