COMEdk UGET 2022ರ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ
ಬೆಂಗಳೂರು ಜೂ.16; ಕರ್ನಾಕಟ ದಂತ ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ದಂತ ಕಾಲೇಜುಗಳ ಒಕ್ಕೂಟ (COMEdk) 2022ರ ಸಾಲಿನ UGET ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಜೂ.19ರಂದು ರಾಜ್ಯದ ಒಟ್ಟು 190 ಕಾಲೇಜುಗಳ ಒಟ್ಟು 230 ಪರೀಕ್ಷಾ ಕೇಂದ್ರಗಳಲ್ಲಿ UGET ಪರೀಕ್ಷೆ ನಡೆಯಲಿದೆ. ಇಂಜಿನಿಯರಿಂಗ್ ಪ್ರವೇಶ ಪಡೆಯುವವರು ಈ ಪರೀಕ್ಷೆಗೆ ಹಾಜರಾಗಲಿದ್ದಾರೆ.
ಮೊದಲ ಪೇಪರ್ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 2.30ರಿಂದ ಸಂಜೆ 5.30ರವರೆಗೆ ಎರಡನೇ ಪೇಪರ್ ಜರುಗಲಿದೆ . ಕೊರೋನಾ ಮಾರ್ಗಸೂಚಿ ಪಾಲನೆ ಕಡ್ಡಾಯಗೊಳಿಸಲಾಗಿದೆ.

ಅಭ್ಯರ್ಥಿಗಳಿಗೆ ಪ್ರವೇಶ ಪತ್ರ (ಹಾಲ್ ಟಿಕೆಟ್) ಕಡ್ಡಾಯಗೊಳಿಸಿದ್ದು, ಪ್ರವೇಶ ಪತ್ರ ರಹಿತ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಅವಕಾಶ ನೀಡಲಾಗುವುದಿಲ್ಲ.
ಅಭ್ಯರ್ಥಿಗಳು ವೇಳಾಪಟ್ಟಿ ವೀಕ್ಷಣೆ ಸೇರಿದಂತೆ ಪರೀಕ್ಷೆ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು COMEdk ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು. ಪ್ರವೇಶ ಪತ್ರವನ್ನು ಈಗಾಗಲೇ ಆನ್ ಲೈನ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಡೌನ್ ಲೋಡ್ ಗೆ ಜೂ.18 ಕೊನೆಯ ದಿನವಾಗಿದೆ. ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ನಡೆಸುವ ದಿನಾಂಕ ಅಂತಿಮವಾಗಿಲ್ಲ ಎಂದು ಒಕ್ಕೂಟದ ಅಧಿಕಾರಿ ಡಾ. ಎಸ್. ಕುಮಾರ್ ತಿಳಿಸಿದ್ದಾರೆ.

COMEdk UGET ದಿನಾಂಕ:
* ಪ್ರವೇಶ ಪತ್ರ ಡೌನ್ ಮಾಡಿಕೊಳ್ಳಲು ಕೊನೆಯ ದಿನ ಜೂ.18.
* COMEdk UGET ಆರಂಭದ ದಿನಾಂಕ ಜೂ. 19.
* ಮೊದಲ ಹಂತದ ಕೀ ಉತ್ತರ ಬಿಡುಗಡೆ ಜೂ.22.
* ಅಂತಿಮ ಹಂತದ ಕೀ ಉತ್ತರ ಬಿಡುಗಡೆ ಜೂ. 30.
* ಫಲಿತಾಂಶ ಪ್ರಕಟಗೊಳ್ಳುವ ದಿನಾಂಕ ಜು. 05.












Click it and Unblock the Notifications