ರಾಜ್ಯದ ರಸ್ತೆ ಯೋಜನೆಗಳಿಗೆ ನೆರವು ಕೇಳಿದ ಸಿದ್ದರಾಮಯ್ಯ
ಬೆಂಗಳೂರು, ಜನವರಿ 12 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ರಾಜ್ಯದ ರಸ್ತೆ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ರಾಜ್ಯದಲ್ಲಿ 2572 ಕಿ.ಮೀ.ಉದ್ದದ ಹೊಸ ಹೆದ್ದಾರಿಗಳ ಯೋಜನಾ ವರದಿ ತಯಾರಿಸಲು ಕೇಂದ್ರ ಸರ್ಕಾರದ ಒಪ್ಪಿಗೆ ಸಿಗಬೇಕಾಗಿದೆ.
ಸೋಮವಾರ ದೆಹಲಿಯಲ್ಲಿ ಸಿದ್ದರಾಮಯ್ಯ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಕುರಿತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಚರ್ಚೆ ನಡೆಸಿದ ಪ್ರಮುಖ ಅಂಶಗಳು [ಬೆಂಗಳೂರು-ಮೈಸೂರು ನಡುವೆ 6 ಪಥದ ಕಾಂಕ್ರಿಟ್ ರಸ್ತೆ]
* ರಾಜ್ಯದಲ್ಲಿ 2573 ಕಿ.ಮೀ ಉದ್ದದ ಹೊಸ ಹೆದ್ದಾರಿಗಳ ವಿವರವಾದ ಯೋಜನಾ ವರದಿ ತಯಾರಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸಮ್ಮತಿ ಬಾಕಿ ಇದೆ.
* ಕೊರಟಗೆರೆ-ಬಾವಲಿ ರಾಜ್ಯ ಹೆದ್ದಾರಿ - 33 ರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸಾರಿಗೆ ನಿಧಿಯಿಂದ ರೂ 38 ಕೋಟಿಗಳ ಅನುದಾನ ನೀಡಲು ಮನವಿ ಸಲ್ಲಿಸಲಾಗಿದೆ. [ಹಳಿತಪ್ಪಿದ ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ಯೋಜನೆ]
* ಆರ್ಥಿಕ ಪ್ರಾಮುಖ್ಯತೆ ಅಡಿಯಲ್ಲಿ 40 ಕೋಟಿ ಮತ್ತು ಅಂತರ್ ರಾಜ್ಯ ಸಂಪರ್ಕದ ಯೋಜನೆ ಅಡಿ 43 ಕೋಟಿಗಳ ಯೋಜನೆಗಳನ್ನು ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಲಾಗಿದೆ.
* 2015-16ರ ನವೀಕರಿಸಲಾದ ವಾರ್ಷಿಕ ಯೋಜನೆಯಲ್ಲಿ ಭೂಸ್ವಾಧೀನ ಮತ್ತು ಕಾರಿಡಾರ್ ನಿರ್ಮಾಣ ಯೋಜನೆಗಳು ಪ್ರಮುಖವಾಗಿವೆ. ಇದಕ್ಕೆ 5,252 ಕೋಟಿ ರೂ. ಗಳ ಯೋಜನೆಯನ್ನು ಸಿದ್ಧಪಡಿಸಿ ನಿತಿನ್ ಗಡ್ಕರಿಯವರಿಗೆ ಸಲ್ಲಿಸಲಾಗಿದೆ.
* ಭಾರತಮಾಲಾ ಪರಿಯೋಜನಾ, ಬಂದರು ಸಂಪರ್ಕ, ರಾಷ್ಟ್ರೀಯ ಹೆದ್ದಾರಿಗಳ ನಡುವಿನ ಸಂಪರ್ಕ, ಧಾರ್ಮಿಕ ಮತ್ತು ಹಿಂದುಳಿದ ಸ್ಥಳಗಳ ಅಡಿಯಲ್ಲಿ ರಾಜ್ಯದ ಹಲವು ಯೋಜನೆಗಳ ಪ್ರಸ್ತಾವ ಸಲ್ಲಿಸಲಾಗಿದೆ. ಇವುಗಳಲ್ಲಿ ಶರಾವತಿ ಹಿನ್ನೀರನ ಹೊಳೆಬಾಗಿಲಿನಲ್ಲಿ (ಸಿಗಂದೂರು ಚೌಡೇಶ್ವರಿ) ಸೇತುವೆ ನಿರ್ಮಾಣದ ಪ್ರಸ್ತಾಪ ಸೇರಿದೆ.

* ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ 276ರ ಲೇನಿಂಗ್ ಕುರಿತು. ಇದರಲ್ಲಿ ಭೂಸ್ವಾದೀನ ಪ್ರಕ್ರಿಯೆಗೆ ಬೇಕಾಗುವ ರೂ.2300 ಕೋಟಿಗಳ ಅನುದಾನದ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
* ಸೆಟಲೈಟ್ ಟೌನ್ ರಿಂಗ್ ರೋಡ್, ಔಟರ್ ರಿಂಗ್ ರೋಡ್, ರಿಂಗ್ ರೋಡ್ ಮತ್ತು ಪೆರಿಫೆರಲ್ ರಿಂಗ್ ರೋಡ್ ಗಳಿಗೆ ಅಗತ್ಯವಿರುವ ಅನುದಾನಗಳನ್ನು ತ್ವರಿತವಾಗಿ ಬಿಡುಗಡೆ ಮಾಡಲು ಒತ್ತಾಯಿಸಲಾಗಿದೆ.
* ನೆಲಮಂಗಲ-ತುಮಕೂರು ರಾಷ್ಟ್ರೀಯ ಹೆದ್ದಾರಿ 04 ರ ಲೇನಿಂಗ್ ಯೋಜನೆಯ ಪ್ರಸ್ತಾವವನ್ನು ಪರಿಗಣಿಸುವಂತೆ ಮನವಿ ಮಾಡಲಾಗಿದೆ.












Click it and Unblock the Notifications