50 ಲಕ್ಷ ದಾಟಿದ ಬಿಜೆಪಿ ಸದಸ್ಯರ ಸಂಖ್ಯೆ ಶಾ ಶ್ಲಾಘನೆ
ಬೆಂಗಳೂರು, ಮಾ.9: ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ ಎನಿಸಿಕೊಳ್ಳುವ ಮಹದಾಸೆ ಹೊಂದಿರುವ ಬಿಜೆಪಿ ಪಕ್ಷಕ್ಕೆ ಕರ್ನಾಟಕದಿಂದಲೂ 50 ಲಕ್ಷಕ್ಕೂ ಅಧಿಕ ಸದಸ್ಯರನ್ನು ಸೇರಿಸಿದೆ. ಕರ್ನಾಟಕ ಜೆಪಿ ಘಟಕದ ಸಾಧನೆಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅಭಿನಂದನೆ ವ್ಯಕ್ತಪಡಿಸಿದ್ದಾರೆ.
ಬಿಜೆಪಿಗೆ ರಾಜ್ಯದಿಂದ ಅರ್ಧ ಕೋಟಿಗೂ ಹೆಚ್ಚು ಮಂದಿ ಸೇರ್ಪಡೆಗೊಂಡಿದ್ದಾರೆ. ಭಾನುವಾರದ ಗಣತಿಯಂತೆ 52,50,064 ಸದಸ್ಯರು ಬಿಜೆಪಿ ಸದಸ್ಯತ್ವ ಪಡೆದಿದ್ದಾರೆ. ವ್ಯಾಪಕ ಪ್ರಮಾಣದಲ್ಲಿ ಸದಸ್ಯತ್ವ ನೋಂದಣಿ ಕಾರ್ಯವನ್ನು ಬಿಜೆಪಿ ನಾಯಕರು, ಮುಖಂಡರು, ಕಾರ್ಯಕರ್ತರು ಕೈಗೊಂಡಿದ್ದಾರೆ. [ಬಿಜೆಪಿ ಪಾರ್ಟಿ ಹುಂಡಿಗೆ ಹಣ ಎಲ್ಲಿಂದ ಬಿತ್ತು? ]
ಸಭೆ, ಸಮಾರಂಭಗಳನ್ನು ಆಯೋಜಿಸುವುದಲ್ಲದೆ, ಮೊಬೈಲ್, ಮಿಸ್ ಕಾಲ್, ಆನ್‌ಲೈನ್ ಮೂಲಕವೂ ಸದಸ್ಯತ್ವ ನೋಂದಣಿಗೆ ಅವಕಾಶವನ್ನು ಕಲ್ಪಿಸಲಾಗಿದೆ.
ರಾಜ್ಯದಲ್ಲಿ ಒಂದು ಕೋಟಿ ಸದಸ್ಯತ್ವ ನೋಂದಣಿ ಮಾಡುವ ಗುರಿಯನ್ನು ಬಿಜೆಪಿ ಹೊಂದಿದೆ. ಅದೇ ರೀತಿ ದೇಶದಲ್ಲಿ 10 ಕೋಟಿಗೂ ಹೆಚ್ಚು ಸದಸ್ಯತ್ವ ನೋಂದಣಿ ಮಾಡುವ ಮಹದಾಸೆ ಹೊಂದಲಾಗಿದೆ. ಮಾರ್ಚ್ ಅಂತ್ಯಕ್ಕೆ ಸದಸ್ಯತ್ವ ನೋಂದಣಿ ಮುಕ್ತಾಯವಾಗಲಿದ್ದು, ಆನಂತರ ಪರಿಶೀಲನಾ ಕಾರ್ಯ ನಡೆಯಲಿದೆ.

ಕೇವಲ 20 ದಿನಗಳು ಮಾತ್ರ ಬಾಕಿ ಉಳಿದಿದ್ದು, ಇನ್ನೂ 50 ಲಕ್ಷ ಸದಸ್ಯತ್ವ ನೋಂದಣಿ ಮಾಡುವುದು ಬಿಜೆಪಿ ಗುರಿಯಾಗಿದೆ. ಕಳೆದ ಮೂರು ತಿಂಗಳಿನಿಂದ ಸದಸ್ಯತ್ವ ನೋಂದಣಿ ತ್ವರಿತಗತಿಯಲ್ಲಿ ಸಾಗಿದ್ದರೂ ಅರ್ಧ ಕೋಟಿ ನೋಂದಣಿಯಾಗಿದೆ. ಅದರೆ, ಇನ್ನು 20ದಿನಗಳಲ್ಲಿ ಉಳಿದ ಗುರಿಯನ್ನು ತಲುಪುದು ಕಷ್ಟಸಾಧ್ಯ. [ಕ್ಷಣಾರ್ಧದಲ್ಲಿ ಬಿಜೆಪಿ ಸದಸ್ಯರಾಗಬೇಕೇ? ಇಲ್ಲಿ ಕ್ಲಿಕ್ಕಿಸಿ]
ಬೆಂಗಳೂರು ನಗರ ಜಿಲ್ಲೆ ಶೇ.65ರಷ್ಟು ಸದಸ್ಯತ್ವ ನೋಂದಣಿ ಯನ್ನು ಮಾಡಲಾಗಿದೆ. ದಾಸರಹಳ್ಳಿ, ಮಹದೇವಪುರ, ಕೆ.ಆರ್.ಪುರ ಹಾಗೂ ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಬಿಜೆಪಿ ಸದಸ್ಯತ್ವ ನೋಂದಣಿಯಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆ ಅಧ್ಯಕ್ಷ ಹಾಗೂ ಶಾಸಕ ಮುನಿರಾಜು ತಿಳಿಸಿದರು.
State BJP Membership review meeting happening at HQ, Bengaluru pic.twitter.com/VGSSqluQj0
— BJP Karnataka (@bjpkarnataka) March 8, 2015 ಹುಬ್ಬಳ್ಳಿ-ಧಾರವಾಡದಲ್ಲಿ ಮಾತ್ರ ಬೆಂಗಳೂರಿನಂತೆ ಒಂದು ಲಕ್ಷಕ್ಕೂ ಹೆಚ್ಚು ಸದಸ್ಯತ್ವ ನೋಂದಣಿಯಾಗಿದೆ.ಬೆಂಗಳೂರು ನಗರ ಜಿಲ್ಲೆಗೆ 12 ಲಕ್ಷ ಗುರಿ ನೀಡಿದ್ದು, ಇದುವರೆಗೂ ಎಂಟೂವರೆ ಲಕ್ಷ ಸದಸ್ಯರನ್ನು ನೋಂದಣಿ ಮಾಡಲಾಗಿದೆ. ಅದೇ ರೀತಿ ಬೆಂಗಳೂರು ಮಹಾನಗರಕ್ಕೆ 10 ಲಕ್ಷ ಸದಸ್ಯತ್ವ ನೋಂದಣಿ ಗುರಿ ನೀಡಲಾಗಿದ್ದು, 6 ಸದಸ್ಯತ್ವ ನೋಂದಣಿ ಕಾರ್ಯ ಆಗಿದೆ ಎಂದು ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.












Click it and Unblock the Notifications