ಲೋಕಸಭೆಗೆ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಬೆಂಗಳೂರು, ಜ. 10 : ಲೋಕಸಭೆ ಚುನಾವಣೆಗೆ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ನರೇಂದ್ರ ಮೋದಿ ನಾಯಕತ್ವದಲ್ಲಿ ಲೋಕಸಭೆ ಚುನಾವಣೆ ಕಣಕ್ಕಿಳಿಯಲಿರುವ ಭಾರತೀಯ ಜನತಾ ಪಕ್ಷ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲುವ ಕನಸು ಕಟ್ಟಿಕೊಂಡಿದ್ದು, ಸ್ಪರ್ಧೆಗೆ ಹಲವಾರು ನಾಯಕರ ಹೆಸರುಗಳು ಪ್ರಸ್ತಾವನೆಗೆ ಬಂದಿವೆ. ಅವುಗಳಲ್ಲಿ ಹದಿಮೂರು ಕ್ಷೇತ್ರಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳನ್ನು ಪಟ್ಟಿ ಮಾಡಲಾಗಿದೆ.

ಇನ್ನೊಂದು ವಾರದಲ್ಲಿ ಹೈಕಮಾಂಡ್‌ಗೆ ಎಲ್ಲಾ 28 ಕ್ಷೇತ್ರಗಳ ಸಂಭವೀಯರ ಪಟ್ಟಿಯನ್ನು ಬಿಜೆಪಿ ರವಾನಿಸುವ ಸಾಧ್ಯತೆಯಿದೆ. ಭಾರೀ ಪ್ರತಿಷ್ಠೆಯ ಕಣವಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಐದು ಬಾರಿ ಗೆದ್ದಿರುವ ಅನಂತ್ ಕುಮಾರ್ ಅವರು ಸ್ಪರ್ಧಿಸುವುದು ಹೆಚ್ಚೂಕಡಿಮೆ ಖಚಿತವಾಗಿದೆ. ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಇನ್ಫೋಸಿಸ್ ಸಂಸ್ಥಾಪಕ ನಂದನ್ ನಿಲೇಕಣಿ ಸ್ಪರ್ಧಿಸುವ ಸಾಧ್ಯತೆ ಇದೆ. [ಬದಲಾವಣೆಗೆ ರಾಜಕೀಯ ಉತ್ತಮ ವೇದಿಕೆ : ನಂದನ್ ನಿಲೇಕಣಿ]

BJP releases probable candidates for Lok Sabha Election

ಸಂಭಾವ್ಯ ಅಭ್ಯರ್ಥಿಯ ಹೆಸರು ಕೆಳಗಿನಂತಿವೆ

ಧಾರವಾಡ - ಪ್ರಹ್ಲಾದ್ ಜೋಶಿ [ಮುತಾಲಿಕ್ ಗೆ ಬೆದರಿಕೆ ಕರೆ]
ಬೆಂಗಳೂರು ದಕ್ಷಿಣ - ಅನಂತ್ ಕುಮಾರ್
ಉಡುಪಿ ಚಿಕ್ಕಮಗಳೂರು - ಸದಾನಂದ ಗೌಡ, ಸಿ.ಟಿ.ರವಿ
ಬಿಜಾಪುರ - ರಮೇಶ್ ಜಿಗಜಿಣಗಿ
ಗುಲ್ಬರ್ಗ - ರೇವೂನಾಯಕ ಬೆಳಮಗಿ
ಚಿತ್ರದುರ್ಗ - ಜನಾರ್ಧನ ಸ್ವಾಮಿ
ಬೆಳಗಾವಿ - ಸುರೇಶ್ ಅಂಗಡಿ
ಚಿಕ್ಕೋಡಿ - ರಮೇಶ್ ಕತ್ತಿ
ಬಾಗಲಕೋಟೆ - ಗದ್ದಿಗೌಡರ್, ನಿರಾಣಿ
ಕೊಪ್ಪಳ - ಶಿವರಾಮೇಗೌಡ, ಕರಡಿ ಸಂಗಣ್ಣ
ರಾಯಚೂರು - ಶಿವನಗೌಡ ನಾಯಕ
ದಾವಣಗೆರೆ - ಜಿಎಂ ಸಿದ್ದೇಶ್
ದಕ್ಷಿಣ ಕನ್ನಡ - ನಳಿನ್ ಕುಮಾರ್ ಕಟೀಲ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+