ಮೂರು ದಿನ ಯಾವುದೇ ಕಾರ್ಯಕ್ರಮದಲ್ಲಿ ಸಿಎಂ ಭಾಗಿ ಆಗೊಲ್ಲ, ಕಾರಣ ಏನು?

Recommended Video

      ಎಚ್ ಡಿ ಕುಮಾರಸ್ವಾಮಿ 3 ದಿನ ಯಾವುದೇ ಕಾರ್ಯಕ್ರಮದಲ್ಲೂ ಭಾಗಿಯಾಗೋದಿಲ್ಲ | Oneindia Kannada

      ಬೆಂಗಳೂರು, ನವೆಂಬರ್ 09: ಟಿಪ್ಪು ಜಯಂತಿ ಸೇರಿ ಮೂರು ದಿನಗಳ ಕಾಲ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಯಾವುದೇ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ.

      ವೈದ್ಯರ ಸಲಹೆ ಮೇರೆಗೆ ಕುಮಾರಸ್ವಾಮಿ ಅವರು ಮೂರು ದಿನ ವಿಶ್ರಾಂತಿ ಪಡೆಯಲಿದ್ದು, ಈ ಸಮಯದಲ್ಲಿ ಕುಟುಂಬದೊಂದಿಗೆ ಕಾಲ ಕಳೆಯಲಿದ್ದಾರೆ. ಹಾಗಾಗಿ ಅವರು ಯಾವುದೇ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ.

      ನಾಳೆ ನಡೆಯುತ್ತಿರುವ ಅತಿ ಮುಖ್ಯ ಟಿಪ್ಪು ಜಯಂತಿಗೆ ಕೂಡ ಕುಮಾರಸ್ವಾಮಿ ಅವರು ಭಾಗಿ ಆಗುತ್ತಿಲ್ಲ. ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯುವ ಆ ಕಾರ್ಯಕ್ರಮವನ್ನು ಡಿಸಿಎಂ ಪರಮೇಶ್ವರ್ ಅವರು ಉದ್ಘಾಟಿಸಲಿದ್ದಾರೆ. ನಾಳೆ ನಡೆಯಬೇಕಿದ್ದ ಜನತಾದರ್ಶನ ಸಹ ರದ್ದಾಗುವ ಸಾಧ್ಯತೆ ಇದೆ.

      ವಾಲ್ಮೀಕಿ ಜಯಂತಿಯಂದು ಅನಾರೋಗ್ಯ

      ವಾಲ್ಮೀಕಿ ಜಯಂತಿಯಂದು ಅನಾರೋಗ್ಯ

      ಕೆಲವು ದಿನಗಳ ಮೊದಲು ವಾಲ್ಮೀಕಿ ಜಯಂತಿಯಂದು ಅನಾರೋಗ್ಯದಿಂದ ಕುಮಾರಸ್ವಾಮಿ ಅವರು ಆಸ್ಪತ್ರೆ ಸೇರಿದ್ದರು. ಅಂದೇ ಅವರಿಗೆ ವಿಶ್ರಾಂತಿಗೆ ಸೂಚಿಸಲಾಗಿತ್ತು. ಆದರೆ ಉಪಚುನಾವಣೆ ನಂತರ ವಿಶ್ರಾಂತಿ ಪಡೆಯುವುದಾಗಿ ಅವರು ತಿಳಿಸಿದ್ದರು.

      ಉಪಚುನಾವಣೆ ಮುಗಿದ ಕಾರಣ ವಿಶ್ರಾಂತಿ

      ಉಪಚುನಾವಣೆ ಮುಗಿದ ಕಾರಣ ವಿಶ್ರಾಂತಿ

      ಅಂತೆಯೇ ಉಪಚುನಾವಣೆ ಮುಗಿದಿರುವ ಕಾರಣ ಮೂರು ದಿನಗಳ ಕಾಲ ಮೈಸೂರಿನ ಬಳಿ ಇರುವ ಖಾಸಗಿ ಸ್ಥಳದಲ್ಲಿ ಕುಮಾರಸ್ವಾಮಿ ಅವರು ಕುಟುಂಬ ಸದಸ್ಯರೊಂದಿಗೆ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿದೆ.

      ಜನತಾದರ್ಶನದ ಬಗ್ಗೆ ಅಧಿಕೃತ ಪ್ರಕಟಣೆ ಇಲ್ಲ

      ಜನತಾದರ್ಶನದ ಬಗ್ಗೆ ಅಧಿಕೃತ ಪ್ರಕಟಣೆ ಇಲ್ಲ

      ಮೂರು ದಿನಗಳ ಕಾಲ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ಡಿಸಿಎಂ ಪರಮೇಶ್ವರ್ ಅವರೇ ನಿರ್ವಹಿಸಲಿದ್ದಾರೆ. ಜನತಾ ದರ್ಶನವನ್ನು ಸಹ ಡಿಸಿಎಂ ಪರಮೇಶ್ವರ್ ನಡೆಸಿಕೊಡುತ್ತಾರೆ ಎನ್ನಲಾಗುತ್ತಿದೆ ಆದರೆ ಅಧಿಕೃತ ಪ್ರಕಟಣೆ ಇನ್ನೂ ಹೊರಬಂದಿಲ್ಲ.

      ಹೃದಯ ಸಂಬಂಧಿ ಖಾಯಿಲೆಗೆ ಚಿಕಿತ್ಸೆ

      ಹೃದಯ ಸಂಬಂಧಿ ಖಾಯಿಲೆಗೆ ಚಿಕಿತ್ಸೆ

      ಈ ಮೊದಲು ಸಹ ಕುಮಾರಸ್ವಾಮಿ ಅನಾರೋಗ್ಯಕ್ಕೆ ಈಡಾಗಿದ್ದರು. ಹೃದಯ ಸಂಬಂಧಿ ಖಾಯಿಲೆಗೆ ವಿದೇಶದಲ್ಲಿ ಚಿಕಿತ್ಸೆ ಪಡೆದು ಬಂದಿದ್ದರು. ಇಲ್ಲಿಯೂ ಸಹ ಚಿಕಿತ್ಸೆ ಪಡೆದಿದ್ದರು. ಕುಮಾರಸ್ವಾಮಿ ತಪಾಸಣೆ ನಡೆಸಿದ್ದ ವೈದ್ಯರು ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಕೆಲ ದಿನಗಳ ಹಿಂದೆಯಷ್ಟೆ ಹೇಳಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+