Viral Video: ಸಚಿವ ಜಮೀರ್ ಅಹ್ಮದ್ ಸಖತ್ ರೀಲ್ಸ್: ಬಿಜೆಪಿ ಕಿಡಿ
ಬೆಂಗಳೂರು, ಜುಲೈ 10: ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಅವರ ಹೊಸ ರೀಲ್ಸ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಚಿವ ಜಮೀರ್ ಅಹ್ಮದ್ ತಮ್ಮ ಆಪ್ತರೊಂದಿಗೆ ಹಿಂದಿ ಹಾಡಿಗೆ ಮಾಡಿರುವ ರೀಲ್ಸ್‌ವೊಂದು ಸದ್ಯ ವೈರಲ್ ಆಗುತ್ತಿದ್ದು, ಈ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದರೆ, ಬಿಜೆಪಿ ಈ ಬಗ್ಗೆ ವ್ಯಾಪಕ ಟೀಕೆ ಮಾಡಿದೆ.
ರಾಜ್ಯ ಬಿಜೆಪಿ ಕಾಂಗ್ರೆಸ್ ಸಚಿವರ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, ಆರೋಗ್ಯ ಸಚಿವರು ಕೊನೆಗೂ ತಮ್ಮ ಪೂಲ್ ಪಾರ್ಟಿಯಿಂದ ಹೊರಗುಳಿದಿದ್ದಾರೆ. ಇದೀಗ ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಮತ್ತೊಂದು ಕಾಂಗ್ರೆಸ್ ಸಚಿವರು ನೀಡಿರುವ ಪೋಸ್ ಇಲ್ಲಿದೆ. ರಾಜ್ಯದಲ್ಲಿ ಡೆಂಗ್ಯೂ ಮತ್ತು ಝೀಕಾ ವೈರಸ್ ಸಂಖ್ಯೆ ಹೆಚ್ಚಾಗುತ್ತಿದೆ. ಆರೋಗ್ಯ ಮತ್ತು ಆರ್ಥಿಕ ತುರ್ತು ಪರಿಸ್ಥಿತಿಯನ್ನು ಕರ್ನಾಟಕ ಎದುರಿಸುತ್ತಿದೆ. ಡೆಂಗ್ಯೂ, ಝೀಕಾಗೆ ಸುಮಾರು 7 ರಿಂದ 8 ಮಕ್ಕಳು ಸಾವನ್ನಪ್ಪಿರುವ ವರದಿ ಇದೆ.

ತರಕಾರಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ತರಕಾರಿ ಇಲ್ಲದೇ ಊಟ ನೀಡಲಾಗುತ್ತಿದೆ. ರೈತರು ಪೂರೈಸಿದ ಡೈರಿ ಹಾಲಿನ ಹಣವನ್ನು ಇನ್ನೂ ಪಾವತಿಸಿಲ್ಲ. ಇತರೆ ಪ್ರಮುಖ ನಾಯಕರು ವಾಲ್ಮೀಕಿ ಮತ್ತು ದಲಿತರ ಮೀಸಲು ಹಣವನ್ನು ಲೂಟಿ ಮಾಡುತ್ತಿದ್ದರೆ, ಇತರರು ಈಜು ಕೊಳದಲ್ಲಿ ಆನಂದಿಸುತ್ತಿದ್ದಾರೆ. ಅದರೆ ಸಚಿವರೊಬ್ಬರು ರೀಲ್ಸ್ ಮಾಡುತ್ತಾ ಮಜಾ ಮಾಡುತ್ತಿದ್ದಾರೆ ಎಂದು ಬಿಜೆಪಿ ಜಮೀರ್ ಅಹ್ಮದ್ ಅವರ ರೀಲ್ಸ್ ಹಂಚಿಕೊಂಡು ಕಿಡಿಕಾರಿದೆ.
ದರ್ಶನ್ ಹಾಡಿಗೆ ಸಚಿವ ಜಮೀರ್ ಅಹ್ಮದ್ ರೀಲ್ಸ್
ಇನ್ನು ಇತ್ತೀಚಿಗೆ ಸಚಿವ ಜಮೀರ್ ಅಹ್ಮದ್ ಅವರ ರೀಲ್ಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಟ ದರ್ಶನ್ ಬಂಧನ ಬಳಿಕ ಯಾವ ಪ್ರತಿಕ್ರಿಯೆಯನ್ನು ನೀಡದ ಜಮೀರ್ ಅಹ್ಮದ್ ಖಾನ್ ಆ ಸಮಯದಲ್ಲಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ದರ್ಶನ್ ಅಭಿನಯಿಸಿದ್ದ ಸಿನಿಮಾ ಹಾಡಿನ ರೀಲ್ಸ್ ಹಂಚಿಕೊಂಡಿದ್ದರು.
Now that the Health Minister has finally dried off from his pool party 🏊♂️, here's another Congress Minister striking poses for Instagram reels! 📸 Karnataka is going through a tough phase, facing both a health and financial emergency 🚨. A dengue and Zika outbreak have claimed… pic.twitter.com/DMn9z4xxJF
— BJP Karnataka (@BJP4Karnataka) July 9, 2024
ದರ್ಶನ್ ಅಭಿನಯದ ಲಾಲಿ ಹಾಡು ಸಿನಿಮಾದ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಬೆಕ್ಕಿಗೆ ಆಹಾರ ನೀಡುತ್ತಿರುವ ತಮ್ಮ ವಿಡಿಯೋಗೆ ದರ್ಶನ್ ಸಿನಿಮಾ ಹಾಡನ್ನು ಸೇರಿಸಿದ್ದಾರೆ. ಈ ವಿಡಿಯೋ ಕೂಡ ಸಖತ್ ವೈರಲ್ ಆಗಿತ್ತು. ಈ ಮೂಲಕ ಪರೋಕ್ಷವಾಗಿ ತಾವು ದರ್ಶನ್‌ರನ್ನು ಮರೆತಿಲ್ಲ ಎನ್ನುವ ಸಂದೇಶ ನೀಡಿದ್ದರು ಎಂದು ಅನೇಕರು ಕಮೆಂಟ್ ಮಾಡಿದ್ದರು.












Click it and Unblock the Notifications