ಸಿಎಂ ಚೇಂಜ್: ಪ್ರಭಾವಿ ಸಚಿವರ ಡಿನ್ನರ್ ಪಾರ್ಟಿ ರಹಸ್ಯ ಸಭೆ!
CM Change: ಕರ್ನಾಟಕ ಕಾಂಗ್ರೆಸ್‌ನಲ್ಲಿ ಕಳೆದ ಎರಡು ವಾರದಿಂದ ತಣ್ಣಗಾಗಿದ್ದ ಬಣರಾಜಕೀಯ ಮತ್ತೆ ಜೋರಾಗಿದೆ. ಕಳೆದ ಎರಡರಿಂದ ಮೂರು ತಿಂಗಳಿನಿಂದಲೂ ಕರ್ನಾಟಕ ಕಾಂಗ್ರೆಸ್‌ನಲ್ಲಿ ಔತಣಕೂಟ ರಾಜಕೀಯ ಜೋರಾಗಿದೆ. ರಾಜ್ಯದ ಪ್ರಭಾವಿ ಸಚಿವರು ಒಂದು ಕಡೆ ಸೇರಿ ಔತಣ ಕೂಟದ ಹೆಸರಿನಲ್ಲಿ ಚರ್ಚೆ ಮಾಡುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕುತ್ತಲ್ಲೇ ಇದೆಯಾದರೂ. ಇದರ ನಡುವೆಯೇ ರಾಜ್ಯದಲ್ಲಿ ಬಣರಾಜಕೀಯ ಜೋರಾಗಿದೆ. ವಿರೋಧ ಪಕ್ಷದಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆದಿದ್ದರೆ, ಆಡಳಿತ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನದ ಬದಲಾವಣೆಗೆ ಮುಸುಕಿನ ಗುದ್ದಾಟ ಮುಂದುವರಿದಿದೆ. ಆಡಳಿತ - ವಿರೋಧ ಪಕ್ಷಗಳಲ್ಲಿ ನಡೆಯುತ್ತಿರುವ ಬಣ ರಾಜಕೀಯವನ್ನು ನೋಡಿ ಕರ್ನಾಟಕದ ಜನ ಕಂಗಾಲಾಗಿದ್ದಾರೆ. ರಾಜ್ಯದಲ್ಲಿ ಜನರ ಪರವಾದ, ಅಭಿವೃದ್ಧಿ ಹಾಗೂ ಸಮಸ್ಯೆಗಳ ಬಗ್ಗೆ ಯಾವುದೇ ಚರ್ಚೆಯಾಗುತ್ತಿಲ್ಲ.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ. ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಎಂದು ಹೇಳುತ್ತಿದ್ದರೂ. ಕರ್ನಾಟಕ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯದ ಚರ್ಚೆ ಮುಂದುವರಿದಿದೆ. ಅಲ್ಲದೆ ಕರ್ನಾಟಕದ ಪ್ರಭಾವಿ ಸಚಿವರು ಒಂದು ಕಡೆ ಸೇರುವುದು ಅಲ್ಲಿ ರಾಜಕೀಯ ವಿಷಯಗಳನ್ನು ಚರ್ಚೆ ಮಾಡುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಮುಸುಕಿನ ಗುದ್ದಾಟ ಮುಂದುವರಿದಿದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಾಗೂ ಸಚಿವರ ಆಯ್ಕೆ ಮತ್ತು ನಿಗಮ ಮಂಡಳಿಗಳ ಅಧ್ಯಕ್ಷರ ಆಯ್ಕೆ ವಿಚಾರದಲ್ಲೇ ಎರಡು ಶಕ್ತಿ ಕೇಂದ್ರಗಳು (ಸಿದ್ದರಾಮಯ್ಯ - ಡಿ.ಕೆ ಶಿವಕುಮಾರ್) ಇರುವುದು ಬಹಿರಂಗವಾಗಿತ್ತು.

ಇಬ್ಬರು ಶಕ್ತಿ ಕೇಂದ್ರಗಳಂತೆ ಬದಲಾಗಿದ್ದು ಮುಖ್ಯಮಂತ್ರಿ ಬದಲಾವಣೆಗೆ ಚರ್ಚೆ ನಡೆಯುತ್ತಲ್ಲೇ ಇದೆ. ಆಗಾಗ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕುತ್ತಿದೆಯಾದರೂ ಇದು ನಿಲ್ಲುತ್ತಿಲ್ಲ. ಇಲ್ಲಿಯ ವರೆಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಮಾತ್ರ ಚರ್ಚೆಯಾಗುತ್ತಿತ್ತು. ಇದೀಗ ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ) ಅಧ್ಯಕ್ಷರ ಬದಲಾವಣೆ ವಿಚಾರವೂ ಚರ್ಚೆಯ ಮುನ್ನೆಲೆಗೆ ಬಂದಿದ್ದು. ಇದಕ್ಕೂ ಲಾಭಿ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಮುಖ್ಯಮಂತ್ರಿ ಬದಲಾವಣೆಯ ವಿಚಾರವಾಗಲಿ ಅಥವಾ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಬಗ್ಗೆಯಾಗಲಿ ಕಾಂಗ್ರೆಸ್ ಹೈಕಮಾಂಡ್‌ನಿಂದ ಯಾವುದೇ ಸುಳಿವೂ ಬಂದಿಲ್ಲ. ಆದರೆ ರಾಜ್ಯದ ಪ್ರಭಾವಿ ಸಚಿವರು ಒಂದು ಕಡೆ ಸೇರಿ ರಹಸ್ಯವಾಗಿ ಚರ್ಚೆ ಮಾಡುವುದನ್ನು ಮುಂದುವರಿಸುತ್ತಿದ್ದಾರೆ.
ಡಿನ್ನರ್ ಪಾರ್ಟಿ ಮತ್ತು ಪಾಲಿಟಿಕ್ಸ್
ಒಂದು ಕಾಲದಲ್ಲಿ ಕರ್ನಾಟಕದಲ್ಲಿ ರೆಸಾರ್ಟ್ ಪಾಲಿಟಿಕ್ಸ್ ಜೋರಾಗಿತ್ತು. ಆದರೆ ಈಗ ಏನಿದ್ದರೂ ಡಿನ್ನರ್ ಪಾಲಿಟಿಕ್ಸ್ ಎನ್ನುವಂತಾಗಿದೆ. ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ನಡೆಸಿರುವ ಡಿನ್ನರ್ ಪಾಲಿಟಿಕ್ಸ್ ಭಾರೀ ಚರ್ಚೆಗೆ ಕಾರಣವಾಗಿದೆ. ರಾಜ್ಯದ ಪ್ರಭಾವಿ ದಲಿತ ಸಚಿವರು ಹಾಗೂ ಶಾಸಕರಿಗೆ ಔತಣಕೂಟ ಆಯೋಜಿಸಿದ್ದು. ಅಲ್ಲದೆ ಅದರಲ್ಲಿ ಚರ್ಚೆಯಾಗಿರುವ ವಿಷಯಗಳ ಬಗ್ಗೆ ಭಾರೀ ಚರ್ಚೆ ನಡೆದಿದೆ. ಈ ರೀತಿ ರಹಸ್ಯ ಸಭೆಗಳಿಗೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕುತ್ತಿದೆಯಾದರೂ ನಿಲ್ಲುತ್ತಿಲ್ಲ. ಕೆಲವು ದಿನಗಳ ಹಿಂದೆ ಆಯೋಜನೆ ಮಾಡಿದ್ದ ಡಿನ್ನರ್ ಪಾರ್ಟಿಗೆ ಹೈಕಮಾಂಡ್ ಬ್ರೇಕ್ ಹಾಕಿತ್ತು. ಇದೀಗ ಮತ್ತೆ ಡಿನ್ನರ್ ಪಾರ್ಟಿ ನಡೆಸಲಾಗಿದೆ.
ನಾಲ್ವರು ಸಚಿವರ ರಹಸ್ಯ ಸಭೆ: ಇನ್ನು ಕರ್ನಾಟಕದ ನಾಲ್ವರು ಪ್ರಭಾವಿ ಸಚಿವರು ವಿಧಾನಸೌಧದಲ್ಲಿರುವ ಗೃಹ ಸಚಿವರ ರೂಮ್‌ನಲ್ಲಿ ಸಭೆ ಸೇರಿ ಚರ್ಚೆ ಮಾಡಿರುವುದು ಹೊಸ ಸಂಚಲನಕ್ಕೆ ಕಾರಣವಾಗಿದೆ. ಸಚಿವರಾದ ಡಾ.ಜಿ ಪರಮೇಶ್ವರ್, ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ ಹಾಗೂ ಎಚ್.ಸಿ.ಮಹದೇವಪ್ಪ ಅವರು ರಹಸ್ಯ ಸಭೆ ಮಾಡಿದ್ದಾರೆ ಎನ್ನಲಾಗಿದೆ.
ಕೆಲವೇ ದಿನಗಳ ಹಿಂದಷ್ಟೇ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ಡಿನ್ನರ್ ಪಾರ್ಟಿ ಮಾಡಲಾಗಿತ್ತು. ಇದೂ ಸಹ ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿತ್ತು. ಇನ್ನು ಜಿ ಪರಮೇಶ್ವರ್ ಅವರ ಡಿನ್ನರ್ ಪಾರ್ಟಿ ಪಾಲಿಟಿಕ್ಸ್‌ಗೂ ಹೈಕಮಾಂಡ್ ಬ್ರೇಕ್ ಹಾಕಿತ್ತು. ಆದರೂ ಕೆಲವೇ ದಿನಗಳಲ್ಲಿ ಮತ್ತೆ ಕೆಲವು ಸಚಿವರು ಮಾತ್ರ ಒಂದು ಕಡೆ ಸೇರಿ ಚರ್ಚೆ ಮಾಡಿದ್ದಾರೆ. ಒಟ್ಟಾರೆ ಮುಖ್ಯಮಂತ್ರಿ ಬದಲಾವಣೆ ವಿಚಾರ ಹಾಗೂ ಚರ್ಚೆ ಕಾಂಗ್ರೆಸ್‌ನಲ್ಲಿ ತಣ್ಣಗಾಗುವ ಲಕ್ಷಣ ಕಾಣಿಸುತ್ತಿಲ್ಲ.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಸದ್ದಿಲ್ಲದೆ ನಡೆದಿದೆ. ರಾಜ್ಯದ ಕಾಂಗ್ರೆಸ್ - ಬಿಜೆಪಿ ಎರಡರಲ್ಲೂ ರಾಜಕೀಯ ಬೆಳವಣಿಗೆಗಳು ಜೋರಾಗಿವೆ. ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಇನ್ನೊಂದು ಹಂತ ತಲುಪಿದೆ. ಅದೇ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ತಣ್ಣಗೆ ಆಗುವ ಲಕ್ಷಣಗಳು ಕಾಣಿಸುತ್ತಿಲ್ಲ.












Click it and Unblock the Notifications