ಆದಾಯ ತೆರಿಗೆ ದಾಳಿ: ಎಚ್‌ಡಿಕೆ ಹಳೆಯ ವಿಡಿಯೋ ಹಂಚಿಕೊಂಡ ಬಿಜೆಪಿ

ಬೆಂಗಳೂರು, ಮಾರ್ಚ್ 29: ಜೆಡಿಎಸ್ ನಾಯಕರ ಸಂಬಂಧಿಕರಿಗೆ ಸೇರಿದ ಆಸ್ತಪಾಸ್ತಿಗಳ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿಗೆ ಬಿಜೆಪಿ ನಾಯಕರೇ ಕಾರಣ ಎಂದು ಅರೋಪಿಸಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಅವರದೇ ಹಳೆಯ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.

ಕಳೆದ ಜನವರಿಯಲ್ಲಿ ಯಶ್, ಸುದೀಪ್, ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಅನೇಕ ನಟರು, ನಿರ್ಮಾಪಕ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆದಿತ್ತು. ಆಗ ಕುಮಾರಸ್ವಾಮಿ ಅವರು ಹೇಗೆ ಪ್ರತಿಕ್ರಿಯೆ ನೀಡಿದ್ದರು ಮತ್ತು ಗುರುವಾರ ನಡೆದ ದಾಳಿಗೆ ಯಾವ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ಎಂಬುದನ್ನು ಜೋಡಣೆ ಮಾಡಿ ವಿಡಿಯೋ ಹಂಚಿಕೊಂಡಿದೆ.

ಇದಕ್ಕೆ ಕಮಿಷನ್ ಕೊಡುವ ಗುತ್ತಿಗೆದಾರನ ಮೇಲಿನ ಪ್ರೇಮ ಬಯಲು! ಎಂದು ಶೀರ್ಷಿಕೆ ನೀಡಿದೆ. ಜತೆಗೆ ಜನ ನಿಮ್ಮನ್ನು ಕ್ಷಮಿಸುವುದಿಲ್ಲ ಎಂಬ ಹ್ಯಾಷ್‌ಟ್ಯಾಗ್ ಮಾಡಿದೆ.

ಜನವರಿಯಲ್ಲಿ ಸಿನಿಮಾ ನಟರ ಆಸ್ತಿಗಳ ಮೇಲಿನ ಆದಾಯ ತೆರಿಗೆ ದಾಳಿಗೆ ಕುಮಾರಸ್ವಾಮಿ ಅವರು, ಕೇಂದ್ರ ಸರ್ಕಾರದ ತೆರಿಗೆ ಇಲಾಖೆಯ ದಿನಚರಿ ಮಾಡಿದ್ದರು ಎಂದು ಪ್ರತಿಕ್ರಿಯಿಸಿದ್ದರು. ಇಲ್ಲಿ ಸಿನಿಮಾ ನಟರು ಬೇರೆ, ಸಾರ್ವಜನಿಕರು ಬೇರೆ, ರಾಜಕಾರಣಿಗಳು ಬೇರೆ ಎನ್ನುವ ಪ್ರಶ್ನೆ ಇಲ್ಲ. ತೆರಿಗೆ ಇಲಾಖೆಯವರು ನಿರಂತರವಾದ ಪ್ರಕ್ರಿಯೆ ಏನಿದೆ ಅದನ್ನು ಮಾಡಿಕೊಂಡಿದ್ದಾರೆ ಎಂದಿದ್ದರು.

BJP shared a old video of HD Kumaraswamys response to IT raid on actors

ತೆರಿಗೆ ಅಧಿಕಾರಿಗಳು ಮಾರ್ಗದರ್ಶಿಗೆ ಅನುಗುಣವಾಗಿ ಸಿದ್ಧತೆ ನಡೆಸಿಯೇ ಹೋಗುತ್ತಾರೆ ಎನ್ನುವುದು ನನಗೆ ಇರುವ ಮಾಹಿತಿ. ತೆರಿಗೆ ಇಲಾಖೆ ಇರುವುದೇ ತೆರಿಗೆ ವಂಚನೆ ಆಗಿದೆ ಎಂಬ ಮಾಹಿತಿ ಬಂದಾಗ ಪರಿಶೀಲನೆ ಮಾಡಲು. ಅವರ ಕರ್ತವ್ಯ ಅವರು ಮಾಡುತ್ತಾರೆ ಅಷ್ಟೆ. ರಾಜಕೀಯ ಪ್ರೇರಿತ ಎನ್ನುವುದಕ್ಕಿಂತ ಅವರ ಕರ್ತವ್ಯ ಅವರು ಮಾಡಿದ್ದಾರೆ. ಮಾಹಿತಿಗಳು ಸರಿಯಾಗಿದ್ದರೆ ಅವರೇನು ಮಾಡಲು ಆಗುತ್ತದೆ ಎಂದು ಹೇಳಿದ್ದರು.

ನಟರಿಗೇನು ವಿಶೇಷ ಕಾನೂನು ಇರುತ್ತದೆ. ನಾಡಿನ ಸಮಸ್ತ ಜನತೆ ದೇಶದ ಕಾನೂನಿನ ವ್ಯವಸ್ಥೆಯಲ್ಲಿ ಜೀವನ ಮಾಡುತ್ತಾರೆ. ಎಲ್ಲ ಇಲಾಖೆಗಳ ಬಗ್ಗೆಯೂ ಈ ರೀತಿ ಕಾನೂನು ಉಲ್ಲಂಘನೆ ಮಾಡಿದರೆ ದಾಳಿಗಳು ನಡೆಯುತ್ತವೆ ಎಂದು ಕುಮಾರಸ್ವಾಮಿ ಹೇಳಿದ್ದರು.

ಗುರುವಾರ ಐಟಿ ದಾಳಿ ನಡೆದ ಬಳಿಕ ಅವರು, ರಾಜ್ಯ ಬಿಜೆಪಿಯ ಒಬ್ಬ ವ್ಯಕ್ತಿ ಹಲವು ಹೆಸರುಗಳನ್ನು ಸಂಗ್ರಹಿಸಿ ಅಮಿತ್ ಶಾಗೆ ಹೆಸರು ಕಳುಹಿಸುತ್ತಾನೆ. ಅಲ್ಲಿಂದ ಐಟಿ ಮುಖ್ಯಸ್ಥ ಬಾಲಕೃಷ್ಣ ಅವರಿಗೆ ಹೆಸರು ಕಳುಹಿಸುತ್ತಾರೆ ಎಂದು ಆರೋಪಿಸಿದ್ದರು. ಬಿಜೆಪಿ ರಾಜಕೀಯ ಉದ್ದೇಶಕ್ಕಾಗಿ ಈ ದಾಳಿ ನಡೆಸಿದೆ ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+