ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ವಿವಿಧ ಜಿಲ್ಲೆಗಳ ಸಂಕ್ಷಿಪ್ತ ಸುದ್ದಿಗುಚ್ಛ

By Vanitha
|
Google Oneindia Kannada News

ಮೈಸೂರು : ಜಗದ್ವಿಖ್ಯಾತ ನಾಡಹಬ್ಬ ದಸರಾಕ್ಕೆ ಅಕ್ಟೋಬರ್ 13ರ ಮಂಗಳವಾರದಿಂದ ಚಾಲನೆ ದೊರೆತಿದೆ. ಪ್ರಗತಿಪರ ರೈತ ಪುಟ್ಟಯ್ಯ ಅವರು ದಸರಾಕ್ಕೆ ಚಾಲನೆ ನೀಡಿದ್ದಾರೆ. ಇಂದಿನಿಂದ ಅಕ್ಟೋಬರ್ 23ರವರೆಗೆ ವಿಭಿನ್ನ ಕಾರ್ಯಕ್ರಮಗಳು ಜರುಗಲಿದೆ. ಇದರಲ್ಲಿ ಸಾವಿರಾರು ಮಂದಿ ಭಾಗವಹಿಸಿ ಶ್ರೀ ಚಾಮುಂಡೇಶ್ವರಿ ದೇವಿಯ ಕೃಪೆಗೆ ಪಾತ್ರರಾಗಲಿದ್ದಾರೆ.

ಬೆಂಗಳೂರು : ಅನ್ನಭಾಗ್ಯ, ಕ್ಷೀರಭಾಗ್ಯದಂತಹ ವಿಭಿನ್ನ ಯೋಜನೆಗಳನ್ನು ರೂಪಿಸಿದ ರಾಜ್ಯ ಸರ್ಕಾರ ಇದೀಗ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಶೂ ಭಾಗ್ಯ ಯೋಜನೆ ಜಾರಿ ಮಾಡಲಾಗುವುದು. ಯೋಜನೆಗಾಗಿ ಹಣಕಾಸು ಇಲಾಖೆ 122ಕೋಟಿ ರೂ ಹಣ ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ.

ಧಾರವಾಡ : ಸಾಲದ ಶೂಲಕ್ಕೆ ಸಿಲುಕಿದ ಶಿವಾನಂದ ಉಳಗೇರಿ(30) ಎಂಬ ರೈತ ಧಾರವಾಡ ತಲೂಕಿನ ಅಮ್ಮಿನಭಾವಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಒಂದುವರೆ ಲಕ್ಷ ಸಾಲ ಮಾಡಿದ್ದ. ಧಾರವಾಡ ಗ್ರಾಮೀನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ಮೈಸೂರು ದಸರಾ ಉದ್ಘಾಟಿಸಿದ ರೈತ ಪುಟ್ಟಯ್ಯ]

ದೊಡ್ಡಬಳ್ಳಾಪುರ : ಇಬ್ಬರು ಗೆಳೆಯರು ಒಂದೇ ದಿನ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಸಿದ್ದನಾಯಕನ ಹಳ್ಳಿಯಲ್ಲಿ ನಡೆದಿದೆ. ಕೌಟುಂಬಿಕ ಕಲಹದಿಂದ ಬೇಸತ್ತ ಗುರುನಾಥ್ (28), ಭಾನುವಾರ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆತ್ಮೀಯ ಸ್ನೇಹಿತನಿಂದ ಮನನೊಂದ ಸ್ನೇಹಿತ ರಾಮಾಂಜಿ (28) ಆತ ಮೃತಪಟ್ಟ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇವರಿಬ್ಬರು ಆರು ತಿಂಗಳಷ್ಟೇ ಮದುವೆಯಾಗಿದ್ದರು.

Brief news of many district in Karnataka on Tuesday, October 13

ಕೋಲಾರ : ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಅಕ್ಟೋಬರ್ 16ರ ಶುಕ್ರವಾರದಿಂದ 20ರ ಭಾನುವಾರದವರೆಗೆ ಶ್ರೀನಿವಾಸಪುರ, ಕೋಲಾರ ಹಾಗೂ ಬಂಗಾರಪೇಟೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಈ ಸಮ್ಮೇಳನವನ್ನು ಬರಪೀಡಿತ ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಯೋಜನೆ ರೂಪುಗೊಳ್ಳಲಿ ಎಂಬ ನಿಲುವಿನೊಂದಿಗೆ ಈ ಸಮ್ಮೇಳನ ಆಯೋಜಿಸಲಾಗುತ್ತಿದೆ

ಧಾರವಾಡ : ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಅಭಿವೃದ್ಧಿ ಪರಿಕಲ್ಪನೆ ಹೇಗಿರಬೇಕೆಂದು ಉತ್ತರ ಸಂಗ್ರಹಿಸಲು ನಗರ ಪಾಲಿಕೆ ಮುಂದಾಗಿದ್ದು, ಮಂಗಳವಾರ 12 ಕಾಲೇಜುಗಳಿಗೆ ಭೇಟಿ ನೀಡಿ 7000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಉತ್ತರ ಪಡೆದುಕೊಂಡಿದ್ದಾರೆ. ನಗರ ಪಾಲಿಕೆ ಕೇಳಿದ ಪ್ರಶ್ನೆಗೆ ಹೆಚ್ಚಿನ ವಿದ್ಯಾರ್ಥಿಗಳು ಅತ್ಯುತ್ತಮ ಸಂಚಾರ ವ್ಯವಸ್ಥೆ ಹಾಗೂ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಇದೇರೀತಿ ಆನ್ ಲೈನ್ ಮೂಲಕವೂ ಉತ್ತರ ಪಡೆಯುವ ಯೋಜನೆ ಹಾಕಿಕೊಂಡಿದೆ.[ಸ್ಮಾರ್ಟ್ ಸಿಟಿಯಾಗಲಿರುವ 98 ನಗರಗಳ ಪಟ್ಟಿ]

ಬೆಂಗಳೂರು : ಸರಗಳನ್ನು ಅಪಹರಿಸಿ ಕೋಟ್ಯಾಂತರ ರೂ ಹಣವನ್ನು ಸಂಗ್ರಹಿಸುತ್ತಿದ್ದ ಮೂವರು ಸರಗಳರನ್ನು ಬೆಂಗಳೂರು ಪೊಲೀಸರು ಮಂಗಳವಾರ ಬಂಧಿಸಿದ್ದು, ಅವರಿಂದ 70ಲಕ್ಷ ಮೌಲ್ಯದ 2.5 ಕೆ.ಜಿ ಬಂಗಾರ ವಶಪಡಿಸಿಕೊಂಡಿದ್ದಾರೆ. ಬಂಧಿತರಲ್ಲಿ ಇಬ್ಬರು ಇರಾನಿ ಗ್ಯಾಂಗ್ ನವರು ಒಬ್ಬ ಸ್ಥಳೀಯ ವ್ಯಕ್ತಿ ಎಂದು ತಿಳಿದು ಬಂದಿದೆ.

ಚಿತ್ರದುರ್ಗ : ನಗರದ ಏಳು ಸುತ್ತಿನ ಕೋಟೆ ಮೇಲಿನ ಗೋಪಾಲ ಸ್ವಾಮಿ ಹೊಂಡದ ಪೂರ್ವ ಭಾಗದ ಬಂಡೆ ಮೇಲೆ ಪುರಾತನ ಶಿಲಾಶಾಸನ ಸೋಮವಾರ ಪತ್ತೆಯಾಗಿದೆ. ಇದು ಕ್ರಿ. ಶ 13ನೇ ಶತಮಾನದ ಅಂತ್ಯದಲ್ಲಿ ಹೊಯ್ಸಳ ದೊರೆ 3ನೇ ವೀರನರಸಿಂಹದೇವನ ಅಧೀನನಾಗಿ ಚಿತ್ರದುರ್ಗವನ್ನು ಆಳಿದ ಪೆರುಮಾಳೆದೇವ ದಣ್ಣಾಯಕ 'ಪೆರುಮಾಳೆಪುರ' ಎಂಬ ಬ್ರಾಹ್ಮಣರ ಕೇರಿಯನ್ನು ನಿರ್ಮಿಸಿದ್ದ ಎಂದು ಈ ಶಿಲಾಶಾಸನ ಹೇಳುತ್ತದೆ.

English summary
October 13 : Brief news of many district, Karnataka on Tuesday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X