ವಿಧಾನ ಪರಿಷತ್ ಚುನಾವಣೆ : ಸ್ಪರ್ಧೆಯಿಂದ ಹಿಂದೆ ಸರಿದ ಬಿಜೆಪಿ

Recommended Video

      ವಿಧಾನ ಪರಿಷತ್ ಚುನಾವಣೆ : ಸ್ಪರ್ಧೆಯಿಂದ ಹಿಂದೆ ಸರಿದ ಬಿಜೆಪಿ | Oneindia Kannada

      ಬೆಂಗಳೂರು, ಸೆಪ್ಟೆಂಬರ್ 24 : ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸದಿರಲು ಕರ್ನಾಟಕ ಬಿಜೆಪಿ ನಿರ್ಧರಿಸಿದೆ. ಮೂರು ವಿಧಾನ ಪರಿಷತ್ ಸ್ಥಾನಗಳನ್ನು ಭರ್ತಿ ಮಾಡಲು ಆಕ್ಟೋಬರ್ 3ರಂದು ಚುನಾವಣೆ ನಡೆಯಲಿದೆ.

      ವಿಧಾನಸಭೆಯಿಂದ ಮೂವರು ವಿಧಾನ ಪರಿಷತ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಚುನಾವಣೆ ನಿಗದಿಯಾಗಿದೆ. ಮತಗಳ ಕೊರತೆ ಹಿನ್ನಲೆಯಲ್ಲಿ ಬಿಜೆಪಿ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿಲ್ಲ. ನಾಮಪತ್ರ ಸಲ್ಲಿಕೆ ಮಾಡಲು ಸೋಮವಾರ ಕೊನೆಯ ದಿನ. ಅಭ್ಯರ್ಥಿ ಗೆಲುವಿಗೆ 112 ಮತಗಳು ಬೇಕಾಗಿತ್ತು.

      BJP will not contest for Legislative Council elections

      ವಿಧಾನ ಪರಿಷತ್ತಿನ ಮೂರು ಸ್ಥಾನಗಳ ಪೈಕಿ ಕಾಂಗ್ರೆಸ್‌ 2, ಜೆಡಿಎಸ್ 1 ಸ್ಥಾನವನ್ನು ಹಂಚಿಕೊಂಡಿವೆ. ಚುನಾವಣೆಗೆ ಕಾಂಗ್ರೆಸ್ ಎಂ.ಸಿ.ವೇಣುಗೋಪಾಲ್ ಮತ್ತು ನಜೀರ್ ಅಹಮದ್ ಅವರನ್ನು ಅಭ್ಯರ್ಥಿಗಳಾಗಿ ಘೋಷಣೆ ಮಾಡಿದೆ. ಜೆಡಿಎಸ್‌ನಿಂದ ರಮೇಶ್ ಗೌಡ ಅಭ್ಯರ್ಥಿ.

      ಮೂರು ಸ್ಥಾನಗಳು ಖಾಲಿ : ಶಿವಮೊಗ್ಗ ನಗರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಬಿಜೆಪಿಯ ಕೆ.ಎಸ್.ಈಶ್ವರಪ್ಪ ಅವರು ಗೆಲುವು ಸಾಧಿಸಿದ್ದಾರೆ. ಆದ್ದರಿಂದ, ಒಂದು ಸ್ಥಾನ ತೆರವಾಗಿದೆ. ಅವಧಿ 2020ರ ಜೂನ್ 30ರ ತನಕ ಇದೆ.

      ಗೋವಿಂದರಾಜನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಬಿಜೆಪಿಯ ವಿ.ಸೋಮಣ್ಣ ಗೆಲುವು ಸಾಧಿಸಿದ್ದು, ಸ್ಥಾನ ತೆರವಾಗಿದೆ. ಸದಸ್ಯರ ಅವಧಿ 2022ರ ಜೂನ್ 14ರ ತನಕ ಇದೆ.

      ಕಾಂಗ್ರೆಸ್‌ನ ಡಾ.ಜಿ.ಪರಮೇಶ್ವರ ಅವರು ಕೊರಟಗೆರೆ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದು, ಸ್ಥಾನ ತೆರವಾಗಿದೆ. ಸದಸ್ಯರ ಅವಧಿ 2020ರ ಜೂನ್ 30ರ ತನಕ ಇದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+