ಬಿಜೆಪಿಯ ಅಜ್ಞಾನಿಗಳು ಕಾಂಗ್ರೆಸ್ ಬಳಿ ಆಡಳಿತಾತ್ಮಕ ಸಲಹೆ ಪಡೆಯಲಿ

ಅನೈತಿಕ ಸರ್ಕಾರದಲ್ಲಿ ಸಂವಿಧಾನಾತ್ಮಕವಾಗಿ ಸಚಿವರಾಗಿರುವ ಕೆ.ಎಸ್.ಈಶ್ವರಪ್ಪನವರು ಯಾವುದೋ ಬೀದಿ ರೌಡಿಯ ರೀತಿಯಲ್ಲಿ ಮಾತನಾಡುವುದನ್ನು ಬಿಟ್ಟು ನಿಮ್ಮ ಪಕ್ಷದ ಅಜ್ಞಾನಿಗಳೆಲ್ಲಾ ಸೇರಿಕೊಂಡು ಜನ ಸಾಮಾನ್ಯರ ಬದುಕಲ್ಲಿ ಉಂಟು ಮಾಡಿರುವ ಸಂಕಷ್ಟಗಳನ್ನು ಪರಿಹರಿಸಲು ಕಾಂಗ್ರೆಸ್ ಪಕ್ಷದ ಬಳಿ ಸರಿಯಾದ ಆಡಳಿತಾತ್ಮಕ ಸಲಹೆಗಳನ್ನು ಪಡೆಯಿರಿ.

ಕಾರಣ, ನಿಮಗೆ ಮತ್ತು ನಿಮ್ಮ ಪಕ್ಷಕ್ಕೆ ಹೀಗೆ ರೌಡಿಗಳಂತೆ ಮಾತನಾಡುವುದು ಮತ್ತು ದ್ವೇಷ ಹಬ್ಬಿಸಿ ಸಮಾಜವನ್ನು ಹಾಳು ಮಾಡುವುದು ಬಿಟ್ಟರೆ ಮತ್ತೇನೂ ಬರುವುದಿಲ್ಲ ಎಂಬುದು ನಮಗೆ ಗೊತ್ತಿದೆ.

ವಾಸ್ತವವಾಗಿ ಹೇಳುವುದಾದರೆ ಕೊರೊನಾ ಸಂದರ್ಭದಲ್ಲಿ ನಿಮ್ಮಂತಹ ಅವಿವೇಕಿಗಳ ಆಡಳಿತ ವೈಫಲ್ಯದಿಂದಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎನ್ನದೇ ಈ ರಾಜ್ಯದ ಎಲ್ಲಾ ಪಕ್ಷಕ್ಕೆ ಸೇರಿದ ಜನ ಸಾಮಾನ್ಯರು ತತ್ತರಿಸಿ ಹೋಗಿದ್ದು, ಪಕ್ಷಾತೀತವಾಗಿ, ಧರ್ಮಾತೀತವಾಗಿ ಮತ್ತು ಜಾತ್ಯಾತೀತವಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

BJP leaders should take administration advices from Congress says Dr H C Madadevappa

ಹಿಂದೂಗಳ ರಕ್ಷಣೆ ಎಂದು ಗಂಟಲು ಹರಿದುಕೊಳ್ಳುತ್ತಿದ್ದ ನಿಮಗೆ ಅವರ ರಕ್ಷಣೆ ಇರಲಿ ಒಂದು ಆಕ್ಸಿಜನ್ ಬೆಡ್ ಹೊಂದಿಸಲು ಆಗಲಿಲ್ಲ ನಿಮ್ಮ ಯೋಗ್ಯತೆಗೆ. ನನ್ನ ಪ್ರಕಾರ ಆಡಳಿತಾತ್ಮಕವಾಗಿ ಅಂದೇ ನಿಮ್ಮ ಸರ್ಕಾರ ಸತ್ತು ಹೋಗಿದೆ.

ಇನ್ನು ಕೊರೊನಾ ಬಳಿಕ ಮುರಿದ ಬದುಕನ್ನು ಕಟ್ಟಿಕೊಳ್ಳುವುದರಲ್ಲಿಯೇ ತಲ್ಲೀನವಾಗಿರುವ ನಿಮ್ಮ ಮತ್ತು ಎಲ್ಲಾ ಪಕ್ಷದ ಜನರಿಗೆ ನಿಮ್ಮ ಯೋಗ್ಯತೆ ಏನೆಂಬುದು ಚೆನ್ನಾಗಿ ಅರ್ಥವಾಗಿದ್ದು ಅವರ ದೈನಂದಿನ ಬದುಕಿನ ಕಷ್ಟಗಳ ಮುಂದೆ ನಿಮ್ಮ ಈ ದ್ವೇಷ ಹರಡುವ ಮಾತುಗಳಿಗೆ, "ಒಂದು ಕೊಟ್ಟರೆ, ಎರಡು ಕೊಡುತ್ತೇವೆ," ಎಂಬ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ.

ಏಕೆಂದರೆ ಜನ ಸಾಮಾನ್ಯರು ಮತ್ತು ಪಕ್ಷದ ಕಾರ್ಯಕರ್ತರು ನೀವು ಹೇಳಿದಂತೆ ಹೊಡಿ ಬಡಿ ಜಗಳ ಮತ್ತು ಹಿಂಸಾಚಾರವನ್ನು ಎಂದಿಗೂ ಇಷ್ಟಪಡುವುದಿಲ್ಲ. ಇದೆಲ್ಲಾ ನಿಮ್ಮಂತಹ ಹುಳಿತೇಗಿನ ಮಂದಿಯ ಸೊಕ್ಕಿನ ಪ್ರಲಾಪವಷ್ಟೇ.

ಹೀಗಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ಜನ ಸಾಮಾನ್ಯರ ಸಂಕಷ್ಟಗಳಿಗೆ ಪರಿಹಾರ ನೀಡುವುದಷ್ಟೇ ನಿಮಗೆ ಉಳಿದಿರುವ ಅನಿವಾರ್ಯ ಆಯ್ಕೆಯಾಗಿದೆ ಎಂಬುದನ್ನು ನಿಮ್ಮ ಬುದ್ಧಿಗೇಡಿ ತಲೆಯಲ್ಲಿ ಇಟ್ಟುಕೊಂಡು ನೆಟ್ಟಗೆ ಕಾರ್ಯ ನಿರ್ವಹಿಸಿ, ಇಲ್ಲವೇ ರಾಜೀನಾಮೆ ಕೊಟ್ಟು ಹೊರಡಿ.

ಸದಾ ಅಸಂವಿಧಾನಿಕವಾಗಿ ಮಾತನಾಡುವ ಮತ್ತು ಸಾರ್ವಜನಿಕ ಜೀವನದಲ್ಲಿ ಇರಲು ಲಾಯಕ್ಕಿಲ್ಲದ ಇಂತಹವರ ರಾಜೀನಾಮೆಯನ್ನು ಪಡೆಯಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು ಈ ಮೂಲಕ ಆಗ್ರಹಿಸುತ್ತೇನೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+