ಲೆಕ್ಕಾಚಾರ : ಬಿಜೆಪಿ ಪಾರ್ಟಿ ಹುಂಡಿಗೆ ಹಣ ಎಲ್ಲಿಂದ ಬಿತ್ತು?

ನವದೆಹಲಿ, ಫೆ.24: ಭಾರತೀಯ ಜನತಾ ಪಾರ್ಟಿಗೆ ಹರಿದು ಬರುತ್ತಿರುವ ಅಪಾರವಾದ 'ಪಾರ್ಟಿ ಫಂಡ್' ನತ್ತ ಕಣ್ಣಿಟ್ಟಿರುವ ಸರ್ಕಾರೇತರ ಸಂಸ್ಥೆಗಳು ನೀಡಿರುವ ವರದಿ ಹುಬ್ಬೇರಿಸುತ್ತದೆ. ವರ್ಷದಿಂದ ವರ್ಷಕ್ಕೆ ಪಾರ್ಟಿ ಹುಂಡಿ ಗಾತ್ರ ದೊಡ್ಡದಾಗುತ್ತಿದ್ದು, ನೂರಾರು ಕೋಟಿ ರು ಗಳು ಹುಂಡಿಗೆ ಬೀಳುತ್ತಿದ್ದು, ಯಾರು ಹೆಚ್ಚು ಹಣ ಹಾಕಿದ್ದಾರೆ ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ.

ಅಸೋಸಿಯೇಷನ್ಸ್ ಆಫ್ ಡೆಮೋಕ್ರಾಟಿಕ್ ರಿಫಾರ್ಮ್ಸ್(ಎಡಿಆರ್) ಹಾಗೂ ನ್ಯಾಷನಲ್ ಎಲೆಕ್ಷನ್ ವಾಚ್ (NEW) ಬಿಜೆಪಿಗೆ ಕಳೆದ ಆರ್ಥಿಕ ವರ್ಷದಲ್ಲಿ ಬಿಜೆಪಿಗೆ ಸಂದಾಯವಾಗಿರುವ ದೇಣಿಗೆಯ ಪಟ್ಟಿಯನ್ನು ಬಿಚ್ಚಿಟ್ಟಿದೆ. ಶೇ 92ರಷ್ಟು ದೇಣಿಗೆ ಹರಿದು ಬರುತ್ತಿರುವುದು ಕಾರ್ಪೋರೇಟ್ ಕಂಪನಿಗಳ ಕಡೆಯಿಂದ ಎಂದು ವರದಿಯಲ್ಲಿ ವಿವರಿಸಲಾಗಿದೆ.

BJP's biggest donors were corporate houses: Report

ಬಿಜೆಪಿಗೆ ತನ್ನ ಪಾರ್ಟಿ ಫಂಡ್ ವಿವರವನ್ನು ಚುನಾವಣಾ ಆಯೋಗಕ್ಕೆ ಡಿಸೆಂಬರ್ 20, 2014ರಲ್ಲೇ ಸಲ್ಲಿಸಿದೆ. ಇದರ ಪೂರ್ಣ ವಿವರಗಳನ್ನು ಸರ್ಕಾರೇತರ ಸಂಸ್ಥೆಗಳು ಕಲೆ ಹಾಕಿ ಜನತೆಯ ಮುಂದಿಟ್ಟಿವೆ.

ಬಿಜೆಪಿಗೆ 20,000 ರು ಗೂ ಅಧಿಕ ಮೊತ್ತದ ದೇಣಿಗೆ ನೀಡಿದವವರ ಪೈಕಿ ಶೇ 92ರಷ್ಟು ಕಾರ್ಪೋರೇಟ್ ಸಂಸ್ಥೆ/ಉದ್ಯಮಿಗಳೇ ಇದ್ದಾರೆ. ಒಟ್ಟಾರೆ 704 ದೇಣಿಗೆ ಕಾರ್ಪೊರೇಟ್ ವಲಯದಿಂದ ಬಂದಿದೆ. 157.84 ಕೋಟಿ ರು ಬಿಜೆಪಿಗೆ ಕಳೆದ ಆರ್ಥಿಕ ವರ್ಷದಲ್ಲಿ ಸಿಕ್ಕಿದೆ.

ವರ್ಷದಿಂದ ವರ್ಷಕ್ಕೆ ಪಾರ್ಟಿ ಹುಂಡಿ ಗಾತ್ರ ದೊಡ್ಡದಾಗುತ್ತಿದ್ದು, ನೂರಾರು ಕೋಟಿ ರು ಗಳು ಹುಂಡಿಗೆ ಬೀಳುತ್ತಿದ್ದು, ಯಾರು ಹೆಚ್ಚು ಹಣ ಹಾಕಿದ್ದಾರೆ ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ.

20 ಸಾವಿರ ರು.ಗೂ ಅಧಿಕ ಮೊತ್ತದಿಂದ ಎಣಿಕೆ:
ರಾಷ್ಟ್ರೀಯ ಪಕ್ಷಗಳು ಪ್ರತಿ ವರ್ಷ ತಮ್ಮ ಪಕ್ಷಕ್ಕೆ ಬಂದಿರುವ ಪಾರ್ಟಿ ಫಂಡ್ ವಿವರಗಳನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸುತ್ತಾ ಬಂದಿವೆ. ಕಳೆದ ಆರ್ಥಿಕ ವರ್ಷ 2013-14ರಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದೇಣಿಗೆ ವಿವರಗಳಲ್ಲಿ 20 ಸಾವಿರ ರು ಗೂ ಅಧಿಕ ಮೊತ್ತದಿಂದ ಎಣಿಕೆ ಆರಂಭವಾಗುತ್ತದೆ.

* 20 ಸಾವಿರ ರು.ಗೂ ಅಧಿಕ ಮೊತ್ತದ ದೇಣಿಗೆ ಪಡೆದ ರಾಷ್ಟ್ರೀಯ ಪಕ್ಷಗಳ ಒಟ್ಟಾರೆ ಕಲೆಕ್ಷನ್ 247.79 ಕೋಟಿ ರು ದಾಟುತ್ತದೆ.
* ಎಲ್ಲಾ ಪಕ್ಷಗಳ ಲೆಕ್ಕಾಚಾರ ನೋಡಿದರೆ ಒಟ್ಟು 2361ರಷ್ಟು ದೇಣಿಗೆ ನಡೆದಿದೆ.
* ಬಿಜೆಪಿ ದೇಣಿಗೆ ಪಟ್ಟಿಯಲ್ಲಿ 20 ಸಾವಿರ ರು.ಗೂ ಅಧಿಕ ಮೊತ್ತದ ದೇಣಿಗೆ ನೀಡಿರುವವರ ಪೈಕಿ ಶೇ92 ಕಾರ್ಪೊರೇಟ್ ಸಂಸ್ಥೆಗಳಿಂದ ಸಿಕ್ಕಿದೆ.
* ಬಿಜೆಪಿ ದೇಣಿಗೆ ಸರಾಸರಿ 13.19 ಲಕ್ಷ ಪ್ರತಿ ವಿಶಿಷ್ಟ ದಾನಿಗೆ (ಕಳೆದ ಆರ್ಥಿಕ ವರ್ಷದಲ್ಲಿ ವಿವಿಧ ಕಡೆ ದಾನ ಮಾಡದೆ ಒಂದೇ ಪಕ್ಷಕ್ಕೆ ಹಣ ನೀಡಿದವರು)

* ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸರಾಸರೊ 11.70 ಪ್ರತಿ ವಿಶಿಷ್ಟ ದಾನಿ.
* ಎನ್ ಸಿಪಿ 1 ಕೋಟಿ, ಸಿಪಿಐ : 3.23 ಲಕ್ಷ ಹಾಗೂ ಸಿಪಿಎಂ 4.03 ಲಕ್ಷ ಪ್ರತಿ ದಾನಿ.

ದೇಣಿಗೆ : ಪಕ್ಷಗಳ ಬಲಾಬಲ
ಈ ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 2013-14 ಆರ್ಥಿಕ ವರ್ಷದಲ್ಲಿ ಬಿಜೆಪಿ, ಐಎನ್ ಸಿ, ಎನ್ ಸಿಪಿ ಹಾಗೂ ಸಿಪಿಐ ದೇಣಿಗೆ ಪ್ರಮಾಣ ಶೇ 158ರಷ್ಟು ಏರಿಕೆ ಕಂಡಿದೆ.
* ಕಳೆದ ವರ್ಷಕ್ಕೆ ಹೋಲಿಸಿದರೆ ಬಿಜೆಪಿ ಈ ಅವಧಿಯಲ್ಲಿ 87.67 ಕೋಟಿ ರು ಹೆಚ್ಚಳ ದೇಣಿಗೆ ಪಡೆದುಕೊಂಡು 170.86 ಕೋಟಿ ರುಗೆ ಏರಿಕೆಯಾಗಿದೆ(ವರ್ಷದಿಂದ ವರ್ಷಕ್ಕೆ 105% ಏರಿಕೆ)

ಬಿಜೆಪಿಗೆ ಕೋಟಿ ರು ದೇಣಿಗೆ ನೀಡಿದವರು:
* 1 ಕೋಟಿ ರು ನಿಂದ 10 ಕೋಟಿ ರು ನೀಡಿದವರ ಪಟ್ಟಿಯಲ್ಲಿ 32 ಜನರಿದ್ದಾರೆ. ಒಟ್ಟು 55.86 ಕೋಟಿ ರು ಬಂದಿದೆ.
* ಭಾರ್ತಿ ಸಮೂಹದ ಸತ್ಯ ಎಲೆಟ್ರೋಲ್ ಟ್ರಸ್ಟ್ ಅತ್ಯಧಿಕ 41.84 ಕೋಟಿ ರು ದೇಣಿಗೆ ನೀಡಿದೆ.
* ಸ್ಟರ್ಲೈಟ್ ಕೈಗಾರಿಕ ಭಾರತ ಲಿ 15 ಕೋಟಿ ರು, ಕ್ರೈನ್ ಇಂಡಿಯಾ ಲಿ 7.50 ಕೋಟಿ ರು ನೀಡಿದೆ.

ವಿವಿಧ ರಾಜ್ಯ, ದೇಶಗಳಿಂದ ದೇಣಿಗೆ

* ದೆಹಲಿಯಿಂದ ಬಿಜೆಪಿಗೆ ಸುಮಾರು 45.21 ಕೋಟಿ ರು ಸಿಕ್ಕಿದೆ
* ಕಾಂಗ್ರೆಸ್ಸಿಗೆ ದೆಹಲಿಯಿಂದ 39.05 ಕೋಟಿ, ಸಿಪಿಐಗೆ 54.6 ಲಕ್ಷ, ಸಿಪಿಎಂ ಗೆ 1.88 ಕೋಟಿ ಸಿಕ್ಕಿದೆ.

* ಉಳಿದಂತೆ ಬಿಜೆಪಿಗೆ ಗುಜರಾತಿನಿಂದ 23.25 ಕೋಟಿ ರು, ಮಹಾರಾಷ್ಟ್ರದಿಂದ 22.24 ಕೋಟಿ ರು, ಸಿಂಗಪುರದಿಂದ 8.50 ಲಕ್ಷ ರು ಸಂದಾಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+