ದೇಶದಲ್ಲೇ ಮೊದಲು, ‘ಐ ವಿವೇಕ್’ ವೆಬ್‍ಸೈಟ್ ಲೋಕಾರ್ಪಣೆ
ಸಾರ್ವಜನಿಕರ ಹಿತದೃಷ್ಟಿ ಹಾಗೂ ರಕ್ಷಣೆಗಾಗಿ ದೇಶದಲ್ಲೇ ಮೊದಲ ಪ್ರಾಯೋಗಿಕ ‘ಐ ವಿವೇಕ್’ ವೆಬ್‍ಸೈಟನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸಂಜೆ ಲೋಕಾರ್ಪಣೆ ಮಾಡಿದರು.
ಬೆಂಗಳೂರು, ಮೇ 03: ಸಾರ್ವಜನಿಕರ ಹಿತದೃಷ್ಟಿ ಹಾಗೂ ರಕ್ಷಣೆಗಾಗಿ ದೇಶದಲ್ಲೇ ಮೊದಲ ಪ್ರಾಯೋಗಿಕ 'ಐ ವಿವೇಕ್' ವೆಬ್‍ಸೈಟನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸಂಜೆ ಲೋಕಾರ್ಪಣೆ ಮಾಡಿದ್ದಾರೆ.
ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಐ-ವಿವೇಕ' ವೆಬ್‍ಸೈಟ್ ಅನಾವರಣಗೊಳಿಸಿ ಮಾತನಾಡಿದ ಮುಖ್ಯಮಂತ್ರಿಗಳು ಹಣಕಾಸು ಇಲಾಖೆ ಈ ವೆಬ್‍ಸೈಟನ್ನು ರೂಪಿಸಿದ್ದು ಕಾನೂನುಬಾಹಿರ ಸಂಸ್ಥೆಗಳಿಂದ ಜನರಿಗೆ ಮೋಸವಾಗುವುದನ್ನು ತಡೆಗಟ್ಟುವುದು ಇದರ ಮೂಲ ಉದ್ದೇಶವಾಗಿದೆ.

ಕೆಲ ರಾಜ್ಯಗಳಲ್ಲಿ ಸಂಘ ಸಂಸ್ಥೆಗಳು ಮತ್ತು ಕಂಪನಿಗಳಿಂದ ಜನರಿಗೆ ಮೋಸವಾದ ಸುದ್ದಿಗಳನ್ನು ಓದಿದ್ದೇವೆ. ಹೀಗಾಗಿ ಈ ವೆಬ್‍ಸೈಟ್ ಮೋಸ ಮಾಡುವುದನ್ನು ತಪ್ಪಿಸುವುದಕ್ಕೆ ಅನುಕೂಲಕರವಾಗಿದೆ ಎಂದರು. ಹೆಚ್ಚಿನ ಮಾಹಿತಿಯನ್ನು ಆರ್ ಬಿಐ ವೆಬ್ ತಾಣದಲ್ಲಿ ಪಡೆಯಬಹುದು.












Click it and Unblock the Notifications