ಹೊಸ ಆಡಿಯೋ ಔಟ್, ಡಿಕೆಶಿ ಹೆಸರು ಉಲ್ಲೇಖಿಸಿದ ಸಿಡಿ ಗರ್ಲ್

ಬೆಂಗಳೂರು, ಮಾರ್ಚ್ 26: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಸುಮಾರು 24 ದಿನಗಳ ಬಳಿಕ ಸಿಡಿಯಲ್ಲಿರುವ ಯುವತಿ ಇದೇ ಮೊದಲ ಬಾರಿಗೆ ದೂರು ದಾಖಲಿಸಿದ್ದಾರೆ. ಯುವತಿ ಪರ ವಕೀಲರಾದ ಜಗದೀಶ್ ಕುಮಾರ್ ಅವರು ಇಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಇದಾದ ಬಳಿಕ ಸಂಜೆ ವೇಳೆಗೆ ಮಾಧ್ಯಮಗಳ ಪರದೆ ಮೇಲೆ ಆಡಿಯೋ ಬಾಂಬ್ ಸ್ಫೋಟಗೊಂಡಿದೆ. ಆಡಿಯೋದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಸರನ್ನು ಸಿಡಿ ಗರ್ಲ್ ಉಲ್ಲೇಖಿಸಿದ್ದಾರೆ. ಸುಮಾರು 6 ನಿಮಿಷ 59 ಸೆಕೆಂಡುಗಳಲಿರುವ ಆಡಿಯೋದಲ್ಲಿ ಸಿಡಿ ಗರ್ಲ್ ತಮ್ಮ ಗೆಳೆಯ ಆಕಾಶ್ ಜೊತೆಗಿದ್ದಾರೆ ಎಂದು ತಿಳಿದು ಬರುತ್ತದೆ. ಯುವತಿ ತಮ್ಮ ಮನೆಯವರ ಜೊತೆ ಸಂಭಾಷಣೆಯಲ್ಲಿ ತೊಡಗಿರುವ ಆಡಿಯೋ ಇದಾಗಿದೆ. ಈ ಸಂಭಾಷಣೆಯಲ್ಲಿ ತಮ್ಮ ಆತಂಕಗೊಂಡಿರುವುದು ಕಂಡು ಬರುತ್ತದೆ. ಇದು ಭಾರಿ ಡೇಂಜರ್ ಎನ್ನುತ್ತಾನೆ. ಸಿಡಿ ಯುವತಿ ತಾಯಿ ಕೂಡಾ ದುಃಖಪಟ್ಟು ಎಲ್ಲಾ ಬಿಟ್ಟು ಮನೆಗೆ ಬರುವಂತೆ ಕೇಳುತ್ತಾರೆ.

''ವಿಡಿಯೋ ಇರೋದು ಸತ್ಯ, ಆದರೆ, ಅದರಲ್ಲಿರುವುದು ನಾನಲ್ಲ ಅದೆಲ್ಲ, ಗ್ರಾಫಿಕ್ಸ್, ವಾಯ್ಸ್ ಮಾಡ್ಯುಲೇಷನ್ ಮಾಡಿದ್ದಾರೆ. ಎಂದು ಸಿಡಿ ಲೇಡಿ ತನ್ನ ತಮ್ಮನಿಗೆ ತಿಳಿಸಿದ್ದಾಳೆ. ಎಲ್ಲಾ ಕ್ಲಿಯರ್ ಮಾಡ್ತೀನಿ, ಡಿಕೆ ಶಿವಕುಮಾರ್ ಅವರ ಕಡೆಯವರಿಗೆ ಕಾಯುತ್ತಿದ್ದೇನೆ ಎಂದು ಹೇಳಿರುವುದು ಈಗ ಮಹತ್ವ ಪಡೆದುಕೊಳ್ಳುತ್ತಿದೆ. ಎಸ್ಐಟಿ ಈ ಆಡಿಯೋ ಬಗ್ಗೆ ತನಿಖೆ ನಡೆಸುವುದೇ ಕಾದು ನೋಡಬೇಕಿದೆ.

CD Row: CD Ladys mentions DK Shivakumar name in Audio conversation

ಕುಟುಂಬದವರ ಬೆಂಬಲ ಕೋರಿದ ಯುವತಿ:
ನನಗೆ ಆಕಾಶ್ ಹಾಗೂ ಇತರೆ ಫ್ರೆಂಡ್ಸ್ ಸಹಕಾರ ನೀಡುತ್ತಿದ್ದಾರೆ. ಧೈರ್ಯ ತುಂಬಿದ್ದಾರೆ. ಮನೆಯವರಾಗಿ ನೀವೆ ನನ್ನ ಬೆಂಬಲಕ್ಕೆ ಇಲ್ಲಾಂದ್ರೆ ಹೇಗೆ, ಚಿನ್ನಿ(ತಮ್ಮ) ನನ್ನ ನಂಬು, ನಾ ಯಾಕ್ ಅಂಥಾ ಕೆಲ್ಸಕ್ಕೆ ಹೋಗುತ್ತೇನೆ, ಎಲ್ಲರೂ ನನ್ನ ಮೇಲೆ ಡೌಟ್ ಪಡುತ್ತಿದ್ದಾರೆ. ನ್ಯೂಸ್‌ನಲ್ಲಿ ತೋರಿಸುತ್ತಾ ಇರೋದೆಲ್ಲ ಸುಳ್ಳು, ಯಾರೋ ವಾಯ್ಸ್ ಮಾಡ್ಯುಲೇಷನ್ ಮಾಡಿದ್ದಾರೆ. ಅವರು ಡಿಕೆ ಶಿವಕುಮಾರ್ ಕಡೆಯವರು ಬರುತ್ತಿದ್ದಾರೆ, ಮತ್ತೆ ಕಾಲ್ ಮಾಡ್ತೀನಿ ಇರು ಎಂದು ತಮ್ಮನಿಗೆ ಧೈರ್ಯ ಹೇಳುತ್ತಾಳೆ.

ಅಸಲಿ ವಿಡಿಯೋ ಅವರ(ಡಿಕೆಶಿ) ಕಡೆ ಇದೆ, ಅವರ ಬಳಿ ಎಲ್ಲಾ ಕ್ಲಿಯರ್ ಮಾಡ್ತೀನಿ ಎಂದು ಯುವತಿ ಹೇಳುತ್ತಾಳೆ

ಈ ಮೂಲಕ ರಮೇಶ್ ಜಾರಕಿಹೊಳಿ ಹೇಳಿರುವ ಮಹಾ ನಾಯಕ ಎಂದರೆ ಡಿಕೆ ಶಿವಕುಮಾರ್ ಅವರೇನಾ? ಎಂಬ ಪ್ರಶ್ನೆ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ಆರಂಭವಾಗಿದೆ. ಒಟ್ಟಾರೆ, ವಿಡಿಯೋ ಬಂದಾಗ ರಮೇಶ್ ಅವರು ಇದು ನಕಲಿ ಎಂದಿದ್ದರು. ಈಗ ಯುವತಿ ಕೂಡಾ ಈ ವಿಡಿಯೋ ನಕಲಿ ಎಂದಿದ್ದಾರೆ. ಹಾಗಿದ್ದರೆ, ಅಸಲಿ ವಿಡಿಯೋ ಯಾವುದು ಎಂಬುದನ್ನು ಎಸ್ಐಟಿ ತನಿಖೆ ನಡೆಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+