Get Updates
Get notified of breaking news, exclusive insights, and must-see stories!

CBSE Class 10th Result 2024: ಟ್ವಿಟರ್‌ನಲ್ಲಿ ಮಗನ 100/100 ಫಲಿತಾಂಶದ ಸಿಹಿಸುದ್ದಿ ಹಂಚಿಕೊಂಡ ವೈದ್ಯ-ಭಾರೀ ವೈರಲ್‌

CBSE Class 10th Result 2024: CBSE 10ನೇ ತರಗತಿಯ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ ಕೂಡಲೇ, ಬೆಂಗಳೂರಿನ ಹೃದ್ರೋಗ ತಜ್ಞರೊಬ್ಬರು ತಮ್ಮ ಮಗ ಗಣಿತದಲ್ಲಿ 100 ಅಂಕಗಳನ್ನು ಗಳಿಸಿದ ಸಂತೋಷದ ಸುದ್ದಿಯನ್ನು ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೀಗ ಈ ಪೋಸ್ಟರ್‌ ಭಾರೀ ವೈರಲ್‌ ಆಗುತ್ತಿದೆ. ಹಾಗಾದರೆ ಇದಕ್ಕೆ ಏನೆಲ್ಲ ಪ್ರತಿಕ್ರಿಯೆಗಳು ಬಂದಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಡಾ.ದೀಪಕ್ ಕೃಷ್ಣಮೂರ್ತಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ, "ಟೈಗರ್ ನೆಸ್ಟ್ ಮಠಕ್ಕೆ ಚಾರಣಕ್ಕೆ ಹೋಗಿ ಬಂದ ನಂತರ ಮಗ ನಮಗೆ ಕಾಫಿ ಮಾಡುತ್ತಾನೆ. ಅಲ್ಲದೆ ಅವನು CBSE 10ನೇ ತರಗತಿ ಪರೀಕ್ಷೆಯಲ್ಲಿ ಗಣಿತದ ವಿಷಯದಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿದ್ದಾನೆ. ಒಟ್ಟು ಎಲ್ಲಾ ವಿಷಯಗಳು ಸೇರಿಎ 96.6% ಗಳಿಸಿದ್ದಾರೆ ಎಂದು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ನಾವು ಟೈಗರ್ ನೆಸ್ಟ್ ದೇವಸ್ಥಾನದಿಂದ ಹೊರಬಂದ ನಂತರ ಈ ಫಲಿತಾಂಶವನ್ನು ನೋಡಿದೆವೆ," ಎಂದು ಬರೆದುಕೊಂಡಿದ್ದಾರೆ.

CBSE Class 10th Result 2024 Bengaluru s Cardiologist shares son s 100 result post on Twitter viral

ಇನ್ನು ಈ ಪೋಸ್ಟರ್‌ನಲ್ಲಿ ಒಂದು ಸುಂದರ ಕೋಣೆಯ ಮೂಲೆಯಲ್ಲಿ ನಿಂತು ಚಹಾ ತಯಾರಿಸುವಲ್ಲಿ ನಿರತರಾಗಿರುವ ಮಗನ ಚಿತ್ರವನ್ನು ಸಹ ಅವರು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಅನ್ನು ಒಂದು ದಿನದ ಹಿಂದೆ ಹಂಚಿಕೊಳ್ಳಲಾಗಿದ್ದು, ಅಂದಿನಿಂದ, ಈವರೆಗೂ ಇದಕ್ಕೆ 3,000ಕ್ಲೂ ಹೆಚ್ಚು ಲೈಕ್ಸ್‌, 42 ಬುಕ್‌ ಮಾರ್ಕ್‌, 70,000ಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಈ ಮೂಲಕ ಈ ಪೋಸ್ಟ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಷ್ಟೇ ಅಲ್ಲದೆ ಇದಕ್ಕೆ ಏನೆಲ್ಲ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಇಲ್ಲಿ ಗಮನಿಸಿ.

* "ಅಭಿನಂದನೆಗಳು, ವೈದ್ಯಕೀಯ ಅಥವಾ ಇಂಜಿನಿಯರಿಂಗ್ ಮಾಡಿಸುತ್ತೀರಾ ಎಂದು ಬಳಕೆದಾರು ಪ್ರಶ್ನಿಸಿದ್ದಾರೆ". ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ತಂದೆ ತನ್ನ ಮಗ ವೈದ್ಯಕೀಯ ಕೋರ್ಸ್‌ ಅನ್ನುವ ಮುಂದುವರೆಸುತ್ತಾನೆ ಎಂದು ಉತ್ತರಿಸಿದ್ದಾರೆ.

* ಮತ್ತೊಬ್ಬರು "ಅಭಿನಂದನೆಗಳು, ಈ ಕ್ರೆಡಿಟ್‌ ತಾಯಿ ಅಥವಾ ತಂದೆಗೆ ಸಲ್ಲುತ್ತದೆಯಾ?" ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ತಂದೆ "ವಿದ್ಯಾರ್ಥಿಗೆ ಸೇರುತ್ತದೆ," ಎಂದು ಹೇಳಿದ್ದಾರೆ.

* "ಅತ್ಯುತ್ತಮ. ನಿಮ್ಮ ಮಗನಿಗೆ ಅಭಿನಂದನೆಗಳು. ಇದೇ ರೀತಿಯಾಗಿ ಯಶಸ್ವಿಯಾಗಿ ಮುಂದುವರೆಯಿರಿ," ಎಂದು ಕಾಮೆಂಟ್‌ ಮಾಡಿದ್ದಾರೆ.

ಇತ್ತೀಚೆಗೆ ಪ್ರಕಟವಾದ CBSE 10ನೇ ತರಗತಿ ಪರೀಕ್ಷೆಯ ಫಲಿತಾಂಶದಲ್ಲಿ, 11,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಣಿತದಲ್ಲಿ ಪರಿಪೂರ್ಣ 100 ಅಂಕಗಳನ್ನು ಗಳಿಸಿದ್ದಾರೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ಮತ್ತು 12ನೇ ತರಗತಿಗಳ ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ಮೇ 13ರಂದು ಪ್ರಕಟಿಸಲಾಯಿತು. ಮಂಡಳಿಯು ಟಾಪರ್‌ಗಳ ಮೆರಿಟ್ ಪಟ್ಟಿಯನ್ನು ತಡೆಹಿಡಿದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+