ಕರ್ನಾಟಕಕ್ಕೆ ಈ ಬಾರಿ ಸಾಧಾರಣ ಮುಂಗಾರು ಮಳೆ
ಅವಧಿಗೆ ಮುನ್ನ ನೈಋತ್ಯ ಮುಂಗಾರು ಕೇರಳ ಪ್ರವೇಶಿಸಿದೆ. ಆದರೆ, ಕರ್ನಾಟಕಕ್ಕೆ ಮುಂಗಾರು ಮಳೆ ವಿಳಂಬವಾಗಿದೆ. ವಾಡಿಕೆಗಿಂತ ತಡವಾಗಿ ಮುಂಗಾರು ಮಳೆ ಆಗಮಿಸುವ ಲಕ್ಷಣಗಳು ಕಂಡು ಬಂದಿವೆ.
ಬೆಂಗಳೂರು, ಜೂನ್ 05: 'ಕವಿದುಕೊಂಡು ಕುಳಿತ ಮೋಡ ಮಳೆ ಸುರಿಯುವಲ್ಲಿ ಯಾಕೋ ವಿಳಂಬ ಮಾಡುತ್ತಿದೆ', ಇಷ್ಟು ಹೊತ್ತಿಗೆ ಮುಂಗಾರು ಮಳೆಯಲ್ಲಿ ನೈಋತ್ಯ ಮಾರುತಗಳ ಜತೆಯಲ್ಲಿ ಸಂಭ್ರಮಿಸಬೇಕಿದ್ದ ಕರ್ನಾಟಕ ಜನತೆಗೆ ನಿರಾಶೆಯಾಗಿದೆ. ಜತೆಗೆ ಇನ್ನೊಂದು ನಿರಾಶೆಯ ಸುದ್ದಿಯೂ ಸಿಕ್ಕಿದೆ. ಈ ಬಾರಿ ಮುಂಗಾರು ಸಾಧಾರಣವಾಗಿ ಸುರಿಯಲಿದೆ ಎಂದು ಮುನ್ಸೂಚನೆ ಸಿಕ್ಕಿದೆ.
ಹವಾಮಾನ ತಜ್ಞರ ಮುನ್ಸೂಚನೆ ಹುಸಿಯಾಗಿದೆ. ಮುಂಗಾರು ಮಳೆ ಎಂಟ್ರಿಗೆ ಈಗ ಹೊಸ ದಿನಾಂಕ ನಿಗದಿಪಡಿಸಿದ್ದಾರೆ. ಜೂನ್ 10ರಂದು ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಹೇಳಿದೆ.
ಸಾಮಾನ್ಯವಾಗಿ ಜೂನ್ 1ರಂದು ಕೇರಳ ಪ್ರವೇಶಿಸಬೇಕಿದ್ದ ಮುಂಗಾರು, ಅವಧಿಗೆ ಮುನ್ನ ಪ್ರವೇಶ ಪಡೆದಿತ್ತು. ಹೀಗಾಗಿ, ಕನಿಷ್ಟ ನಾಲೈದು ದಿನ ಮುಂಚಿತವಾಗಿ ಕರ್ನಾಟಕದಲ್ಲಿ ಮುಂಗಾರು ಆರಂಭವಾಗಲಿದೆ ಎಂಬ ನಿರೀಕ್ಷೆಯಿತ್ತು. ಆದರೆ, ಈಗ ವಾಡಿಕೆಗಿಂತ ತಡವಾಗಿ ಮುಂಗಾರು ಮಳೆ ಆಗಮಿಸುವ ಲಕ್ಷಣಗಳು ಕಂಡು ಬಂದಿದೆ.

ಕರಾವಳಿ ಭಾಗದಲ್ಲಿ ಮಾತ್ರ ಮಳೆಯಾಗುತ್ತಿದ್ದು, ಒಳನಾಡಿಗೆ ಮಳೆ ಬಂದಿಲ್ಲ. ಹೀಗಾಗಿ ಈ ಬಾರಿಯ ಮುಂಗಾರು ವಾಡಿಕೆಗಿಂತ ಎರಡು-ಮೂರು ದಿನ ತಡವಾಗುತ್ತಿದೆ ಎಂದು ಎಂದು ಹವಾಮಾನ ತಜ್ಞ ವಿ.ಎಸ್.ಪ್ರಕಾಶ್ ಹೇಳಿದ್ದಾರೆ.
Moderate to heavy rain will continue over #Kerala, Coastal #Karnataka, Andaman and Nicobar Islands. https://t.co/2JXRGWs2jY @KeralaTourism
— SkymetWeather (@SkymetWeather) June 5, 2017
ಜೂ.7ರಿಂದ 10ರವರೆಗೆ ಉತ್ತಮ ಮಳೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಬಂಗಾಳಕೊಲ್ಲಿಯಲ್ಲಿ ಉಂಟಾದ ಚಂಡಮಾರುತದ ಪ್ರಭಾವದಿಂದ ಮುಂಗಾರು ಮಾರುತಗಳಲ್ಲಿ ವ್ಯತ್ಯಾಸ ಉಂಟಾಗಿ ಅವಧಿಗೂ ಮುನ್ನ ಬರಬೇಕಾಗಿದ್ದ ಮುಂಗಾರು ವಿಳಂಬವಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ಹೇಳಿದ್ದಾರೆ.
24Hrs.☔ Map of #Karnataka ending @ 8.30 a.m.of 05.06.2017, Highest 82mm ☔@Bijapur_Sindgi_Bammanahalli pic.twitter.com/FzIIrqhvql
— KSNDMC (@KarnatakaSNDMC) June 5, 2017
ಮೇ ತಿಂಗಳ ಕೊನೆಯಲ್ಲಿ ಸುರಿದ ಪೂರ್ವ ಮುಂಗಾರು ಮಳೆ ರೈತ ಸಮುದಾಯದಲ್ಲಿ ಸಂತಸ ಮೂಡಿಸಿತ್ತು. ಇದೇ ಖುಷಿಯಲ್ಲಿ ನೆಲಮಂಗಲ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಿತ್ತು. ಈಗ ಇನ್ನೊಂದು ವಾರವಾದರೂ ಮಳೆಗಾಗಿ ಕಾಯಬೇಕಾಗಿದೆ.












Click it and Unblock the Notifications