ಅಮೆರಿಕಾ: ಸ್ಕೂಬಾ ಡೈವಿಂಗ್ ಎಡವಟ್ಟು ಕೋಮಾದಲ್ಲಿ ಚಿಕ್ಕಮಗಳೂರು ಮಹಿಳೆ
ಚಿಕ್ಕಮಗಳೂರು, ಜುಲೈ 4: ಅಮೆರಿಕದ ಹವಾಯ್‌ನಲ್ಲಿ ಸ್ಕೂಬಾ ಡೈವಿಂಗ್ ಮಾಡುತ್ತಿದ್ದಾಗ ಆಮ್ಲಜನಕ ನಳಿಕೆ ಕಳಚಿಬಿದ್ದ ಪರಿಣಾಮ ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿಯ ವಿಶ್ವನಾಥ್ ಪುತ್ರಿ ವಿ. ಶ್ರುತಿ ಅಸ್ವಸ್ಥರಾಗಿ ಕೋಮಾ ಸ್ಥಿತಿ ತಲುಪಿದ್ದಾರೆ.
ಹತ್ತು ತಿಂಗಳ ಹಿಂದೆ ಕ್ಯಾಲಿಪೋರ್ನಿಯಾದ ಸ್ಯಾನ್ ಜೋಸೆನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ವಿಜಯವಾಡದ ಸೀತಾರಾಮಕೃಷ್ಣ ಅವರೊಂದಿಗೆ ಶ್ರುತಿ ವಿವಾಹ ನಡೆದಿತ್ತು. ರಜೆ ಕಳೆಯಲು ದಂಪತಿ ಜತೆಯಾಗಿ ಹವಾಯ್ ದ್ವೀಪಕ್ಕೆ ಹೋಗಿದ್ದರು. ಅಲ್ಲಿ ಸ್ಕೂಬಾ ಡೈವಿಂಗ್ ಮಾಡಲು ತೆರಳಿದ ವೇಳೆ ಮುಳುಗಿ ಶ್ರುತಿ ಅಸ್ವಸ್ಥರಾಗಿ ಇದೀಗ ಕೋಮಾ ಸ್ಥಿತಿ ತಲುಪಿದ್ದಾರೆ.

ನೀರಿನಲ್ಲಿ ಮುಳುಗುತ್ತಿದ್ದ ಶ್ರುತಿಯನ್ನು ತಜ್ಞ ಈಜುಗಾರರು ರಕ್ಷಿಸಿ ಆಸ್ಪತ್ರೆ ಸೇರಿಸಿದರಾದರೂ ಅಷ್ಟರಲ್ಲಾಗಲೇ ಆಕೆ ಕೋಮಾ ಸ್ಥಿತಿಗೆ ತಲುಪಿಯಾಗಿತ್ತು. ಜೂನ್ 30ರಂದು ಈ ಘಟನೆ ನಡೆದಿತ್ತು.
ಇನ್ನು ವಿದೇಶಕ್ಕೆ ಹೋಗಲು ಶ್ರುತಿ ಕುಟುಂಬಸ್ಥರು ಸಿದ್ದವಾಗಿದ್ದಾರೆ. ಪಾಸ್ಪೋರ್ಟ್ ಪಡೆಯಲು ವಿಳಂಬವಾಗಿದ್ದು ಅವರಿನ್ನೂ ಭಾರತದಲ್ಲೇ ಇದ್ದಾರೆ. ಸದ್ಯದಲ್ಲೇ ಅವರು ಅಮೆರಿಕಾಗೆ ತೆರಳಲಿದ್ದಾರೆ.












Click it and Unblock the Notifications