Nandhini Milk: ಹೀಗೂ ಮೋಸ ಮಾಡಬಹುದೆಂದು ಊಹಿಸಲು...
ಬೆಂಗಳೂರು: ರಾಜ್ಯದಲ್ಲಿ ಹಾಲಿನ ದರ ಏರಿಕೆಯಾಗಿದೆ. ಅದರಲ್ಲೂ ಈ ವಿಚಾರ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯಕ್ಕೂ ವೇದಿಕೆ ಒದಗಿಸಿದೆ. ಇದೇ ಸಂದರ್ಭದಲ್ಲಿ BJP ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿರುವ ಟ್ವೀಟ್ ಹಲ್‌ಚಲ್ ಎಬ್ಬಿಸಿದೆ. ಅರೆ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿದ ಟ್ವೀಟ್‌ನಲ್ಲಿ ಏನಿದೆ ಅಂದ್ರಾ? ಮುಂದೆ ಓದಿ.
ರಾಜ್ಯದಲ್ಲಿ ಹಾಲಿನ ಬೆಲೆ ಏರಿಕೆಯಾಗಿದ್ದು, ಆಗಸ್ಟ್ 1ರಿಂದ ಹಾಲು & ಹಾಲಿನ ಉತ್ಪನ್ನಗಳ ದರ ಏರಿಕೆಯಾಗಿದೆ. ಅದರಲ್ಲೂ ಹಾಲಿನ ಮೇಲೆ ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆದರೆ ಇದೀಗ ಟ್ವೀಟ್ ಮಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದು, ತಮ್ಮ ಟ್ವೀಟ್‌ನಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಮುಖಂಡರಿಗೆ ಎಲ್ಲೆಲ್ಲಿ ಹೇಗೇಗೆ ಮೋಸ ಮಾಡುವ ಕಲೆ ಕರಗತವಾಗಿದೆ! ಎಂದು ಆರೋಪಿಸಿದ್ದಾರೆ ಶಾಸಕ ಯತ್ನಾಳ್.

ಹೀಗೂ ಮೋಸ ಮಾಡಬಹುದೆಂದು...
ಅಷ್ಟಕ್ಕೂ ನಂದಿನಿ ಹಾಲಿನ ದರ ಏರಿಕೆಯ ಜೊತೆಯಲ್ಲಿ, ಹಾಲಿನ ಪ್ರಮಾಣವನ್ನು ಕಡಿತ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ. 'ಕಾಂಗ್ರೆಸ್ ಮುಖಂಡರಿಗೆ ಎಲ್ಲೆಲ್ಲಿ ಹೇಗೇಗೆ ಮೋಸ ಮಾಡುವ ಕಲೆ ಕರಗತವಾಗಿದೆ! ನಂದಿನಿ ಹಾಲಿನ ಬೆಲೆ ಏರಿಕೆ ಮಾಡಿದ್ದಲ್ಲದೆ, ಹಾಲಿನ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ! ಹೀಗೂ ಮೋಸ ಮಾಡಬಹುದೆಂದು ಯಾರೂ ಊಹಿಸಲು ಸಾಧ್ಯವಿಲ್ಲ! ಕಾಂಗ್ರೆಸ್ ಕಲೆ!' ಎಂದು ಟ್ವೀಟ್ ಮೂಲಕ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಟ್ವೀಟ್‌ನಲ್ಲಿ ಫೋಟೋ ಕೂಡ ಶೇರ್ ಮಾಡಿದ್ದಾರೆ.
ಕಾಂಗ್ರೆಸ್ ಮುಖಂಡರಿಗೆ ಎಲ್ಲೆಲ್ಲಿ ಹೇಗೇಗೆ ಮೋಸ ಮಾಡುವ ಕಲೆ ಕರಗತವಾಗಿದೆ!
— Basanagouda R Patil (Yatnal) (@BasanagoudaBJP) August 4, 2023
ನಂದಿನಿ ಹಾಲಿನ ಬೆಲೆ ಏರಿಕೆ ಮಾಡಿದ್ದಲ್ಲದೆ, ಹಾಲಿನ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ!
ಹೀಗೂ ಮೋಸ ಮಾಡಬಹುದೆಂದು ಯಾರೂ ಊಹಿಸಲು ಸಾಧ್ಯವಿಲ್ಲ! ಕಾಂಗ್ರೆಸ್ ಕಲೆ! pic.twitter.com/L60A1672ML
ನಂದಿನಿ ಹಾಲಿನ ಕ್ವಾಂಟಿಂಟಿ ಬದಲಾಯ್ತಾ?
ಹೌದು, ಶಾಸಕ ಯತ್ನಾಳ್ ಅವರು ಹಂಚಿಕೊಂಡಿರುವ ಪೋಟೊದಲ್ಲಿರುವುದು ಪಾಶ್ಚೀಕರಿಸಿದ ಕೆನೆ ಭರಿತ ಹಾಲಿನ ಪ್ಯಾಕೇಟ್. ಈ ಪ್ಯಾಕೇಟ್ ಅನ್ನು ಬೆಳಗಾವಿ ಸಹಕಾರ ಹಾಲು ಒಕ್ಕೂಟವು ಪೂರೈಸಿದೆ. ಹಾಲಿನ ಪ್ರಮಾಣ ಜಾಗದಲ್ಲಿ 450 ML ಎಂದು ನಮೂದಿಸಲಾಗಿದೆ. ಅಷ್ಟಕ್ಕೂ ಇಂದು ಬೆಳಗ್ಗೆಯಿಂದಲೇ ನಂದಿನ ಹಾಲಿನ 450 ಎಂಎಲ್ ಪೊಟ್ಟಣ ವೈರಲ್ ಆಗುತ್ತಿದೆ. ಬೆಳಗಾವಿಯ ವ್ಯಾಪ್ತಿಯನ್ನು ಹೊರತು ಪಡಿಸಿ ಉಳಿದ ಕಡೆ ಪೂರೈಕೆಯಾಗುತ್ತಿರುವ ಹಾಲಿನ ಪಾಕೇಟ್‌ಗಳ ಮೇಲೆಲ್ಲಾ 500 ಎಂಎಲ್ ಎಂದು ನಮೂದಿಸಲಾಗಿದೆ. ಹೀಗಾಗಿ ಗೊಂದಲವೂ ಸೃಷ್ಟಿಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.

ಒಟ್ನಲ್ಲಿ ಹಾಲಿನ ದರ ಏರಿಕೆ ನಡುವೆ ಹಾಲಿನ ಪ್ರಮಾಣದಲ್ಲೂ ಕಡಿತ ಮಾಡಿದ ಕುರಿತು ಇದೀಗ ಬಿಜೆಪಿ ಆರೋಪ ಮಾಡುತ್ತಿದೆ. ಆದರೆ ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹೀಗಾಗಿ ನಂದಿನಿ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮತ್ತೊಂದು ಸುತ್ತಿನ ಕಾಳಗ ನಡೆಯುವ ಮುನ್ಸೂಚನೆ ಸಿಗುತ್ತಿದೆ. ಆದರೆ ಜನರು ಮಾತ್ರ ಈ ವೈರಲ್ ಆಗಿರುವ ನಂದಿನಿ ಹಾಲಿನ ಪ್ಯಾಕೆಟ್ ಹಿಂದಿನ ಸತ್ಯ ತಿಳಿಯಲು ಬಯಸುತ್ತಿದ್ದಾರೆ. ಇದು ಸತ್ಯವೋ? ಇಲ್ಲ ಸುಳ್ಳೋ? ಎಂಬ ಚರ್ಚೆ ಶುರುವಾಗಿದೆ. ಹೀಗಾಗಿ ಸಂಬಂಧಪಟ್ಟವರು ಈ ಕುರಿತಾಗಿ ಸೂಕ್ತ ಉತ್ತರ ನೀಡಬೇಕಿದೆ.

ಹಲವು ವರ್ಷಗಳಿಂದ ಕೇಳಿಬರುತ್ತಿದ್ದ ಹಾಲಿನ ದರ ಹೆಚ್ಚಳದ ಬೇಡಿಕೆಗೆ ಈಗ ಕಾಂಗ್ರೆಸ್ ಸರ್ಕಾರ ಅಂತಿಮ ಮುದ್ರೆ ಒತ್ತಿದೆ. ಆಗಸ್ಟ್ 1ರಿಂದ ಹೊಸ ದರವೂ ಜಾರಿಗೆ ಬಂದಾಗಿದೆ. ಈ ಮೂಲಕ ರಾಜ್ಯದ ಜನ ಹೆಚ್ಚಿನ ಬೆಲೆ ನೀಡಿ ಹಾಲು ಸೇರಿ ಹಾಲಿನ ಉತ್ಪನ್ನ ಖರೀದಿ ಮಾಡುತ್ತಿದ್ದಾರೆ. ಕೆಲವರು ಹಾಲಿನ ಬೆಲೆ ಹೆಚ್ಚಳದ ಬಗ್ಗೆ ಬೇಸರ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ನಿರ್ಧಾರದ ಬಗ್ಗೆ ಸಮರ್ಥನೆ ನೀಡುತ್ತಿದ್ದಾರೆ. ಈ ಎಲ್ಲಾ ಚರ್ಚೆಗಳ ನಡುವೆ ಹೊಸ ವಿಚಾರವೂ ಎಂಟ್ರಿ ಕೊಟ್ಟಾಗಿದೆ. ಇದೇ ಸಂದರ್ಭದಲ್ಲೇ ವೈರಲ್ ಆಗಿರುವ ನಂದಿನಿ ಉತ್ಪನ್ನದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.












Click it and Unblock the Notifications