ಜೂ.4ರಂದು ಹೊರಬೀಳಲಿದೆ ಸಿಇಟಿ ಫಲಿತಾಂಶ
ಬೆಂಗಳೂರು, ಮೇ 31: ವೃತ್ತಿಪರ ಕೋರ್ಸ್‌ಗಳಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶ ಜೂ 1ರಂದು ಹೊರ ಬೀಳಲಿದೆ. ಜೂ.1ರಂದು ಫಲಿತಾಂಶ ಪ್ರಕಟಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧತೆ ನಡೆಸಿತ್ತು ಆದರೆ ಜೂನ್ 4ಕ್ಕೆ ಮುಂದೂಡಿದೆ.
ಏ.18ರಿಂದ 20ರವರೆಗೆ ಪರೀಕ್ಷೆಗಳು ನಡೆದಿದ್ದವು. ಮೇ ಅಂತ್ಯದಲ್ಲಿ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳಿದ್ದರು. ಕೆಇಇಎ ಮೂಲಗಳ ಪ್ರಕಾರ ಫಲಿತಾಂಶ ಸಿದ್ವಿದ್ದು, ಉನ್ನತ ಶಿಕ್ಷಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಒಪ್ಪಿಗೆ ಸಿಗಬೇಕಿದೆ.'ಜೂ.4ರಂದು ಫಲಿತಾಂಶ ಪ್ರಕಟಿಸಲು ಹಿರಿಯ ಅಧಿಕಾರಿಗಳು ಸೂಚಿಸಿರುವ ಬಗ್ಗೆ ಮಾಹಿತಿ ಲಭಿಸಿದೆ.

ಜತೆಗೆ ಸಮ್ಮಿಶ್ರ ಸರ್ಕಾರದಲ್ಲಿ ವೈದ್ಯಕೀಯ ಮತ್ತು ಉನ್ನತ ಶಿಕ್ಷಣ ಮಂತ್ರಿ ಖಾತೆ ಹಂಚಿಕೆಯಾಗಿ ಹೊಸ ಸಚಿವರು ಅಧಿಕಾರಕ್ಕೆ ಬಂದಿಲ್ಲ. ಬಿಇ ಸೀಟಲು ಹಂಚಿಕೆ ಮತ್ತು ಶುಲ್ಕ ನಿಗದಿ ವಿಚಾರದಲ್ಲಿ ಯಾವುದೇ ನಿರ್ಧಾರವನ್ನು ಇಲಾಖೆ ತೆಗೆದುಕೊಂಡಿಲ್ಲ. ಸಚಿವರ ಅಭಿಪ್ರಾಯದೊಂದಿಗೆ ಈ ವಿಚಾರದಲ್ಲಿ ಇಲಾಖೆ ಹೆಜ್ಜೆ ಇಡಲು ನಿರ್ಧರಿಸಿರುವುದು ಫಲಿತಾಂಶ ವಿಳಂಬಕ್ಕೆ ಕಾರಣ ಎನ್ನಲಾಗಿದೆ.












Click it and Unblock the Notifications