ಬಿಜೆಪಿ ಕಾರ್ಯಕರ್ತರ ಸಂತಸ, ಸಂಭ್ರಮದ ಚಿತ್ರಗಳು

ಬೆಂಗಳೂರು, ಮೇ 27 : ದೇಶದ 15ನೇ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು, ನರೇಂದ್ರ ಮೋದಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ದೇಶ ಮತ್ತು ರಾಜ್ಯದ ಹಲವೆಡೆ ಸಂಭ್ರಮಾಚರಣೆ ನಡೆಸಿದರು.

ಮಂಗಳೂರು, ಬೆಂಗಳೂರಿನ ಬಿಜೆಪಿ ಕಚೇರಿ, ಬಿಜಾಪುರ, ಕೋಲ್ಕತ್ತಾ ಮುಂತಾದ ಕಡೆ ನರೇಂದ್ರ ಮೋದಿ ಅಭಿಮಾನಿಗಳು ಸಂಭ್ರಮ ಮುಗಿಲು ಮುಟ್ಟಿತ್ತು. ಪ್ರಯಾಣ ಮಾಡುತ್ತಿದ್ದ ಅನೇಕ ಜನರು ರಸ್ತೆಯಲ್ಲಿ ಸಿಕ್ಕ ಟಿವಿ ಶೋರೂಮ್ ಗಳ ಮುಂದೆ ನಿಂತು ಪ್ರಧಾನಿ ಪ್ರಮಾಣ ವಚನ ಸಮಾರಂಭ ವೀಕ್ಷಿಸಿದರು. [ಮೋದಿ ಸಂಪುಟದಲ್ಲಿ ಯಾರಿಗೆ ಯಾವ ಖಾತೆ?]

ತಮ್ಮ ಮಗ ಪ್ರಧಾನಿ ಪಟ್ಟಕ್ಕೇರಿದ್ದನ್ನು ಮನೆಯಲ್ಲಿಯೇ ಟಿವಿ ಮುಂದೆ ಕುಳಿತು ನರೇಂದ್ರ ಮೋದಿ ತಾಯಿ ಹೀರಾಬೆನ್ ವೀಕ್ಷಿಸಿದರು. ಮಂಗಳೂರಿನಲ್ಲಿ ನರೇಂದ್ರ ಮೋದಿ ಭಾವಚಿತ್ರದ ಮೆರವಣಿಗೆ ಮಾಡಿ, ಪಟಾಕಿ ಸಿಡಿಸಿ ಬಿಜೆಪಿ ಕಾರ್ಯಕರ್ತರು ಸಂಭ್ರಮ ಆಚರಿಸಿದರು. ಸಂಭ್ರಮಾಚರಣೆಯ ಚಿತ್ರಗಳು ಇಲ್ಲಿವೆ.

ನನ್ನ ಮಗ ಪ್ರಧಾನಿಯಾದ

ನನ್ನ ಮಗ ಪ್ರಧಾನಿಯಾದ

ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ಗಾಂಧಿನಗರದ ಮನೆಯಲ್ಲಿ ಕುಳಿತು ಕಣ್ತುಂಬಿಕೊಂಡ ತಾಯಿ ಹೀರಾಬೆನ್.

ಪ್ರಧಾನಿ ನರೇಂದ್ರ ಮೋದಿಗೆ ಜೈ

ಪ್ರಧಾನಿ ನರೇಂದ್ರ ಮೋದಿಗೆ ಜೈ

ರಾಂಚಿಯಲ್ಲಿ ಬಿಜೆಪಿ ಕಾರ್ಯಕರ್ತರು ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಪಟಾಕಿ ಸಿಡಿಸಿ, ಪ್ರಧಾನಿ ನರೇಂದ್ರ ಮೋದಿಗೆ ಜೈ ಎಂದು ಘೋಷಣೆ ಕೂಗಿದರು.

ಮೋದಿ ಪ್ರಧಾನ ಮಂತ್ರಿ ಆದರು

ಮೋದಿ ಪ್ರಧಾನ ಮಂತ್ರಿ ಆದರು

ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವುದನ್ನು ಅಲಹಾಬಾದ್ ನಲ್ಲಿ ಸಾರ್ವಜನಿಕರು ಟಿವಿ ಶೋರಂನಲ್ಲಿ ನೋಡಿ ಆನಂದಿಸಿದರು.

ರಾಂಚಿಯಲ್ಲಿ ಎಲ್ ಸಿಡಿ ವ್ಯವಸ್ಥೆ

ರಾಂಚಿಯಲ್ಲಿ ಎಲ್ ಸಿಡಿ ವ್ಯವಸ್ಥೆ

ರಾಂಚಿಯಲ್ಲಿ ನರೇಂದ್ರ ಮೋದಿ ಪದಗ್ರಹಣ ಸಮಾರಂಭವನ್ನು ವೀಕ್ಷಿಸಲು ಬಿಜೆಪಿ ಕಾರ್ಯಕರ್ತರು ಎಲ್ ಸಿಡಿ ವ್ಯವಸ್ಥೆ ಮಾಡಿದ್ದರು.

ನಮೋ ರಥದೊಂದಿಗೆ ಸಂಭ್ರಮಾಚರಣೆ

ನಮೋ ರಥದೊಂದಿಗೆ ಸಂಭ್ರಮಾಚರಣೆ

ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜೀಪ್ ನಲ್ಲಿ ಮೋದಿ ಕಟೌಟ್ ಇಟ್ಟುಕೊಂಡು ನಮೋ ರಥದ ಮೆರವಣಿಗೆ ಮಾಡಿದರು.

ಮೋದಿ ಪ್ರಧಾನಿಯಾದ್ರು ನೋಡಿ

ಮೋದಿ ಪ್ರಧಾನಿಯಾದ್ರು ನೋಡಿ

ಕೋಲ್ಕತ್ತಾದ ಟಿವಿ ಶೋ ರೂಂನಲ್ಲಿ ಜನರು ನರೇಂದ್ರ ಮೋದಿ ಪ್ರಧಾನಿ ಹುದ್ದೆಗೇರಿದ ಕ್ಷಣವನ್ನು ವೀಕ್ಷಿಸಿದರು.

ಎಲ್ಲೆಡೆ ನಮೋ ನಮೋ ಜೈಂಕಾರ

ಎಲ್ಲೆಡೆ ನಮೋ ನಮೋ ಜೈಂಕಾರ

ಮಂಗಳೂರಿನಲ್ಲಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು ನರೇಂದ್ರ ಮೋದಿ ಭಾವಚಿತ್ರವಿರುವ ಟೀ ಶರ್ಟ್ ಧರಿಸಿದ್ದರು.

ನೋಡ್ರಪ್ಪ ನೋಡಿ ಮೋದಿ

ನೋಡ್ರಪ್ಪ ನೋಡಿ ಮೋದಿ

ನರೇಂದ್ರ ಮೋದಿ ಅವರ ಸಂಬಂಧಿಕರು ಮೋದಿ ತಾಯಿ ಹೀರಾಬೆನ್ ಜೊತೆ ಕುಳಿತು ಮೊದಿ ಪ್ರಧಾನಿ ಪಟ್ಟಕ್ಕೇರಿದ್ದನ್ನು ಕಂಡು ಸಂಭ್ರಮಿಸಿದರು.

ಪಕ್ಷದ ಕಚೇರಿಯಲ್ಲಿ ಸಂಭ್ರಮ

ಪಕ್ಷದ ಕಚೇರಿಯಲ್ಲಿ ಸಂಭ್ರಮ

ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನರೇಂದ್ರ ಮೋದಿ ಪದಗ್ರಹಣ ಸಮಾರಂಭವನ್ನು ವೀಕ್ಷಿಸಲು ಎಲ್ ಸಿಡಿ ವ್ಯವಸ್ಥೆ ಮಾಡಲಾಗಿತ್ತು. ಹಲವಾರು ಜನರು ಅಲ್ಲಿ ಕುಳಿತು ಸಮಾರಂಭ ವೀಕ್ಷಿಸಿದರು.

ಮಂಗಳೂರು ಬಿಜೆಪಿ ಕಚೇರಿಯಲ್ಲಿ ಸಂಭ್ರಮ

ಮಂಗಳೂರು ಬಿಜೆಪಿ ಕಚೇರಿಯಲ್ಲಿ ಸಂಭ್ರಮ

ನರೇಂದ್ರ ಮೋದಿ ಪದಗ್ರಹಣ ಸಮಾರಂಭವನ್ನು ವೀಕ್ಷಿಸಲು ಅನುಕೂಲವಾಗುವಂತೆ ಮಂಗಳೂರಿನ ಬಿಜೆಪಿ ಮುಂದೆ ಎಲ್ ಸಿಡಿ ವ್ಯವಸ್ಥೆ ಮಾಡಲಾಗಿತ್ತು.

ಮೋದಿ..ಮೋದಿ...ಮೋದಿ

ಮೋದಿ..ಮೋದಿ...ಮೋದಿ

ಮೋದಿ..ಮೋದಿ...ಮೋದಿ ಎಂಬ ಘೋಷಣೆ ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿ ಮುಂದೆ ಕೇಳಿಬರುತ್ತಿತ್ತು. ಮೋದಿ ವೇಷಧಾರಿಯನ್ನು ಎತ್ತಿಕೊಂಡು ನರೇಂದ್ರ ಮೋದಿ ಪ್ರಧಾನಿ ಹುದ್ದೆಗೇರಿದ ಸಂಭ್ರಮವನ್ನು ಕಾರ್ಯಕರ್ತರು ಆಚರಿಸಿದರು.

ಬೆಳಗಾವಿಯಲ್ಲಿ ಲಾಡು ಹಂಚಿ ಸಂಭ್ರಮ

ಬೆಳಗಾವಿಯಲ್ಲಿ ಲಾಡು ಹಂಚಿ ಸಂಭ್ರಮ

ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿ ತಕ್ಷಣ ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತರು ಲಾಡು ಹಂಚಿ ಸಂಭ್ರಮಾಚರಣೆ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+