5, 8, 9ನೇ ತರಗತಿ ಪರೀಕ್ಷೆ; ಅಂಕ ನಿಗದಿ ಪರಿಷ್ಕೃತ ಸುತ್ತೋಲೆ

ಬೆಂಗಳೂರು, ಜನವರಿ 05: ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 5, 8 ಮತ್ತು 9ನೇ ತರಗತಿ ಮೌಲ್ಯಾಂಕನ ಪರೀಕ್ಷೆಗಳನ್ನು ನಡೆಸಲಿದೆ. ಈ ಪರೀಕ್ಷೆಯ ಮೌಲ್ಯ ಮಾಪನ, ಅಂಕ ನಿಗದಿ ಹೇಗೆ? ಎಂಬುದು ಮೊದಲಿನಿಂದಲೂ ಪ್ರಶ್ನೆಯಾಗಿದೆ.

ಇಲಾಖೆಯ ಆಯುಕ್ತರಾದ ಬಿ. ಬಿ. ಕಾವೇರಿ ಸುತ್ತೋಲೆಯೊಂದನ್ನು ಹೊರಡಿಸಿದ್ದು, 2023-24ನೇ ಸಾಲಿನ 5, 8 ಮತ್ತು 9 ನೇ ತರಗತಿ ಮೌಲ್ಯಾಂಕನ ಪರೀಕ್ಷೆಗೆ ಪಠ್ಯವಸ್ತು ಮತ್ತು ಅಂಕಗಳನ್ನು ನಿಗದಿಪಡಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಹಿಂದೆ ಹೊರಡಿಸಿದ್ದ ಸುತ್ತೋಲೆಯನ್ನು ಪರಿಷ್ಕರಣೆ ಮಾಡಲಾಗಿದೆ.

Circular On Class 5 8 And 9 Assessment Exam And Result

ಸುತ್ತೋಲೆಯಲ್ಲಿ 1 ರಿಂದ 10ನೇ ತರಗತಿಯ ಮೌಲ್ಯಾಂಕನಕ್ಕೆ ಸಂಬಂಧಿಸಿದ ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅವರ ಸುತ್ತೋಲೆ ದಿನಾಂಕ 01/07/2023ರಲ್ಲಿನ 5, 8 ಮತ್ತು 9ನೇ ತರಗತಿ ಮೌಲ್ಯಾಂಕನದ ಮಾಹಿತಿಯನ್ನು ತಿದ್ದುಪಡಿ ಮಾಡಲಾಗಿದ್ದು, ಅದರಂತೆ ಕ್ರಮವಹಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದೆ.

5ನೇ ತರಗತಿ ಮೌಲ್ಯಾಂಕನ; 2023-24ನೇ ಸಾಲಿನ ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ನೀಡಿರುವಂತೆ ನವೆಂಬರ್-2023ರಿಂದ ಫೆಬ್ರವರಿ-2024 ರವರೆಗಿನ ಪಠ್ಯವಸ್ತುವನ್ನು ಪರಿಗಣಿಸುವುದು.

SA-2ಗೆ ಬದಲಾಗಿ ನಡೆಸುವ ಮೌಲ್ಯಾಂಕನಕ್ಕೆ ಎಲ್ಲಾ ಭಾಷೆ ಮತ್ತು ಕೋರ್ ವಿಷಯಗಳಿಗೆ 10 ಅಂಕಗಳಿಗೆ ಮೌಖಿಕ ಮತ್ತು 40 ಅಂಕಗಳಿಗೆ ಲಿಖಿತ, ಒಟ್ಟಾರೆ 50 ಅಂಕಗಳಿಗೆ ಮೌಲ್ಯಾಂಕನ ನಡೆಸಿ 20 ಅಂಕಗಳಿಗೆ ಪರಿವರ್ತಿಸುವುದು.

ಅಂತಿಮವಾಗಿ ಫಲಿತಾಂಶ ನಿರ್ಣಯಿಸಲು FA-1, FA- 2, FA-3, FA-4, SA-1 ಮತ್ತು SA-2ಗಳ ಅಂಕಗಳನ್ನು 15+15+15+15+20+20=100 ರಂತೆ ಪರಿಗಣಿಸುವುದು.

ಶಾಲೆಗಳಿಂದ SATS ನಲ್ಲಿ ದಾಖಲಿಸಿರುವ FA-1, FA-2, FA-3, FA-4 ಮತ್ತು SA-1 ಅಂಕಗಳೊಂದಿಗೆ SA-2ನ ಪರಿವರ್ತಿಸಿದ 20 ಅಂಕಗಳನ್ನು ಮೇಲ್ಕಂಡಂತೆ ಪರಿಗಣಿಸಿ ಫಲಿತಾಂಶ ನಿರ್ಣಯಿಸುವುದು.

8ನೇ ತರಗತಿ ಮೌಲ್ಯಾಂಕನ; 2023-24 ನೇ ಸಾಲಿನ ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ನೀಡಿರುವಂತೆ ಜೂನ್-2023 ರಿಂದ ಫೆಬ್ರವರಿ-2024 ರವರೆಗಿನ ವಾರ್ಷಿಕ ಪಠ್ಯವಸ್ತುವನ್ನು ಪರಿಗಣಿಸುವುದು.

SA-2ಗೆ ಬದಲಾಗಿ ನಡೆಸುವ ಮೌಲ್ಯಾಂಕನಕ್ಕೆ ಎಲ್ಲಾ ಭಾಷೆ ಮತ್ತು ಕೋರ್‌ ವಿಷಯಗಳಿಗೆ 10 ಅಂಕಗಳಿಗೆ ಮೌಖಿಕ ಮತ್ತು 50 ಅಂಕಗಳಿಗೆ ಲಿಖಿತ, ಒಟ್ಟಾರೆ 60 ಅಂಕಗಳಿಗೆ ನಡೆಸಿ ನಂತರ 30 ಅಂಕಗಳಿಗೆ ಪರಿವರ್ತಿಸುವುದು.

ಅಂತಿಮವಾಗಿ ಫಲಿತಾಂಶ ನಿರ್ಣಯಿಸಲು FA-1, FA-2, FA-3, FA-4, SA-1 ಮತ್ತು SA-2ಗಳ ಅಂಕಗಳಿಗೆ 10+10+10+10+30+30=100ರಂತೆ ಪರಿಗಣಿಸುವುದು.

ಶಾಲೆಗಳಿಂದ SATSನಲ್ಲಿ ದಾಖಲಿಸಿರುವ FA-1, FA-2, FA-3, FA-4, SA-1 on SA-2ನ ಪರಿವರ್ತಿಸಿದ 30 ಅಂಕಗಳನ್ನು ಮೇಲ್ಕಂಡಂತೆ ಪರಿಗಣಿಸಿ ಫಲಿತಾಂಶ ನಿರ್ಣಯಿಸುವುದು. ವಿಶೇಷ ಸೂಚನೆಯಾಗಿ ಪ್ರಸ್ತುತ ಮೇಲ್ಕಂಡಂತೆ 8ನೇ ತರಗತಿ SA-2ಮೌಲ್ಯಾಂಕನಕ್ಕೆ ಜೂನ್ 2023ರಿಂದ ಫೆಬ್ರವರಿ-2024 ರವರೆಗಿನ ವಾರ್ಷಿಕ ಪಠ್ಯವಸ್ತುವನ್ನು ಪರಿಗಣಿಸುವುದರಿಂದಾಗಿ ವಿದ್ಯಾರ್ಥಿಗಳಿಗೆ ಮುಂಬರುವ 9ನೇ ಮತ್ತು 10ನೇ ತರಗತಿಯ ಪರೀಕ್ಷೆಯನ್ನು ಬರೆಯಲು ರೂಢಿಯಾದಂತಾಗಿ ಉತ್ತಮ ಅಭ್ಯಾಸಕ್ಕೆ ಸಹಕಾರಿಯಾಗುತ್ತದೆ.

9ನೇ ತರಗತಿ ಮೌಲ್ಯಾಂಕನ; 9ನೇ ತರಗತಿಯ SA-2 ಮೌಲ್ಯಾಂಕನಕ್ಕೆ ಆಯಾ ಭಾಷೆ ಹಾಗೂ 3 ಕೋರ್ ವಿಷಯಗಳಿಗೆ ನಿಗದಿಪಡಿಸಿದ ವಾರ್ಷಿಕ ಶೇ.100 ರಷ್ಟು ಪಠ್ಯವನ್ನು ಪರಿಗಣಿಸುವುದು.

ಆಂತರಿಕ ಮೌಲ್ಯಮಾಪನ. ನಾಲ್ಕು ರೂಪಣಾತ್ಮಕ ಮೌಲ್ಯಾಂಕನಗಳ (FA-1+FA-2+FA-3+FA-4)= 50+50+50+50= ಒಟ್ಟು 200 ಅಂಕಗಳಿಗೆ ನಿರ್ವಹಿಸಿ ನಂತರ ಪಥಮ ಭಾಷೆ 25 ಅಂಕಗಳಿಗೆ ಹಾಗೂ ದ್ವಿತೀಯ ಮತ್ತು ತೃತೀಯ ಭಾಷೆ ಹಾಗೂ 3 ಕೋ‌ರ್ ವಿಷಯಗಳಿಗೆ ತಲಾ 20 ಅಂಕಗಳಿಗೆ ಪರಿವರ್ತಿಸಿ 25+20+20+20+20+20 = ಒಟ್ಟು125 ಅಂಕಗಳಿಗೆ ಪರಿವರ್ತಿಸಿ ಆಂತರಿಕ ಮೌಲ್ಯಮಾಪನಕ್ಕೆ ಪರಿಗಣಿಸುವುದು.

SA-2 ಮೌಲ್ಯಾಂಕನ. ಪ್ರಥಮ ಭಾಷೆಗೆ 100 ಅಂಕಗಳು, ದ್ವಿತೀಯ ಮತ್ತು ತೃತೀಯ ಭಾಷೆ ಹಾಗೂ ಕೋರ್ ವಿಷಯಗಳಿಗೆ ತಲಾ 80 ಅಂಕಗಳಿಗೆ ಅಂದರೆ 100+80+80+80+80+80 ಒಟ್ಟು 500 ಅಂಕಗಳಿಗೆ ಮೌಲ್ಯಾಂಕನ/ ಲಿಖಿತ ಪರೀಕ್ಷೆಯನ್ನು ನಡೆಸುವುದು.

ಅಂತಿಮವಾಗಿ ಫಲಿತಾಂಶ ನಿರ್ಧರಿಸಲು ಆಂತರಿಕ ಮೌಲ್ಯಮಾಪನದ ಅಂಕಗಳು ಮತ್ತು SA-2 ಬದಲಾಗಿ ನಡೆಸುವ ಮೌಲ್ಯಾಂಕನ ಪರೀಕ್ಷೆಯ ಅಂಕಗಳನ್ನು ಪರಿಗಣಿಸುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+