ಹೆಚ್ಚುವರಿ ಶುಲ್ಕ ವಸೂಲಿ: 80ಕ್ಕೂ ಹೆಚ್ಚು ಕಾಲೇಜುಗಳಿಗೆ ನೋಟಿಸ್‌

ಬೆಂಗಳೂರು, ಜು.26: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಹೆಚ್ಚುವರಿ ಶುಲ್ಕ ವಸೂಲಿ ಮಾಡಿರುವ ಕಾಲೇಜುಗಳಿಗೆ ನೋಟಿಸ್‌ ಜಾರಿಮಾಡಲಾಗಿದೆ.

ಶುಲ್ಕ ನಿಯಂತ್ರಣಾ ಸಮಿತಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಶೇ.8ರಷ್ಟು ಶುಲ್ಕ ಹೆಚ್ಚಳ ನಿಗದಿ ಮಾಡಿದೆ. ಆದರೆ 15 ಡೀಮ್ಡ್‌ ವಿಶ್ವವಿದ್ಯಾಲಯಗಳು ಮತ್ತು ಖಾಸಗಿ ವಿವಿ ಮತ್ತು 80ಕ್ಕೂ ಹೆಚ್ಚು ಖಾಸಗಿ ಕಾಲೇಜುಗಳು ಸಮಿತಿ ನಿಗದಿ ಮಾಡಿರುವುದಕ್ಕಿಂತ ಹೆಚ್ಚುವರಿ ಶುಲ್ಕ ಪಡೆಯುತ್ತಿರುವುದರಿಂದ ಸಮಿತಿಯು ನೋಟಿಸ್‌ ಜಾರಿ ಮಾಡಿದೆ ಎಂದು ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷ ನ್ಯಾ ಡಿ.ವಿ. ಶೈಲೇಂದ್ರ ಕುಮಾರ್ ತಿಳಿಸಿದ್ದಾರೆ.

ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಕಾಯ್ದೆ 006ರ ಪ್ರಕಾರ ಭವಿಷ್ಯದ ಅಭಿವೃದ್ಧಿ ಎಂಬ ಹೆಸರಿನಲ್ಲಿ ಕಾಲೇಜು ಆಡಳಿತ ಮಂಡಲಿ ನಿಗದಿಪಡಿಸಿರುವ ಶುಲ್ಕದ ಹೊರತಾಗಿ ವಿದ್ಯಾರ್ಥಿಗಳಿಂದ ಹೆಚ್ಚು ಶುಲ್ಕವನ್ನು ಪಡೆಯಲಾಗುತ್ತಿದೆ.

Committee issues notice to colleges for collecting extra fees

ಕಳೆದ ವರ್ಷ ವಿಧಿಸಿದ್ದ ಶುಲ್ಕಕ್ಕೆ ಶೇ.8ರಷ್ಟು ಹೆಚ್ಚಳ ಮಾಡಲಾಗಿದೆ. ಈ ಬಾರಿ ತಮ್ಮ ಕಾಲೇಜುಗಳಲ್ಲಿ ಶುಲ್ಕ ನಿಗದಿ ಮಾಡಿರುವ ಕುರಿತ ಮಾಹಿತಿಯನ್ನು ಸಮಿತಿಗೆ ನೀಡುವಂತೆ ಸೂಚನೆ ನೀಡಲಾಗಿತ್ತು. ಮಾಹಿತಿ ನೀಡದ ಶಿಕ್ಷಣ ಸಂಸ್ಥೆಗಳಿಗೆ ನೋಟಿಸ್‌ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿರುವ ಎಲ್ಲ ವೃತ್ತಿಪರ ಕೋರ್ಸ್‌ಗಳ ಕಾಲೇಜುಗಳಿಗೆ ಆಡಳಿತ ಲೆಕ್ಕಪತ್ರಗಳನ್ನು ನೀಡುವಂತೆ ಸೂಚಿಸಲಾಗಿತ್ತು. ಈ ಪೈಕಿ ಬಹುತೇಕ ಎಂಜಿನಿಯರಿಂಗ್‌ ಲ್ಲಿ 163, ದಂತ 32, ಫಾರ್ಮಸಿ 35 ವೈದ್ಯಕೀಯ 27, ಆಯುರ್ವೇದ 42, ಯುನಾನಿ3, ಯೋಗ, ನ್ಯಾಚುರೋಪತಿ 2 ಮತ್ತು 8 ಹೋಮಿಯೋಪತಿ ಕಾಲೇಜುಗಳು ಲೆಕ್ಕ ನೀಡಿಲ್ಲ ಆ ಕಾಲೇಜುಗಳಿಗೆ ನೋಟಿಸ್‌ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+