Government Employee; ಜೀವವಿಮೆ ಕಂತು ಕಡಿತ ಪೊಲೀಸರಿಗೆ ಮಾಹಿತಿ
ಬೆಂಗಳೂರು, ಏಪ್ರಿಲ್ 27: ಕರ್ನಾಟಕದ ಸರ್ಕಾರದ ಖಜಾನೆ ಇಲಾಖೆ ಈಗಾಗಲೇ ಕರ್ನಾಟಕ ಸರ್ಕಾರಿ ಜೀವ ವಿಮೆ, ವೇತನ ಬಿಲ್ಲುಗಳಲ್ಲಿ ಕಡ್ಡಾಯ ಜೀವ ವಿಮೆ ಕಂತುಗಳನ್ನು ಕಡಿತಗೊಳಿಸುವ ಕುರಿತು ಸುತ್ತೋಲೆಯನ್ನು ಹೊರಡಿಸಿದೆ. ಈಗ ಪೊಲೀಸ್ ಅಧಿಕಾರಿ/ ಸಿಬ್ಬಂದಿಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ.
ಈ ಕುರಿತು ಸುತ್ತೋಲೆಯನ್ನು ಉಪ ಪೊಲೀಸ್ ಕಮೀಷನರ್ ಅವರ ಕಛೇರಿ, ಸಂಚಾರ ಪೂರ್ವ ವಿಭಾಗ, ಬೆಂಗಳೂರು ನಗರ ಹೊರಡಿಸಿದ್ದಾರೆ. ಸುತ್ತೋಲೆಯು ಕರ್ನಾಟಕ ಸರ್ಕಾರಿ ಜೀವ ವಿಮೆ, ವೇತನ ಬಿಲ್ಲುಗಳಲ್ಲಿ ಕಡ್ಡಾಯ ಜೀವ ವಿಮ ಕಂತುಗಳನ್ನು ಕಡಿತಗೊಳಿಸುವ ಕುರಿತು ಎಂಬ ವಿಷಯ ಒಳಗೊಂಡಿದ್ದು, ಖಜಾನೆ ಆಯುಕ್ತರು ಬೆಂಗಳೂರು ಅವರ ಪತ್ರವನ್ನು ಉಲ್ಲೇಖ ಮಾಡಿದ್ದಾರೆ.

ಸುತ್ತೋಲೆಯಲ್ಲಿನ ವಿವರ: ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಖಜಾನೆ ಆಯುಕ್ತರ ಸುತ್ತೋಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಡ್ಡಾಯ ಜೀವ ವಿಮಾ ನಿಯಮಾವಳಿಗಳ ನಿಯಮ 8 ರಂತೆ ಪ್ರತಿಯೊಬ್ಬ, ರಾಜ್ಯ ಸರ್ಕಾರಿ ನೌಕರ/ ಅಧಿಕಾರಿಯು ಅವರು ಹೊಂದಿರುವ ಹುದ್ದೆಯ ವೇತನ ಶ್ರೇಣಿಯ ಸರಾಸರಿ ವೇತನದ ಕನಿಷ್ಠ ಶೇ. 6.5 ರಷ್ಟು ಮಾಸಿಕ ವಿಮಾ ಕಂತಿಗೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿ ಕಡ್ಡಾಯವಾಗಿ ಜೀವವಿಮೆ ಪಡೆಯುವುದು ಕಡ್ಡಾಯವಾಗಿರುತ್ತದೆ.
ವೇತನವನ್ನು ಸೆಳೆಯುವಾಗ ವೇತನ ಬಟಾವಾಡೆ ಅಧಿಕಾರಿಗಳು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಡ್ಡಾಯ ಜೀವ ವಿಮಾ ನಿಯಮಾವಳಿಗಳ ನಿಯಮ 8ನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿರುತ್ತಾರೆ ಎಂದು ಹೇಳಿದೆ. ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಡ್ಡಾಯ ಜೀವ ವಿಮಾ ನಿಯಮಾವಳಿಗಳ ನಿಯಮ 80 ಅನ್ವಯ ಕನಿಷ್ಕ ವಿಮಾ ಕಂತನ್ನು ಕಡಿತಗೊಳಿಸಿರುವುದನ್ನು ಖಚಿತ ಪಡಿಸಿಕೊಳ್ಳುವಂತೆ ಸೂಚಿಸಿರುತ್ತಾರೆ. ಖಜಾನೆಗೆ ಕಡಿತ ಗೊಳಿಸದ ಬಿಲ್ಲುಗಳನ್ನು ಆಕ್ಷೇಪಸಿ ಹಿಂದಿರುಗಿಸುವಂತೆಯೂ ಸೂಚಿಸಿರುತ್ತಾರೆ.
ಆದ್ದರಿಂದ ದಿನಾಂಕ 31/03/2024ಕ್ಕೆ 50 ವರ್ಷ ವಯಸ್ಸು ಪೂರ್ಣಗೊಂಡಿರುವ ಪೊಲೀಸ್ ಅಧಿಕಾರಿ/ ಸಿಬ್ಬಂದಿರವರುಗಳನ್ನು ಹೊರತುಪಡಿಸಿ ಉಳಿದ ಪೊಲೀಸ್ ಅಧಿಕಾರಿ/ ಸಿಬ್ಬಂದಿರವರುಗಳು ಕಡ್ಡಾಯ ಜೀವ ವಿಮಾ ನಿಯಮಾವಳಿಗಳ ನಿಯಮ 6 ರಂತೆ ಪ್ರತಿಯೊಬ್ಬ ಅಧಿಕಾರಿ/ ಸಿಬ್ಬಂದಿಯು ಅವರು ಹೊಂದಿರುವ ಹುದ್ದೆಯ ವೇತನ ಶ್ರೇಣಿಯ ಸರಾಸರಿ ವೇತನದ ಕನಿಷ್ಠ ಶೇ. 6.5 ರಷ್ಟು ಮಾಸಿಕ ವಿಮಾ ಕಂತಿಗೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿ ಕಡ್ಡಾಯವಾಗಿ ಜೀವವಿಮೆ ಪಡೆದು ಅದರ ವಿವರವನ್ನು ಈ ಕಛೇರಿಗೆ ದಿನಾಂಕ 28/04/2024ರ ಒಳಗಾಗಿ ಸಲ್ಲಿಸಲು ಸೂಚಿಸಿದೆ. ತಪ್ಪಿದಲ್ಲಿ ಸದರಿಯವರುಗಳ 04/2024ರ ವೇತ್ರವನ್ನು ತಡೆಹಿಡಿಯಲಾಗುವುದು ಎಂದು ಈ ಮೂಲಕ ಸೂಚಿಸಿದೆ.
ಈ ಸುತ್ತೋಲೆಯನ್ನು ಉಪ ಪೊಲೀಸ್ ಆಯುಕ್ತರು ಅವರ ಪರವಾಗಿ ಸಂಚಾರ ಪೂರ್ವ ವಿಭಾಗ ಬೆಂಗಳೂರು ನಗರ, ಸಂಚಾರ ಪೂರ್ವ ವಿಭಾಗದ ಎಲ್ಲಾ ಸಹಾಯಕ ಪೊಲೀಸ್ ಕಮೀಷನರ್ ಅವರುಗಳಿಗೆ ಹಾಗೂ ಸಂಚಾರ ಪೂರ್ವ ವಿಭಾಗದ ಎಲ್ಲಾ ಪೊಲೀಸ್ ಇನ್ಸ್‌ಪೆಕ್ಟರ್‌ಗಳಿಗೆ ಸೂಕ್ತ ಕ್ರಮಕ್ಕಾಗಿ ಕಳಿಸಿದೆ.
ಎಷ್ಟು ಕಡಿತವಾಗಲಿದೆ?: ಈಗಾಗಲೇ ಖಜಾನೆ ಇಲಾಖೆ ಕರ್ನಾಟಕ ಸರ್ಕಾರಿ ಜೀವ ವಿಮೆ ವೇತನ ಬಿಲ್ಲುಗಳಲ್ಲಿ ಕಡ್ಡಾಯ ಜೀವ ವಿಮೆ ಕಂತುಗಳನ್ನು ಕಡಿತಗೊಳಿಸುವ ಕುರಿತು ಸುತ್ತೋಲೆಯನ್ನು ಹೊರಡಸಿದೆ.
ನಿರ್ದೇಶಕರು, ಕರ್ನಾಟಕ ಸರ್ಕಾರಿ ಜೀವ ವಿಮೆ ಇಲಾಖೆ, ಇವರು ಉಲ್ಲೇಖಿತ ಪತ್ರದಲ್ಲಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಡ್ಡಾಯ ಜೀವ ವಿಮಾ ನಿಯಮಾವಳಿಗಳ ನಿಯಮ 8ರಂತೆ ಪ್ರತಿಯೊಬ್ಬ ರಾಜ್ಯ ಸರ್ಕಾರಿ ನೌಕರ/ ಅಧಿಕಾರಿಯು, ಅವರು ಹೊಂದಿರುವ ಹುದ್ದೆಯ ವೇತನ ಶ್ರೇಣಿಯ ಸರಾಸರಿ ವೇತನದ ಕನಿಷ್ಠ ಶೇ 6.25 ರಷ್ಟು ಮಾಸಿಕ ವಿಮಾ ಕಂತಿಗೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿ ಕಡ್ಡಾಯವಾಗಿ ಜೀವವಿಮೆ ಪಡೆಯಬೇಕಿರುತ್ತದೆ.
ಕಡ್ಡಾಯ ಜೀವ ವಿಮಾ ನಿಯಮಾವಳಿಗಳ ನಿಯಮ 6 (ii) ರನ್ವಯ 50 ವರ್ಷ ವಯಸ್ಸು ಮೀರಿದ ರಾಜ್ಯ ಸರ್ಕಾರಿ ನೌಕರರಿಗೆ ಜೀವ ವಿಮಾ ಪಾಲಿಸಿಯನ್ನು ನೀಡಲಾಗುವುದಿಲ್ಲ ಎಂದು ತಿಳಿಸಿರುತ್ತಾರೆ. ಈ ಪ್ರಕಾರ ಪರಿಶೀಲಿಸಲಾಗಿ ದಿನಾಂಕ 31/03/2024ರ ಅಂತ್ಯಕ್ಕೆ 50 ವರ್ಷ ವಯಸ್ಸು ಪೂರ್ಣಗೊಂಡಿರುವ ನೌಕರರನ್ನು ಹೊರತುಪಡಿಸಿ, ರಾಜ್ಯ ಸರ್ಕಾರದ ಸುಮಾರು 72,754 ಅಧಿಕಾರಿ/ ನೌಕರರು ಕಡ್ಡಾಯ ಜೀವ ವಿಮಾ ನಿಯಮಾವಳಿಯಲ್ಲಿ ನಿರ್ದಿಷ್ಟಪಡಿಸಿರುವಂತೆ ಸರಾಸರಿ ವೇತನದ ಕನಿಷ್ಠ ಶೇ 6.25 ರಷ್ಟು ಮಾಸಿಕ ವಿಮಾ ಕಂತಿಗೆ ವಿಮಾ ಇಲಾಖೆಯಲ್ಲಿ ಜೀವ ವಿಮೆ ಪಡೆಯದೇ ಇರುವುದು ಕಂಡುಬಂದಿರುವುದಾಗಿ ಸಹ ತಿಳಿಸಿರುತ್ತಾರೆ.
ಮೇಲ್ಕಂಡ ಅಂಶದ ಹಿನ್ನೆಲೆಯಲ್ಲಿ, ಈಗಾಗಲೇ ಸಂಬಂಧಿಸಿದ ವೇತನ ಬಟವಾಡೆ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಡ್ಡಾಯ ಜೀವವಿಮಾ ನಿಯಮಾವಳಿಗಳ ನಿಯಮ 8 ನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದ್ದು, ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಛೇದ 26 (1) ಮತ್ತು ಕರ್ನಾಟಕ ಖಜಾನೆ ಸಂಹಿತೆಯ ಅನುಚ್ಛೇದ 87 (1) ರಲ್ಲಿ ಅವಕಾಶವಿರುವಂತೆ, ಕಡ್ಡಾಯ ಜೀವ ವಿಮಾ ನಿಯಮಾವಳಿಯಲ್ಲಿ ನಿರ್ದಿಷ್ಟಪಡಿಸಿರುವಷ್ಟು ಶೇಕಡಾವಾರು ವಿಮಾ ಕಂತನ್ನು ನೌಕರರ ವೇತನದಲ್ಲಿ ಕಟಾವಣೆ ಮಾಡಿರುವ ಬಗ್ಗೆ ವೇತನ ಬಿಲ್ಲುಗಳನ್ನು ತೀರ್ಣಗೊಳಿಸುವಾಗ ಖಜಾನೆ ಅಧಿಕಾರಿಗಳು ಖಚಿತಪಡಿಸಿಕೊಳ್ಳುವಂತೆ ಸೂಚಿಸಲು ಸಹ ಕೋರಿರುತ್ತಾರೆ ಎಂದು ತಿಳಿಸಿದೆ.
ಈ ಕುರಿತು ಖಜಾನೆಗಳಲ್ಲಿ ವೇತನ ಬಿಲ್ಲುಗಳನ್ನು ಪಾವತಿಗಾಗಿ ತೀರ್ಣಗೊಳಿಸುವಾಗ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಡ್ಡಾಯ ಜೀವ ವಿಮಾ ನಿಯಮಾವಳಿಗಳ ನಿಯಮ 8ರಂತೆ, ಪ್ರತಿಯೋರ್ವ ಅರ್ಹ ಅಧಿಕಾರಿ/ ಸಿಬ್ಬಂದಿಗಳಿಂದ ಕನಿಷ್ಠ ವಿಮಾ ಕಂತನ್ನು ಕಡಿತಗೊಳಿಸಿರುವ ಕುರಿತು ಖಚಿತಪಡಿಸಿಕೊಳ್ಳುವಂತೆ, ಒಂದು ವೇಳೆ ಕಡಿತಗೊಳಿಸದೆ ಅಥವಾ ಕಡಿಮೆ ಕಡಿತಗೊಳಿಸಿದ್ದಲ್ಲಿ ಬಿಲ್ಲನ್ನು ಆಕ್ಷೇಪಿಸಿ ಹಿಂದುರುಗಿಸುವಂತೆ
ಸೂಚಿಸಿದೆ.












Click it and Unblock the Notifications