Cancer from Idli: ಇಡ್ಲಿ ಪ್ರಿಯರಿಗೆ ಶಾಕಿಂಗ್ ಸುದ್ದಿ: ಇಡ್ಲಿಯಿಂದ ಬರುತ್ತೆ ಕ್ಯಾನ್ಸರ್!
ಬೆಂಗಳೂರು ಫೆಬ್ರವರಿ 27: ಇಡ್ಲಿ ಪ್ರಿಯರಿಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಇಡ್ಲಿ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆ ಎಂದು ಆಹಾರ ಮತ್ತು ಗುಣಮಟ್ಟ ಇಲಾಖೆ ನಡೆಸಿದ ಪರೀಕ್ಷೆಯಿಂದ ತಿಳಿದು ಬಂದಿದೆ. ಇಡ್ಲಿ ಗುಣಮಟ್ಟ ಪರೀಕ್ಷೆಯಲ್ಲಿ ಈ ವಿಚಾರ ಬಹಿರಂಗಗೊಂಡಿದ್ದು ಇಡ್ಲಿ ಪ್ರಿಯರು ಶಾಕ್ ಆಗಿದ್ದಾರೆ.
ಹೌದು.... ದಕ್ಷಿಣ ಭಾರತದ ಪ್ರಸಿದ್ಧ ಖಾದ್ಯ ಇಡ್ಲಿ. ಇದನ್ನೀಗ ಎಲ್ಲೆಡೆ ತಯಾರಿಸಲಾಗುತ್ತದೆ. ಬಹುತೇಕ ಜನ ಬೆಳಗಿನ ತಿಂಡಿಗೆ ಇಂಡ್ಲಿಯನ್ನೇ ತಿನ್ನುತ್ತಾರೆ. ಆದರೆ ಈ ಇಡ್ಲಿಯಿಂದ ಕ್ಯಾನ್ಸರ್ ಬರುತ್ತದೆ ಎಂದು ಆಹಾರ ಇಲಾಖೆ ಹೇಳಿದೆ. ಹಾಗಾದರೆ ಆಹಾರ ಇಲಾಖೆ ನಡೆಸಿದ ಪರೀಕ್ಷಾ ವರದಿಯಲ್ಲಿ ಏನಿದೆ?

ಇಡ್ಲಿಯಿಂದ ಬರುತ್ತೆ ಕ್ಯಾನ್ಸರ್!
ಇತ್ತೀಚೆಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹಾಗೂ ಆಹಾರ ಇಲಾಖೆ ಜಂಟಿಯಾಗಿ ಬೆಂಗಳೂರಿನ ವಿವಿದೆಡೆ ಆಹಾರ ಮಳಿಗೆಗಳ ಮೇಲೆ ದಾಳಿ ನಡೆಸಿತು. 15 ದಿನಗಳ ಕಾಲ ದಾಳಿ ಮಾಡಿ 500 ಇಡ್ಲಿ ಸ್ಯಾಂಪಲ್ಸ್ ಸಂಗ್ರಹಿಸಲಾಗಿತ್ತು. ಇದರಲ್ಲಿ 35ಕ್ಕೂ ಹೆಚ್ಚು ಇಡ್ಲಿ ಡೇಂಜರ್ ಎಂದು ವರದಿ ಬಂದಿದೆ. ಅಲ್ಲದೆ ಈ ಇಡ್ಲಿ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇಡ್ಲಿ ಹೇಗೆ ಕ್ಯಾನ್ಸರ್‌ಗೆ ಕಾರಣ?
ಇಡ್ಲಿ ತಯಾರಿಸಲು ತಯಾರಕರು ಪ್ಲ್ಯಾಸ್ಟಿಕ್ ಹಾಗೂ ಬಟ್ಟೆಗಳನ್ನು ಬಳಸುತ್ತಾರೆ. ಇದರ ಬಳಕೆಯಿಂದಾಗಿ ಇಡ್ಲಿಯಲ್ಲಿ ಕ್ಯಾನ್ಸರ್ ಅಂಶ ಸೇರಿಕೊಳ್ಳುತ್ತದೆ ಎಂದು ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಇದರಿಂದಾಗಿ ಹಲವೆಡೆ ತಯಾರಾಗುವ ಇಡ್ಲಿಗಳಲ್ಲಿ ಕ್ಯಾನ್ಸರ್ ಹರಡುವ ಅಂಶ ಪತ್ತೆಯಾಗಿದೆ. ಇದು ಸೇವನೆಗೆ ಯೋಗ್ಯವಲ್ಲ, ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವುದು ಮಾತ್ರವಲ್ಲದೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ವರದಿಯಿಂದ ತಿಳಿದು ಬಂದಿದೆ.

ಬೆಂಗಳೂರಿನ ಐದು ಕಡೆ ಈ ಇಡ್ಲಿ ಸ್ಯಾಂಪಲ್ಸ್ ಅನ್ನು ತೆಗೆದುಕೊಳ್ಳಲಾಗಿತ್ತು. ಪರೀಕ್ಷೆಯ ಬಳಿಕ ಇದೀಗ ಈ ಇಡ್ಲಿ ಸೇವನೆಗೆ ಯೋಗ್ಯವಲ್ಲವೆಂದು ಪರೀಕ್ಷಾ ವರದಿ ಬಂದಿದೆ.
ಸಂಪೂರ್ಣ ವರದಿ ನಿರೀಕ್ಷೆ
500 ಇಡ್ಲಿ ಸ್ಯಾಂಪಲ್ಸ್ ನಲ್ಲಿ ಇನ್ನೂ 250ಕ್ಕೂ ಹೆಚ್ಚು ಇಡ್ಲಿಯ ವರದಿ ಬರಬೇಕಿದೆ. ಹೀಗಾಗಿ ಸಂಪೂರ್ಣ ವರದಿ ಬಂದ ಬಳಿಕ ಈ ವರದಿಯನ್ನು ಸರ್ಕಾರಕ್ಕೆ ಆಹಾರ ಇಲಾಖೆಯ ಅಧಿಕಾರಿಗಳು ನೀಡಲಿದ್ದಾರೆ. ಆಗ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮಗಳೊಂದಿಗೆ ಜನರಿಗೆ ಎಚ್ಚರಿಕೆ ನೀಡಲಿದೆ. ಹೀಗಾಗಿ ಸಂಪೂರ್ಣ ವರದಿಗಾಗಿ ಆಹಾರ ಇಲಾಖೆ ಕಾಯುತ್ತಿದೆ.
ಎಲ್ಲಾ ಇಡ್ಲಿಯಿಂದಲೂ ಕ್ಯಾನ್ಸರ್ ಬರುತ್ತಾ?
ಹಾಗಾದರೆ ಎಲ್ಲಾ ಇಡ್ಲಿ ಸೇವನೆಯಿಂದಲೂ ಕ್ಯಾನ್ಸರ್ ಬರುತ್ತಾ? ಈ ಪ್ರಶ್ನೆಗೆ ಉತ್ತರ ಇಲ್ಲ. ಮನೆಯಲ್ಲಿ ಶುಚಿಯಾಗಿ ಇಡ್ಲಿ ತಯಾರಿಸುವುದರಿಂದ ಯಾವುದೇ ರೀತಿಯಿಂದಲೂ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ. ಆದರೆ ಬೀದಿ ಬದಿ, ಫುಡ್ ಸ್ಟ್ರೀಟ್ ಹಾಗೂ ಹೋಟೆಲ್‌ಗಳಲ್ಲಿ ಇಡ್ಲಿ ತಯಾರಿಸಲು ಬಳಸುವ ಪೇಪರ್ ಹಾಗೂ ಬಟ್ಟೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಅತೀ ಹೆಚ್ಚು ಕ್ಯಾನ್ಸರ್ ರೋಗಿಗಳು ಇದ್ದಾರೆ. ಇದಕ್ಕೆ ಹಲವಾರು ಕಾರಣಗಳು ಇವೆ. ಇದರಲ್ಲಿ ಇದೂ ಕೂಡ ಒಂದು ಕಾರಣ ಆಗಿರಬಹುದು. ಇತ್ತೀಚೆಗೆ ಕಬಾಬ್, ಗೋಬಿ, ಪಾನಿಪೂರಿ ಗುಣಮಟ್ಟವನ್ನು ಪರಿಶೀಲನೆ ಮಾಡಿ ಆಹಾರ ಮತ್ತು ಗುಣಮಟ್ಟ ಇಲಾಖೆ ಕಲಬೆರಕೆ ಮಾಡಲಾಗಿದೆ ಎಂದು ವರದಿ ನೀಡಿತ್ತು. ಇದೀಗ ಇಡ್ಲಿ ಸರದಿ ಬಂದಿದೆ. ಕೆಲ ಕಡೆ ಇಡ್ಲಿ ತಯಾರಕರು ಬಟ್ಟೆ ಹಾಗೂ ಪೇಪರ್ ಬಳಕೆ ಮಾಡಿ ಇಡ್ಲಿ ತಯಾರಿಸುತ್ತಿರುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹೀಗಾಗಿ ಈ ಬಗ್ಗೆ ಜಾಗರೂಕತೆ ಮೂಡಿಸಲು ಎಲ್ಲಾ ವರದಿ ಬರಲು ಇಲಾಖೆಯ ಅಧಿಕಾರಿಗಳು ಕಾಯುತ್ತಿದ್ದಾರೆ.
ಇನ್ಮುಂದೆ ಇಡ್ಲಿ ಮಾಡುವಾಗ ಪ್ಲಾಸ್ಟಿಕ್ ಬಳಕೆ ನಿಷೇಧ- ಆರೋಗ್ಯ ಇಲಾಖೆ ಆದೇಶ
ಈ ಸುದ್ದಿ ವೈರಲ್ ಆದ ಬಳಿಕ ಆರೋಗ್ಯ ಇಲಾಖೆ ಇನ್ಮುಂದೆ ಇಡ್ಲಿ ತಯಾರಿಸುವಾಗ ಪ್ಲಾಸ್ಟಿಕ್ ಹಾಗೂ ಬಟ್ಟೆಗಳನ್ನು ಬಳಸದಂತೆ ನಿಷೇಧ ಹೇರಿದೆ.
ಇನ್ನೂ ಈ ಬಗ್ಗೆ ಮಾತನಾಡಿದ ಆಹಾರ ತಜ್ಞೆ ಡಾ ಕೀರ್ತಿ, 'ಪ್ಲಾಸ್ಟಿಕ್ ನ ಕೆಮಿಕಲ್ ಇಡ್ಲಿಗೆ ತಾಗಿ ಅದರಿಂದ ಆರೋಗ್ಯ ಹಾಳಾಗುತ್ತದೆ. ಅಲ್ಲದೆ ಇಡ್ಲಿ ಪ್ಯಾಕ್ ಮಾಡುವಾಗ ಪ್ಲಾಸ್ಟಿಕ್ ಬಳಕೆ ಮಾಡಿದರೆ ಬಿಸಿಯಾದ ಇಡ್ಲಿಗೆ ಪ್ಲಾಸ್ಟಿಕ್ ಪೇಪರ್ ನಲ್ಲಿರುವ ಕೆಮಿಕಲ್ ಅಂಟಿ ಅದು ವಿಷಕಾರಿಯಾಗುತ್ತದೆ. ಇದರಿಂದ ಇಂತಹ ಇಡ್ಲಿ ಸೇವನೆಯಿಂದ ಕ್ಯಾನ್ಸರ್ ಮಾತ್ರವಲ್ಲದೆ ಹೃದಯ ಸಂಬಂಧಿ ಕಾಯಿಲೆ, ಬಂಜೇತನದಂತಹ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಹೀಗಾಗಿ ಮನೆಯಲ್ಲಿ ಅಥವಾ ಹೋಟೆಲ್‌ಗಳಲ್ಲಿ ಶುಚಿಯಾಗಿ ತಯಾರಿಸುವ ಇಡ್ಲಿ ಆರೋಗ್ಯಕರಕ. ಆದರೆ ಪ್ಯಾಕ್ ಮಾಡುವಾಗ ಅಥವಾ ಅದನ್ನು ತಯಾರಿಸುವಾಗ ಪ್ಲಾಸ್ಟಿಕ್ ಬಳಕೆ ಮಾಡಿದರೆ ಅದು ಆರೋಗ್ಯಕ್ಕೆ ಹಾನಿಕಾರಕ' ಎಂದಿದ್ದಾರೆ.












Click it and Unblock the Notifications