₹300 ದಾಟಿದ ಕೆ.ಜಿ ಚಿಕನ್ ಬೆಲೆ, ದಿಢೀರ್ ಏರಿಕೆಗೆ ಕಾರಣ ಇಲ್ಲಿದೆ
ಕರ್ನಾಟಕದಲ್ಲಿ ಕೋಳಿ ಮಾಂಸದ ಬೆಲೆ ದಿನೇದಿನೇ ಏರಿಕೆಯಾಗುತ್ತಿದ್ದು, ಕಳೆದ ಎರಡು ವಾರಗಳಲ್ಲಿ ಪ್ರತಿ ಕೆ.ಜಿ ಮೇಲೆ ಸುಮಾರು ₹100ಗೂ ಹೆಚ್ಚಾಗಿದೆ. ಇದರಿಂದ ಚಿಕನ್ ಪ್ರಿಯರ ಜೇಬು ಸುಡುತ್ತಿದೆ. ಸದ್ಯ ಬೆಂಗಳೂರು ಸೇರಿ ವಿವಿಧೆಡೆ ಚಿಕನ್ ದರ ಕೆ.ಜಿಗೆ ₹300 ದಾಟಿದೆ. ಈ ದಿಢೀರ್ ಬೆಲೆ ಏರಿಕೆಗೆ ಕಾರಣ ಏನು ಎನ್ನುವ ಮಾಹಿತಿ ಇಲ್ಲಿದೆ.
ತಮಿಳುನಾಡಿನಲ್ಲಿ ಕೋಳಿ ಸಾಕಣೆದಾರರು ನಡೆಸುತ್ತಿರುವ ಮುಷ್ಕರದ ಪರಿಣಾಮ ಈ ಬೆಲೆ ಏರಿಕೆ ಕಂಡುಬಂದಿದೆ. ಅಲ್ಲಿನ ಕೋಳಿ ಫಾರಂ ಮಾಲೀಕರು ಖಾಸಗಿ ಬಾಯ್ಲರ್ ಕಂಪನಿಗಳು ನೀಡುತ್ತಿರುವ ಅಲ್ಪ ಸಾಕಾಣಿಕೆ ದರ ವಿರೋಧ ವ್ಯಕ್ತಪಡಿಸಿ, ಜನವರಿ 1ರಿಂದ ಕೋಳಿ ಉತ್ಪಾದನೆ ಸಂಪೂರ್ಣ ಸ್ಥಗಿತಗೊಳಿಸುವ ಮೂಲಕ ಹೋರಾಟ ತೀವ್ರಗೊಳಿಸಿದ್ದಾರೆ. ಈ ಹಿನ್ನೆಲೆ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಗೆ ಕೋಳಿ ಮಾಂಸದ ಪೂರೈಕೆ ಬಹುತೇಕ ನಿಂತಿದೆ.

ತಮಿಳುನಾಡಿನ ಪಲ್ಲಡಂ, ಈರೋಡ್, ಕೊಯಮತ್ತೂರು, ತಿರುಪ್ಪೂರ್ ಹಾಗೂ ನಾಮಕ್ಕಲ್ ಪ್ರದೇಶಗಳು ಕೋಳಿ ಉತ್ಪಾದನೆಯ ಪ್ರಮುಖ ಕೇಂದ್ರಗಳು. ಇಲ್ಲಿಂದ ಪ್ರತಿದಿನವೂ ಕರ್ನಾಟಕಕ್ಕೆ ದೊಡ್ಡ ಪ್ರಮಾಣದಲ್ಲಿ ಕೋಳಿ ಮಾಂಸ ಪೂರೈಕೆಯಾಗುತ್ತಿತ್ತು. ಈಗ ಮುಷ್ಕರದ ಕಾರಣ ಈ ಪೂರೈಕೆ ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿ ಚಿಕನ್ ಬೆಲೆಗಳು ಗಗನಕ್ಕೇರಿದೆ.
ಡಿಸೆಂಬರ್ ತಿಂಗಳಲ್ಲಿ ಚಿಕನ್ ಕೆಜಿಗೆ ₹200-240ರಷ್ಟಿತ್ತು. ಆದರೆ ಇದೀಗ ₹300ರಿಂದ ₹320ರವರೆಗೆ ಏರಿಕೆಯಾಗಿದೆ. ಮುಷ್ಕರ ಇನ್ನೂ ಮುಂದುವರಿದರೆ, ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಎಚ್ಚರಿಸಿದ್ದಾರೆ. ಕೋಳಿ ಸಾಕಣೆದಾರರ ಪ್ರಕಾರ, ಕಳೆದ 5-6 ವರ್ಷಗಳಿಂದ ಕಂಪನಿಗಳು ಪ್ರತಿ ಕೆಜಿಗೆ ಕೇವಲ ₹6.50 ಸಾಕಾಣಿಕೆ ದರ ಮಾತ್ರ ನೀಡುತ್ತಿವೆ. ಈ ಅವಧಿಯಲ್ಲಿ ವಿದ್ಯುತ್ ದರ, ಕಾರ್ಮಿಕ ವೆಚ್ಚ, ನಿರ್ವಹಣಾ ಖರ್ಚುಗಳು ಸಿಕ್ಕಾಪಟ್ಟೆ ಹೆಚ್ಚಾಗಿವೆ.
ಮುಷ್ಕರಕ್ಕೆ ಕಾರಣವೇನು?
ಹೀಗಾಗಿ ಸಾಕಣೆ ದರವನ್ನು ಬಾಯ್ಲರ್ ಕೋಳಿಗೆ ಕೆಜಿಗೆ ₹20, ನಾಟಿ ಕೋಳಿಗೆ ₹25, ಕೌಜ್ ಹಕ್ಕಿಗೆ ₹7 ದರ ನಿಗದಿ ಮಾಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಕೋಳಿ ಸಾಕಣೆದಾರರಿಗಾಗಿ ಪ್ರತ್ಯೇಕ ಕಲ್ಯಾಣ ಮಂಡಳಿ ಸ್ಥಾಪಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಮುಷ್ಕರ ತೀವ್ರಗೊಂಡಿರುವ ಹಿನ್ನೆಲೆ ತಮಿಳುನಾಡು ಪಶುಸಂಗೋಪನಾ ಇಲಾಖೆಯು ಇದೇ ಜನವರಿ 21ರಂದು ಕಂಪನಿಗಳು ಮತ್ತು ಕೋಳಿ ಸಾಕಣೆದಾರರ ಸಭೆ ಕರೆದಿದೆ.

ಅಲ್ಲದೆ ಈ ಸಭೆಯಲ್ಲಿ ಸಮಸ್ಯೆಗೆ ಪರಿಹಾರ ಸಿಗದಿದ್ದರೆ, ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕೋಳಿ ಮಾಂಸದ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
ತಮಿಳುನಾಡಿನಲ್ಲಿ ಸುಮಾರು 40,000 ಕೋಳಿ ಸಾಕಣೆದಾರರಿದ್ದು, ತಿರುಪ್ಪೂರು ಮತ್ತು ಕೊಯಮತ್ತೂರಿನಲ್ಲಿ ಮಾತ್ರವೇ 6,000 ರೈತರಿದ್ದಾರೆ. ಈಗಾಗಲೇ ತಮ್ಮ ಜಮೀನುಗಳಲ್ಲಿ ಕೋಳಿಗಳನ್ನು ಹೊಂದಿರುವವರು ಸತತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆ. ಪ್ರತಿಭಟನೆ ಮುಂದುವರಿದರೆ, ಮುಂಬರುವ ದಿನಗಳಲ್ಲಿ ಬಾಯ್ಲರ್ ಕೋಳಿಯ ಬೆಲೆ ಇನ್ನೂ ಏರಿಕೆ ಕಾಣಲಿದೆ ಎಂದು ವರದಿಯಾಗಿದೆ. ಇದರ ಪರಿಣಾಮ ನೇರವಾಗಿ ಕರ್ನಾಟಕದ ಮೇಲೆ ಬೀರಲಿದೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ












Click it and Unblock the Notifications