ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡ, ಅಹಿಂದ, ಮದ್ಯ, ಮೀಸಲಾತಿ ಬಗ್ಗೆ ಸಿದ್ದು

By Mahesh
|
Google Oneindia Kannada News

ಬೆಂಗಳೂರು, ಜ.16: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಅಹಿಂದ ಸಮುದಾಯಗಳ ಓಲೈಕೆಯಲ್ಲಿ ತೊಡಗಿದ್ದಾರೆ. ವಿವಿಧ ಸಮಾವೇಶಗಳಲ್ಲಿ ಮಾಜಿ ದೇವೇಗೌಡ, ಅಹಿಂದ ಸಮಾವೇಶ, ಮದ್ಯ ಮಾರಾಟ ನಿಷೇಧ, ಸಹಕಾರಿ ಕ್ಷೇತ್ರದಲ್ಲಿ ಮೀಸಲಾತಿ ಮುಂತಾದ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರ ಹೇಳಿಕೆಗಳ ಸಾರಾಂಶ ಮುಂದಿದೆ.

ಅಹಿಂದ ಸಮಾವೇಶವೇನು ಸರಕಾರಿ ಕಾರ್ಯಕ್ರಮವಲ್ಲ ಈ ರೀತಿ ಸಮಾವೇಶದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಆಗುವ ನಷ್ಟವೇನು? ಅದರಿಂದ ದೇವೇಗೌಡರ ಖುರ್ಚಿ ಅಲ್ಲಾಡದು. ಏಕೆಂದರೆ ಅವರ ಬಳಿ ಇದೀಗ ಅಧಿಕಾರದ ಯಾವುದೇ ಕುರ್ಚಿಯೂ ಇಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು

ಮದ್ಯಪಾನ ನಿಷೇಧ ಅಸಾಧ್ಯ : ಸಾರಾಯಿ ನಿಷೇಧದ ಕುರಿತು ಮರು ಚಿಂತಿಸುವ ಅಥವಾ ಮರು ಮಾರಾಟದ ಬಗ್ಗೆ ಎಲ್ಲಿಯೂ ಹೇಳಿಲ್ಲ. ಆ ಬಗ್ಗೆ ಚಿಂತನೆ ನಮಗಿಲ್ಲ. ಮದ್ಯಪಾನ ನಿಷೇಧ ಕಷ್ಟ ಸಾಧ್ಯ. ಗುಜರಾತ್ ನಲ್ಲಿ ಮದ್ಯಪಾನ ನಿಷೇಧ ಮಾಡಿದ್ದರೂ ಕೂಡ ಅಲ್ಲಿಯೂ ಕೂಡ ಕುಡುಕರಿದ್ದಾರೆ. ಸಾರಾಯಿ ನಿಷೇಧದ ಬಗ್ಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ತಪ್ಪುತಿಳಿದುಕೊಂಡು ರಾಜಕೀಯವಾಗಿ ಅದನ್ನು ಬಳಿಸಿಕೊಳ್ಳುತ್ತಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಾರಾಯಿ ನಿಷೇಧ ಮಾಡಿದ್ದು, ಏತಕ್ಕಾಗಿ ಎಂದು ಸ್ಪಷ್ಟ ಪಡಿಸಲಿ, ರಾಜ್ಯ ಬಿಜೆಪಿ ನಾಯಕರು ಮುಖ ತೋರಿಸಲು ಯೋಗ್ಯತೆ ಇಲ್ಲದ ಕಾರಣ ನರೇಂದ್ರ ಮೋದಿಯವರ ಮುಖವಾಡ ಹಾಕಿಕೊಂಡು ಅಡ್ಡಾಡುತ್ತಿದ್ದಾರೆ. ಅಧಿಕಾರ ಇದ್ದಾಗ ಬಿಜೆಪಿ ನಾಯಕರು ರಾಜ್ಯವನ್ನು ಲೂಟಿ ಮಾಡಿ, ನಿರಂತರ ಭ್ರಷ್ಟಾಚಾರದಲ್ಲಿ ತೊಡಗಿದ್ದರು. ಇದೀಗ ಜನರ ಬಳಿ ಹೋಗಲು ಆಗದೆ ನರೇಂದ್ರ ಮೋದಿಯವರ ಭಾವಚಿತ್ರ ಹಿಡಿದು ಹೊರಟಿದ್ದಾರೆ ಎಂದು ಸಿದ್ದು ಚೇಡಿಸಿದರು.

ಅಹಿಂದ, ಮದ್ಯ, ಮೀಸಲಾತಿ ಬಗ್ಗೆ ಸಿದ್ದರಾಮಯ್ಯ

ಅಹಿಂದ, ಮದ್ಯ, ಮೀಸಲಾತಿ ಬಗ್ಗೆ ಸಿದ್ದರಾಮಯ್ಯ

ಬಿಜೆಪಿಯಲ್ಲಿ ಒಬ್ಬರಿಗೊಬ್ಬರು ಕೆಸರೆರಚಾಟದಲ್ಲಿ ತೊಡಗಿದ್ದವರು ಎಷ್ಟು ದಿನದ ಒಗ್ಗಟ್ಟು ಪ್ರದರ್ಶಿಸಲು ಮುಂದಾಗಿದ್ದಾರೆ ಎಂಬುದನ್ನು ನೋಡೋಣ ಎಂದು ಲೇವಡಿ ಮಾಡಿದರು. ಗುಲ್ಬರ್ಗಾ ಎಸ್ ಐ ಮಲ್ಲಿಕಾರ್ಜುನ ಬಂಡೆಯವರ ಚಿಕಿತ್ಸೆ ಕುರಿತು ವೈದಕೀಯ ಸಲಹೆ ಆಧರಿಸಿ ನಾವು ಅವರಿಗೆ ಚಿಕಿತ್ಸೆ ನೀಡಿದ್ದೇವೆ. ವೈದ್ಯರು ವಿದೇಶಕ್ಕೆ ಕಳುಹಿಸುವಂತೆ ಹೇಳಿದ್ದರೆ ಖಂಡಿತ ಅವರನ್ನು ಕಳುಹಿಸಲಾಗುತ್ತಿತ್ತು ಎಂದರು.

ಸಹಕಾರ ಕ್ಷೇತ್ರದಲ್ಲೂ ಮೀಸಲಾತಿ

ಸಹಕಾರ ಕ್ಷೇತ್ರದಲ್ಲೂ ಮೀಸಲಾತಿ

ಸಹಕಾರ ಕ್ಷೇತ್ರದಲ್ಲೂ ಹಿಂದುಳಿತ ಜಾತಿ/ವರ್ಗದ ಜನತೆಗೆ ಮೀಸಲಾತಿ ಕಲ್ಪಿಸುವ ಬಗ್ಗೆ ಚಿಂತನೆ ನಡೆದಿದೆ ಎಂದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಹೌಸಿಂಗ್ ಬೋರ್ಡ್, ನಗರಾಭಿವೃದ್ಧಿ ಪ್ರಾಧಿಕಾರ, ಮುನ್ಸಿಪಲ್, ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಗೆ ಸೇರಿದ ಸಹಕಾರ ಕ್ಷೇತ್ರದಲ್ಲಿ ಮೀಸಲಾತಿಗೆ ಯತ್ನಿಸಲಾಗುತ್ತಿದೆ.

ಸಿದ್ದರಾಮಯ್ಯಗೆ ಲಿಂಗಾಯತ, ಒಕ್ಕಲಿಗರ ಭಯವಿಲ್ಲ

ಸಿದ್ದರಾಮಯ್ಯಗೆ ಲಿಂಗಾಯತ, ಒಕ್ಕಲಿಗರ ಭಯವಿಲ್ಲ

ಅಹಿಂದ(ಅಲ್ಪಸಂಖ್ಯಾತ ಹಿಂದುಳಿತ ಹಾಗೂ ದಲಿತ) ನಾಯಕನಾಗಿ ಬೆಳೆದ ಸಿದ್ದರಾಮಯ್ಯ ಅವರು ಮೀಸಲಾತಿ ಹಾಗೂ ಅಹಿಂದ ವರ್ಗ ಓಲೈಕೆ ಮೂಲಕ ಲಿಂಗಾಯತ, ಒಕ್ಕಲಿಗ ಮುಂತಾದ ಬಹು ಸಂಖ್ಯಾತ ವರ್ಗದ ಕೋಪ ಗುರಿಯಾಗುವ ಸಾಧ್ಯತೆ ಹೆಚ್ಚಿದೆ.

ಅಲ್ಲದೆ, ಪಕ್ಷದಲ್ಲಿರುವ ಪ್ರಮುಖ ದಲಿತ ನಾಯಕರಾಗಿರುವ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರಿಗಿಂತ ಸಿದ್ದು ಜನಪ್ರಿಯತೆ ಹೆಚ್ಚುವುದು ಮತ್ತೆ ಕಾಂಗ್ರೆಸ್ಸಿನಲ್ಲಿ ಕದನಕ್ಕೆ ನಾಂದಿ ಹಾಡಬಹುದು.

ಲೋಕಸಭೆ ಚುನಾವಣೆ ಮೇಲೆ ಸಿದ್ದು ಭವಿಷ್ಯ

ಲೋಕಸಭೆ ಚುನಾವಣೆ ಮೇಲೆ ಸಿದ್ದು ಭವಿಷ್ಯ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 16 ರಿಂದ ಗರಿಷ್ಠ 20 ಸೀಟುಗಳನ್ನು ಕಾಂಗ್ರೆಸ್ ಗೆಲ್ಲದಿದ್ದಾರೆ ಸಿದ್ದರಾಮಯ್ಯ ಕುರ್ಚಿ ಜೋರಾಗಿ ಅಲ್ಲಾಡಲಿದೆ.

ಹೀಗಾಗಿ ಹಿಂದುಳಿತ, ಅಲ್ಪ ಸಂಖ್ಯಾತರ ವೋಟ್ ಬ್ಯಾಂಕ್ ಖಾತ್ರಿಗಾಗಿ ಸಿದ್ದರಾಮಯ್ಯ ಶತಪ್ರಯತ್ನ ಮಾಡುತ್ತಿದ್ದಾರೆ. ಅಥವಾ ಕಾಂಗ್ರೆಸ್ ವರಿಷ್ಠರು ಅಹಿಂದ ನಾಯಕನಾಗಿ ಸಿದ್ದು ಕಾಣಿಸಿಕೊಳ್ಳುವಂತೆ ಮಾಡುತ್ತಿದ್ದಾರೆ.

ಎಲ್ಲವೂ ವೋಟ್ ಬ್ಯಾಂಕ್ ಆಧಾರಿತ

ಎಲ್ಲವೂ ವೋಟ್ ಬ್ಯಾಂಕ್ ಆಧಾರಿತ

ಶೇ 18ರಷ್ಟಿರುವ ಲಿಂಗಾಯತರು, ಶೇ 16ರಷ್ಟಿರುವ ಒಕ್ಕಲಿಗರ ಕೃಪೆಗಾಗಿ ಎಲ್ಲಾ ಪಕ್ಷಗಳು ಹಾತೊರೆಯುತ್ತವೆ. ತುಂಗಭದ್ರಾ ನದಿಯ ಮೇಲ್ಭಾಗಕ್ಕೆ ಹೋದರೆ ಲಿಂಗಾಯತ ಪ್ರದೇಶ ಕಾಣಬಹುದಾದರೆ, ಬೆಂಗಳೂರು, ಮಂಡ್ಯ, ಹಾಸನ, ಮೈಸೂರು, ಕೋಲಾರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ.

ಒಟ್ಟಾರೆ ದಲಿತರು (ಶೇ 23) ಕುರುಬರು (ಶೇ 8), ಮುಸ್ಲಿಂ(ಶೇ 10), ಬ್ರಾಹ್ಮಣ(ಶೇ 5), ಕ್ರೈಸ್ತರು(ಶೇ 1.9), ಜೈನ (ಶೇ 0.8), ಬೌದ್ಧ (ಶೇ 0.7), ಸಿಖ್ಖರು (ಶೇ 0.1)(ಅಂಕಿ ಅಂಶಗಳು ಕಳೆದ ವಿಧಾನಸಭೆ ಚುನಾವಣೆ ಸಂದರ್ಭದ್ದು)

ಬಿಜೆಪಿಯಿಂದ ಕೂಡಾ ಅಹಿಂದ ಸಮಾವೇಶ

ಬಿಜೆಪಿಯಿಂದ ಕೂಡಾ ಅಹಿಂದ ಸಮಾವೇಶ

ಸಿದ್ದರಾಮಯ್ಯ ಅವರ ಅಹಿಂದ ಸಮಾವೇಶಕ್ಕೆ ಸೆಡ್ಡು ಹೊಡೆಯಲು ಬಿಜೆಪಿ ಕೂಡಾ ಹಿಂದುಳಿದ, ದಲಿತರ ಬೃಹತ್ ಸಮಾವೇಶಕ್ಕೆ ಮುಂದಾಗಿದೆ.

ಬಹುಶಃ ಫೆ.23ರ ವೇಳೆಗೆ ಚಿತ್ರದುರ್ಗದಲ್ಲಿ ಬಿಜೆಪಿಗೆ ಅಹಿಂದಕ್ಕೆ ಪ್ರತ್ಯಾಸ್ತ್ರ ಸಿಗಬಹುದು. ಯಡಿಯೂರಪ್ಪ ಕಾಲದಲ್ಲಿ ವಿವಿಧ ಮಠ ಮಾನ್ಯ, ಪೀಠಗಳಿಗೆ ನೀಡಿದ ದೇಣಿಗೆಗಳನ್ನು ಮುಂದಿಟ್ಟುಕೊಂಡು ಹಿಂದುಳಿದ ಸಮುದಾಯ ಓಲೈಕೆ ಬಿಜೆಪಿ ಮುಂದಾಗಿದೆ.

English summary
Karnataka Chief Minister Siddaramaiah has kicked up a row ahead of all important Lok Sabha elections. He is now advocating backward class reservation in the cooperative sector. Siddu also verbally attacks former PM HD Deve Gowda
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X