ಬಿಜೆಪಿಯ ಚುನಾವಣಾ ಗೀತೆ ಬಿಡುಗಡೆ; ವಿಡಿಯೋ ಹಂಚಿಕೊಂಡ ನಿರ್ಮಲ್ ಕುಮಾರ್ ಸುರಾನ
ಸುಮಾರು 2.08 ನಿಮಿಷ ಇರುವ ಬಿಜೆಪಿಯ ಚುನಾವಣಾ ಗೀತೆ ಮೊದಲಿಗೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಜನತೆಗೆ ಕೋಟಿ ಕೋಟಿ ನಮಸ್ಕಾರಗಳು ಎಂದು ಹೇಳಿಕೆಯಿಂದ ಆರಂಭವಾಗುತ್ತದೆ.
ಬೆಂಗಳೂರು, ಮಾರ್ಚ್ 06: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಭರ್ಜರಿಯಾಗಿ ಸಿದ್ಧವಾಗುತ್ತಿರುವ ಬಿಜೆಪಿ. ವಿಜಯ ಸಂಕಲ್ಪ ಯಾತ್ರೆ ಮೂಲಕ ಭಾರಿ ಪ್ರಚಾರದಲ್ಲಿ ತೊಡಗಿರುವ ಬಿಜಪಿ ಇದಕ್ಕೆ ಪೂರಕವಾಗಿ ಚುನಾವಣಾ ಗೀತೆಯನ್ನು ಬಿಡುಗಡೆ ಮಾಡಿದೆ. ಈ ಗೀತೆಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಹಂಚಿಕೊಂಡಿದ್ದಾರೆ.
ಕಣ ಕಣದಲ್ಲೂ ಮೊಳಗಲಿದೆ ಬಿಜೆಪಿ#BJPYeBharavase pic.twitter.com/cHIxx33kr9
— Nirmal Kumar Surana (@BlrNirmal) March 6, 2023
ಬಿಜೆಪಿಯ ಚುನಾವಣಾ ಗೀತೆಯನ್ನು ಹಂಚಿಕೊಂಡಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ಇದಕ್ಕೆ ಕಣ ಕಣದಲ್ಲೂ ಮೊಳಗಲಿದೆ ಬಿಜೆಪಿ ಎಂಬ ಶೀರ್ಷಿಕೆ ನೀಡಿದ್ದಾರೆ. ಈ ಹಾಡು ಸಾಮಾಜಿಕ ಮಾಧ್ಯಮಗಳಲ್ಲೂ ವೈರಲ್ ಆಗುತ್ತಿದ್ದು, ಹಲವು ಮಂದಿ ಬಿಜೆಪಿ ಕಾರ್ಯಕರ್ತರು ಹಾಡನ್ನು ಶ್ಲಾಘಿಸಿ, ಚುನಾವಣೆಗೆ ಬೆಂಬಲ ನೀಡಿದ್ದಾರೆ.

ಸುಮಾರು 2.08 ನಿಮಿಷ ಇರುವ ಬಿಜೆಪಿಯ ಚುನಾವಣಾ ಗೀತೆಯಲ್ಲಿ ಮೊದಲಿಗೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಜನತೆಗೆ ಕೋಟಿ ಕೋಟಿ ನಮಸ್ಕಾರಗಳು ಎಂದು ಹೇಳಿಕೆಯಿಂದ ಆರಂಭವಾಗುತ್ತದೆ. ಬಿಜೆಪಿ ಸರ್ಕಾರದ ಸಾಧನೆಗಳನ್ನು ಹೇಳುತ್ತಾ ಸಾಗುವ ಹಾಡಿನಲ್ಲಿ ಬಿಜೆಪಿ ಅನುಸರಿಸುತ್ತಿರುವ ನಾಯಕರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಗೋರಕ್ಷಣೆಗೆ, ಶಿಕ್ಷಣಕ್ಕೆ, ಅಭಿವೃದ್ಧಿಗೆ ಒತ್ತು ಎಂಬುದನ್ನು ತೋರಿಸಲಾಗಿದೆ. ಇದರ ಜೊತೆಗೆ ಕಾಂಗ್ರೆಸ್ ಪಕ್ಷ ಸುಳ್ಳಿನ ಮೇಲೆ ಜನರನ್ನು ಯಾಮಾರಿಸಿದೆ ಎಂಬುದನ್ನು ಸೇರಿಸಿದೆ.
ಒಟ್ಟಾರೆ ಚುನಾವಣಾ ಗೀತೆಯಲ್ಲಿ ತಮ್ಮ ಪಕ್ಷ ಜನರಿಗಾಗಿ ಮಾಡುವ ಕೆಲಸಗಳು, ತಮ್ಮ ಮಂತ್ರ ಯಾವುದು ಎಂಬುದನ್ನು ಬಿಜೆಪಿ ವಿವರಿಸಿದೆ. ಚುನಾವಣೆಗೆ ಇದೇ ಪಕ್ಷದ ಗೀತೆಯನ್ನಾಗಿಸಿದ್ದು, ಹಲವಾರು ಕಾರ್ಯಕರ್ತರು ಈಗಾಗಲೇ ಹಾಡನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಬಿಜೆಪಿಯೇ ಭರವಸೆ ಎಂದು ಹೇಳಿರುವ ಪಕ್ಷಕ್ಕೆ ಜನರು ಮನ್ನಣೆ ನೀಡುತ್ತಾರಾ...ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಿ ಹಿಡಿಯಲಿದೆಯಾ ಕಾದು ನೊಡಬೇಕಿದೆ.












Click it and Unblock the Notifications