ನಮ್ಮ ಪೊಲೀಸರು ಬಳಸುವ ವೈರ್‌ಲೆಸ್‌ ಔಟ್‌ ಡೇಟೆಡ್‌ ಎಂದ ಸಿಎಜಿಐ

ಬೆಂಗಳೂರು, ಜು.7: ಪೊಲೀಸರು ಬಳಸುವ ವೈರ್‌ಲೆಸ್‌ ಔಟ್‌ ಡೇಟೆಡ್‌ ಎಂದು ಸಿಎಜಿಐ ವರದಿ ಮೂಲಕ ತಿಳಿದುಬಂದಿದೆ.

ಪೊಲೀಸ್‌ ಬಲವನ್ನು ಆಧುನೀಕರಿಸಲು ಕೇಂದ್ರ ಸರ್ಕಾರ ಎಂಪಿಎಫ್‌ ಯೋಜನೆಯ ಸಮರ್ಪಕ ಬಳಕೆಯಲ್ಲಿ ರಾಜ್ಯ ಹಿಂದುಳಿದಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಪೊಲೀಸ್‌ ಇಲಾಖೆಯಲ್ಲಿ ಅವಧಿ ಮೀರಿದ ಸಂವಹನ ಸೆಟ್‌ಗಳನ್ನೇ ಬಳಕೆ ಮಾಡುತ್ತಿರುವ ಬಗ್ಗೆ ಆಕ್ಷೇಪಿಸಿದೆ.

ಇಲಾಖೆಯ ವೈರ್‌ಲೆಸ್‌ ಸೆಟ್‌ಗಳು ಅನಲಾಗ್‌ ಸೆಟ್‌ಗಳಾಗಿದ್ದು, ಅವಧಿ ಮೀರಿ ಬಹಳ ವರ್ಷ ಕಳೆದಿದೆ. ಆದರೂ, ವೈರ್‌ಲೆಸ್‌ ಆಪರೇಟಿಂಗ್‌ ಪರವಾನಗಿ ಪಡೆಯುವಲ್ಲಿ ವಿಳಂಬವಾದ ಕಾರಣ ಸಾಧ್ಯವಾಗಿಲ್ಲ ಮತ್ತು ಇದರಿಂದ ಕೇಂದ್ರದ ಸುಮಾರು 10 ಕೋಟಿ ರೂ, ಅನುದಾನ ಬಳಕೆಯಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

CAG questions outdated wireless usage by state police

ಜತೆಗೆ ಪೊಲೀಸ್‌ ಇಲಾಖೆಯ ಹೊಸ ವಾಹನಗಳ ಖರೀದಿ ಮಾಡಲಾಗಿದೆಯಾದರೂ ನಾಶಪಡಿಸಬೇಕಿದ್ದ ಹಳೆಯ ಮತ್ತು ನಿಷ್ಕ್ರಿಯ ವಾಹನಗಳ ಸಂಖ್ಯೆಗಿಂತ ಕಡಿಮೆ ಖರೀದಿ ಮಾಡಲಾಗಿದೆ. ಹೀಗಾಗಿ ಇಲಾಖೆಯಲ್ಲಿ ವಾಹನಗಳ ಸಂಖ್ಯೆಯಲ್ಲಿ ಸುಧಾರಣೆಯಾಗಿಲ್ಲ. ಕೇಂದ್ರದ ಎಂಪಿಎಫ್‌ ಯೋಜನೆಯಲ್ಲಿ ಶಸ್ತ್ರಗಳ ಖರೀದಿ ನಡೆದಿದ್ದರೂ ಅವು ಬ್ಯೂರೋ ಆಫ್‌ ಪೊಲೀಸ್‌ ರೀಸರ್ಚ್ ಅಂಡ್‌ ಡೆವಲಪ್‌ಮೆಂಟ್‌ ಮಾಪಕಗಳಿಗೆ ಅನುಗುಣವಾಗಿಲ್ಲ.

ಕೆಲವು ಪೊಲೀಸ್‌ ಠಾಣೆಗಳಲ್ಲಿ ಬ್ಯಾರಕ್‌ ಶೌಚಾಲಯ, ಸಾಕ್ಷಿ ಪರೀಕ್ಷಾ ಕೊಠಡಿ ಮತ್ತಿತರೆ = ಭೌತಿಕ ಮೂಲಸೌಕರ್ಯ ಸಾಕಷ್ಟಿಲ್ಲ. ಎಂಪಿಎಫ್‌ ಹಣವನ್ನು ಪೀಠೋಪಕರಣ ಖರೀದಿ, ವಾರ್ಷಿಕ ನಿರ್ವಹಣೆ ವೆಚ್ಚಗಳಿಗೆ ಬಳಕೆ ಮಾಡಿಕೊಂಡಿರುವುದನ್ನು ವರದಿಯಲ್ಲಿ ಆಕ್ಷೇಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+