2 ತಿಂಗಳಲ್ಲಿ 14 ನಗರಗಳಿಗೆ ನಗರ ಸಾರಿಗೆ ಬಸ್

ಬೆಂಗಳೂರು, ಜೂ.10 : ಮುಂದಿನ ಎರಡು ತಿಂಗಳಿನಲ್ಲಿ 14 ನಗರಗಳಲ್ಲಿ ನಗರ ಸಾರಿಗೆ ಬಸ್ ಸೌಲಭ್ಯ ಆರಂಭವಾಗಲಿದೆ. 1,080 ಬಸ್ಸುಗಳ ಖರೀದಿಗೆ ಈಗಾಗಲೇ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಸಾರಿಗೆ ಸಚಿವರು, ರಾಜ್ಯದ ಎಲ್ಲಾ 34 ನಗರಗಳಲ್ಲಿ ನಗರ ಸಾರಿಗೆ ಬಸ್ ಸೇವೆ ಆರಂಭಿಸುವ ಗುರಿಯನ್ನು ಹೊಂದಿದ್ದೆವು. 34 ನಗರಗಳ ಪೈಕಿ 20 ಕಡೆ ಈಗಾಗಲೇ ನಗರ ಸಾರಿಗೆ ವ್ಯವಸ್ಥೆ ಇದೆ. ನೂತನವಾಗಿ 14 ನಗರಗಳಲ್ಲಿ ನಗರ ಸಾರಿಗೆ ಸೇವೆ ಆರಂಭಿಸಲಾಗುತ್ತದೆ ಎಂದರು.

ramalinga reddy

ನಗರ ಸಾರಿಗೆಗಾಗಿ ಒಟ್ಟು 1,080 ಬಸ್ಸುಗಳನ್ನು ಖರೀದಿ ಮಾಡಲಾಗುತ್ತಿದೆ. ಹೊಸ ಬಸ್‌ ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಎರಡು ತಿಂಗಳಿನಲ್ಲಿ ಈ ಬಸ್ಸುಗಳು ಆಗಮಿಸಲಿವೆ ಎಂದು ಸಚಿವರು ವಿವರಣೆ ನೀಡಿದರು. [ಪ್ರಮುಖ ನಗರಗಳಲ್ಲಿ ನಗರ ಸಾರಿಗೆ ಬಸ್ ಸೌಲಭ್ಯ]

ಹೊಸದಾಗಿ ನಗರ ಸಾರಿಗೆ ಆರಂಭಿಸಲು ಮತ್ತು ಸದ್ಯ ಸೇವೆ ಇರುವ ಕಡೆ ಹೆಚ್ಚುವರಿ ಬಸ್ಸುಗಳನ್ನು ಒದಗಿಸಲು ಕೆಎಸ್‌ಆರ್‌ಟಿಸಿಗೆ 800 ಮತ್ತು ವಾಯವ್ಯ ಸಾರಿಗೆಗೆ 280 ಬಸ್‌ಗಳ ಖರೀದಿಗೆ ಈಗಾಗಲೇ ಆದೇಶ ನೀಡಲಾಗಿದೆ ಎಂದು ಹೇಳಿದರು. [487 ಟಾಟಾ ಬಸ್ ಖರೀದಿ ಮಾಡಲಿದೆ ಸಾರಿಗೆ ಇಲಾಖೆ]

ಜೂನ್ ಅಂತ್ಯಕ್ಕೆ ವರದಿ : ಕಳಪೆ ಗುಣಮಟ್ಟದ ಮಾರ್ಕೋಪೋಲೋ ಬಸ್‌ ಖರೀದಿ ಬಗ್ಗೆ ಹಿರಿಯ ಐಎಎಸ್‌ ಅಧಿಕಾರಿ ಉಮಾಶಂಕರ್‌ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಜೂನ್ ಅಂತ್ಯಕ್ಕೆ ಅವರು ತನಿಖಾ ವರದಿ ನೀಡಲಿದ್ದು, ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+